– ಸುಮಾರು 2 ಗಂಟೆ ಚಿತ್ರಹಿಂಸೆ
ಭೋಪಾಲ್: ತನ್ನ ಖಾಸಗಿ ಭಾಗಕ್ಕೆ ಸುಡುವ ಕಬ್ಬಿಣದ ರಾಡ್ ಇಡಲಾಗಿದ್ದು, ಬಳಿಕ ಮೆಣಸಿನ ಪುಡಿ ಹಾಕಿ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರು ತನ್ನ ಪತಿ ಮತ್ತು ಆತನ ಕುಟುಂಬಸ್ಥರ ವಿರುದ್ಧ ದೂರು ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಈ ಘಟನೆ ಮಧ್ಯಪ್ರದೇಶ (Madhyapradesh) ರಾಜ್‌ಗಢ್‌ನಲ್ಲಿ ನಡೆದಿದೆ. ರೋಹಿತ್ ರುಹೇಲಾ ಎಂಬ ವ್ಯಕ್ತಿ ಸಂತ್ರಸ್ಥ ಮಹಿಳೆಯ ಮನೆಗೆ ಬಂದು ಸ್ಟೀಮ್ ಯಂತ್ರವನ್ನು ಕೇಳಿದ್ದಾನೆ. ಮಹಿಳೆ ಗೇಟ್ ಬಳಿ ಕಾಯಲು ಹೇಳಿದಾಗ, ಅವನು ಬಾಗಿಲು ಮುಚ್ಚಿ, ಅವಳ ಕೋಣೆಗೆ ಪ್ರವೇಶಿಸಿ ಕಿರುಕುಳ ನೀಡಲು ಪ್ರಯತ್ನಿಸಿದನು. ಇದನ್ನು ನೋಡಿ ಮಹಿಳೆ ಮೇಲೆ ಅನುಮಾನ ಪಟ್ಟ ಪತಿಯ ಕುಟುಂಬಸ್ಥರು ಎರಡು ಗಂಟೆಗಳ ಕಾಲ ದೈಹಿಕ ದೌರ್ಜನ್ಯ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.ಇದನ್ನೂ ಓದಿ: ಹತ್ಯೆ ಮಾಡಲೆಂದು ಕಬ್ಬಿನ ಗದ್ದೆಗೆ ಕರ್ಕೊಂಡು ಬಂದಿದ್ರು: ರಾತ್ರಿ ಏನೇನಾಯ್ತು ವಿವರಿಸಿದ ಸಿಟಿ ರವಿ
Advertisement
Advertisement
ದೂರಿನ ಪ್ರಕಾರ, ಪತಿ, ಅತ್ತಿಗೆ, ಅತ್ತೆ ಮತ್ತು ಮಾವ ಸಂತ್ರಸ್ತೆಗೆ ಸುಮಾರು ಎರಡು ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ್ದಾರೆ. ಒದೆಯುವುದು, ಗುದ್ದುವುದು ಸೇರಿದಂತೆ ವಿವಸ್ತ್ರಗೊಳಿಸಿ ದೈಹಿಕ ಹಿಂಸೆ ನೀಡಿದ್ದಾರೆ. ತನ್ನ ಖಾಸಗಿ ಭಾಗಗಳು, ತೊಡೆ ಮತ್ತು ದೇಹದ ಇತರ ಭಾಗಗಳಿಗೆ ಅತ್ತೆ ಕಾದ ಕಬ್ಬಿಣದ ರಾಡ್‌ನಿಂದ ಸುಟ್ಟಿದ್ದಾರೆ. ಮಾವ ಆಕೆಯ ಖಾಸಗಿ ಭಾಗಗಳಿಗೆ ಮೆಣಸಿನ ಪುಡಿಯನ್ನು ಹಚ್ಚಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.
Advertisement
ಮಹಿಳೆಯ ದೂರಿನ ಅನ್ವಯ, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಸೆಕ್ಷನ್ 115 (2) ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದಕ್ಕಾಗಿ ಸೆಕ್ಷನ್ 74 ಮಹಿಳೆಯ ಮೇಲೆ ಹಲ್ಲೆಗಾಗಿ, ಸೆಕ್ಷನ್ 64 ಅತ್ಯಾಚಾರಕ್ಕಾಗಿ ಮತ್ತು ಸೆಕ್ಷನ್ 3(5) ಸಾಮಾನ್ಯ ಉದ್ದೇಶಗಳ ಅಡಿಯಲ್ಲಿ ದೂರು ದಾಖಲಾಗಿದೆ.ಇದನ್ನೂ ಓದಿ: ನೆಲಮಂಗಲದಲ್ಲಿ ಭೀಕರ ಅಪಘಾತ – ಪ್ರವಾಸಕ್ಕೆ ಹೊರಟಿದ್ದ ಒಂದೇ ಕುಟುಂಬದ 6 ಮಂದಿ ದುರ್ಮರಣ