ಕನ್ನಡ ಕಿರುತೆರೆ, ಹಿರಿತೆರೆಯಲ್ಲಿ ಆಕ್ಟೀವ್ ಆಗಿರುವ ಅನು ಗೌಡ (Actress Anu Gowda) ಅವರ ಮೇಲೆ ಜಮೀನು ವಿವಾದದ ವಿಚಾರವಾಗಿ ಹಲ್ಲೆ ನಡೆದಿದೆ. ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳ ಮೂಲಕ ಪರಿಚಿತರಾಗಿರುವ ಅನು ಗೌಡ ಮೇಲೆ ಜಮೀನು ವಿಚಾರಕ್ಕೆ ಸ್ಥಳಿಯ ನಿವಾಸಿಗಳಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ಇದನ್ನೂ ಓದಿ:ನೀನು ಆಂಟಿಯಾಗಿ 1 ವರ್ಷದ ಅನುಭವವಿದೆ- ಬರ್ತ್‌ಡೇಯಂದು ಪತ್ನಿ ಕಾಲೆಳೆದ ನಟ ಸುದರ್ಶನ್
Advertisement
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾಸ್ಪಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸದ್ಯ ನಟಿ ಅನು ಗೌಡ ಸಾಗರದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಮೀನಿನ ವಿಚಾರದಲ್ಲಿ ಸ್ಥಳೀಯ ನೀವಾಸಿಗಳಾದ ನೀಲಮ್ಮ- ಮೋಹನ್ ಎನ್ನುವರು ಅನು ಗೌಡ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸಾಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಸ್ಪಡಿಯಲ್ಲಿರುವ ಜಮೀನನ್ನು ನಟಿ ಅನು, ಅಪ್ಪ ಅಮ್ಮ ನೋಡಿಕೊಳ್ಳುತ್ತಿದ್ದು, ಅನು ಗೌಡ ಆಗಾಗ ಬೆಂಗಳೂರಿನಿಂದ ಬಂದು ಹೋಗುತ್ತಿದ್ದರು. ಆದರೆ, ಜಮೀನು ವಿವಾದ ವಿಚಾರಕ್ಕೆ ಅನು ಗೌಡ ಮೇಲೆ ಹಲ್ಲೆ ಮಾಡಲಾಗಿದೆ.
Advertisement
Advertisement
ನಟಿ ಅನು ಗೌಡ ತಮಿಳು ಸೇರಿದಂತೆ ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ವಿಷ್ನುವರ್ಧನ್, ಶಿವಣ್ಣ, ಅಪ್ಪು ಹಾಗೂ ಸುದೀಪ್ ಸಿನಿಮಾಗಳಲ್ಲಿ ಸೈಡ್ ಆಕ್ಟಿಂಗ್ ಮಾಡಿದ್ದಾರೆ. ಕನ್ನಡದಲ್ಲಿ ಸವಿಸವಿ ನೆನಪುಮ ಭೂಗತ, ವಿಷ್ಣುವರ್ಧನ್ ಜೊತೆಗೆ ಸ್ಕೂಲ್ ಮಾಸ್ಟರ್, ಕಿಚ್ಚ ಸುದೀಪ್ ಜೊತೆ ಕೆಂಪೇಗೌಡ ಚಿತ್ರದಲ್ಲಿ ನಟಿಸಿದ್ದಾರೆ. ‘ದಂಡಂ ದಶಗುಣಂ’ ಚಿತ್ರದಲ್ಲಿ ರಮ್ಯಾ ಸಹೋದರಿ ಪಾತ್ರದಲ್ಲಿ ನಟಿಸಿದ್ದಾರೆ. ಸುಗ್ರೀವ, ಹುಡುಗರು ಸಿನಿಮಾದಲ್ಲಿ ನಟಿಸಿದ್ದಾರೆ.
Advertisement