ಬೆಳಗಾವಿ: ತನ್ನದೇ ಹೋಟೆಲ್ ಕಾರ್ಮಿಕನ ಮೇಲೆ ಬಿಜೆಪಿ ಮುಂಖಡನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿರುವ ಹೋಟೆಲ್ ವೊಂದರಲ್ಲಿ ಭಾನುವಾರ ಕಾರ್ಮಿಕನ ಮೇಲೆ ಹಲ್ಲೆ ನಡೆದಿತ್ತು. ಪ್ರಕರಣ ಸಂಬಂಧ ಬಿಜೆಪಿ ಮಾಜಿ ಪುರಸಭೆ ಅಧ್ಯಕ್ಷ, ಹೋಟೆಲ್ ಮಾಲೀಕ ಉಮೇಶ್ ಬಂಟೋಡ್ಕರ್ ಹಾಗೂ ಈತನ ಸಹಚರರಾದ ಹನುಮಂತ, ಸತೀಶ, ರಾವಸಾಬ್ ಎಂಬವರನ್ನು ಬಂಧಿಸಲಾಗಿದೆ.
ಕೆಲಸಕ್ಕೆ ಬರಲಿಲ್ಲವೆಂದು ಹೋಟೆಲ್ ಕಾರ್ಮಿಕ ರಮೇಶ್ ಆಜೂರ ಎಂಬವರ ಮೇಲೆ ಹಲ್ಲೆ ನಡೆಸಲಾಗಿತ್ತು. ಪರಿಣಾಮ ರಮೇಶ್ ಗೆ ಗಂಭೀರ ಗಾಯಗಳಾಗಿದ್ದು, ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಟೇಲ್ ಮಾಲೀಕ ಉಮೇಶ್ ಹಾಗೂ ಬೆಂಬಲಿಗರು ದೊಣ್ಣೆ, ಕೈಯಿಂದ ಹಲ್ಲೆ ಮಾಡಿದ್ದಾಗಿ ರಮೇಶ್ ಆರೋಪಿಸಿದ್ದಾರೆ.
ಘಟನೆ ಸಂಬಂಧ ಸಿಆರ್‍ಪಿಸಿ ಕಾಯ್ದೆಯಡಿ ನಾಲ್ವರ ಬಂಧನವಾಗಿದ್ದು, ಇದೀಗ ಆರೊಪಿಗಳನ್ನು ಗೋಕಾಕ್ ಸಬ್ ಜೈಲಿಗೆ ಅಥಣಿ ಪೊಲೀಸರು ರವಾನಿಸಿದ್ದಾರೆ.