ಮಂಗಳೂರು: ಚರ್ಚ್‍ನ (Church) ಪಾದ್ರಿಯೊಬ್ಬ ವೃದ್ಧ ದಂಪತಿ ಮೇಲೆ ಹಲ್ಲೆ ನಡೆಸಿದ ಘಟನೆ ವಿಟ್ಲ (Vitla) ಪೊಲೀಸ್ (Police) ಠಾಣಾ ವ್ಯಾಪ್ತಿಯ ಅಡ್ಯನಡ್ಕದ ಮನೇಲಾ ಎಂಬಲ್ಲಿ ನಡೆದಿದೆ.
ಪೆರಿಯಲ್ತಡ್ಕನ ಚರ್ಚ್ ಒಂದರ ಪಾದ್ರಿ ನೆಲ್ಸನ್ ಒಲಿವೇರಾ ಹಲ್ಲೆ ನಡೆಸಿದ ವ್ಯಕ್ತಿಯಾಗಿದ್ದಾನೆ. ಜೋರ್ಜ್ ಮಾಂತೇರಿಯೋ (79) ಮತ್ತು ಅವರ ಪತ್ನಿ ಫಿಲೋಮಿನಾ (72) ಹಲ್ಲೆಗೊಳಗಾದ ವೃದ್ಧ ದಂಪತಿ ಎಂದು ತಿಳಿದು ಬಂದಿದೆ. ಘಟನೆ ಫೆ.29 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: RCB – MI ಹೈವೋಲ್ಟೇಜ್ ಕದನ; ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಾಂಬ್ ಸ್ಕ್ವಾಡ್ ತೀವ್ರ ತಪಾಸಣೆ
ವೃದ್ಧರನ್ನು ಪಾದ್ರಿ ಕಾಲಿನಿಂದ ಒದೆಯುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾದ್ರಿಯ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿನ ಬಾಂಬ್ ಬ್ಲಾಸ್ಟ್ ಹಿಂದಿದ್ಯಾ ಐಸಿಸ್ ಕೈವಾಡ?