ಉಡುಪಿ: ಭಾರತೀಯನ ಮೇಲೆ ಆಫ್ರಿಕಾದ ಮೊಜಾಂಬಿಕ್ ನಲ್ಲಿ ಮಾನಸಿಕ ಕಿರುಕುಳ ನೀಡಿ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಉಡುಪಿಯ ಸಂತೆಕಟ್ಟೆಯ ಆನಂದ್ ಕೃಷ್ಣ ಸಿಂಗ್ ಎಂಬವರ ಮೇಲೆ ಆಫ್ರಿಕಾದ ಮೋಜಾಂಬಿಕ್‍ನಲ್ಲಿ ಹಲ್ಲೆಯಾಗಿ ಗೃಹ ಬಂಧನಕ್ಕೆ ತಳ್ಳಲಾಗಿದೆ.
Advertisement
Advertisement
ಆನಂದ್ ಸಿಂಗ್ ಕೆಲಸ ಮಾಡ್ತಿದ್ದ ಅಂಗಡಿಯಲ್ಲಿ ಹಣ ಕಳ್ಳತನವಾಗಿದೆ ಎಂಬ ಕಾರಣಕ್ಕೆ ಆನಂದ್ ಮೇಲೆ ಅಂಗಡಿ ಮಾಲೀಕ ಕಳ್ಳತನದ ಆರೋಪ ಹೊರಿಸಿದ್ದಾರೆ. ಅಲ್ಲದೇ ಮಾಲೀಕ ಮತ್ತು ಅವರ ಮಗ ಮನಸೋ ಇಚ್ಛೆ ಥಳಿಸಿದ್ದಾರೆ. ಇವರ ಹಿಂಸೆಯಿಂದ ಬೇಸತ್ತ ಆನಂದ್ ಅವರ ಸ್ನೇಹಿತರನ್ನು ಫೇಸ್ ಬುಕ್ ಮೂಲಕ ಸಂಪರ್ಕಿಸಿದ್ದಾರೆ.
Advertisement
ಆನಂದ್ ಕೃಷ್ಣ ಸಿಂಗ್ ಅವರ ಭಾರತದ ಸ್ನೇಹಿತರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ್ದಾರೆ. ಕೂಡಲೇ ಸ್ಪಂದಿಸಿದ ಸಚಿವೆ ಸುಷ್ಮಾ ಸ್ವರಾಜ್ ಆಫ್ರಿಕಾ ರಾಯಭಾರಿ ಜೊತೆ ಮಾತಾಡಿ, ಕೂಡಲೇ ಆನಂದ್ ಅವರನ್ನು ವಾಪಾಸ್ ಕರೆತರುವ ವ್ಯವಸ್ಥೆ ಮಾಡಲು ಆದೇಶಿದ್ದು, ಆನಂದ್ ಸಿಂಗ್ ಇಂದು ಭಾರತಕ್ಕೆ ಬಂದಿಳಿಯುವ ಸಾಧ್ಯತೆ ಇದೆ ಎಂದು ಆನಂದ್ ಗೆಳೆಯರು ಮಾಹಿತಿ ನೀಡಿದ್ದಾರೆ.
Advertisement
ಆನಂದ್ ಈ ಹಿಂದೆ ಉಡುಪಿಯ ಕೆಲ ಕಡೆಗಳಲ್ಲಿ ಕಬಾಬ್ ಅಂಗಡಿ ನಡೆಸುತ್ತಿದ್ದರು. ಸಂತೆಕಟ್ಟೆಯ ಜಿಮ್ ಗೆ ಬರುತ್ತಿದ್ದರು ಎಂದು ಕೆಲವರು ತಿಳಿಸಿದ್ದಾರೆ. ಆದರೆ ಉಡುಪಿಯಲ್ಲಿ ಎಷ್ಟು ವರ್ಷಗಳಿಂದ ಇದ್ದರು. ಇಲ್ಲಿ ಅವರ ಸಂಬಂಧಿಗಳು ಇದ್ದಾರೆಯೇ ಎಂಬ ಮಾಹಿತಿ ಲಭ್ಯವಾಗಿಲ್ಲ.
ಆನಂದ್ ಸಿಂಗ್ ಗೆಳೆಯರು ಆತನ ಮೇಲೆ ನಡೆದ ಹಲ್ಲೆಯ ಫೋಟೋಗಳನ್ನು ಫೇಸ್ ಬುಕ್ ಗೆ ಅಪ್‍ಲೋಡ್ ಮಾಡಿದ್ದಾರೆ.
Please do needful in name of humanity and help a soul. @IndianExpress @ndtv #Indiangovernment @SushmaSwaraj @narendramodi https://t.co/uOY4EZyqTT
— Sujay Simha (@sujay_sharma) May 31, 2017
High Commission has established contact with Mr Anand and trying to resolve the issue.
— India in Mozambique (@IndiainMoz) May 31, 2017