ಬೆಂಗಳೂರು: ಟೆಕ್ಕಿಯೋರ್ವ (Techie) ಪ್ರೀತಿಸಿದ ಯುವತಿಯ ಮೇಲೆ ಕಬ್ಬಿಣದ ರಾಡ್ನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಗರದ ಮೈಕೋ ಲೇಔಟ್ನಲ್ಲಿ ನಡೆದಿದೆ.
ರವಿ ಕುಮಾರ್ (28) ಎಂಬಾತ ಹಲ್ಲೆ ನಡೆಸಿರುವ ಆರೋಪಿ. ಆತ ಕಳೆದ ಒಂದು ವರ್ಷದಿಂದ ಇಂದಿರಾನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಅದೇ ಕಂಪನಿಯಲ್ಲಿ ಇಂಟರ್ನ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಇತ್ತೀಚೆಗೆ ಬೇರೆ ಕಂಪನಿಗೆ ಸೇರಿಕೊಂಡಿದ್ದ ಯುವತಿ ರವಿಯ ಕರೆಗಳಿಗೆ ಸ್ಪಂದಿಸುತ್ತಿರಲಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರಿಂದ ಗುಂಡಿನ ದಾಳಿ – ಮೂವರು ಯೋಧರು ಹುತಾತ್ಮ
Advertisement
Advertisement
ಇದರಿಂದ ಕೋಪಗೊಂಡಿದ್ದ ರವಿಗೆ ಯುವತಿಯ ಮೇಲೆ ಅನುಮಾನ ಮೂಡಿತ್ತು. ಇದರಿಂದ ಪ್ಲಾನ್ ಮಾಡಿ ಆಗಸ್ಟ್ 2ರಂದು ಪ್ರೇಯಸಿಯನ್ನ ತನ್ನ ಪಿಜಿ ಬಳಿ ಕರೆಸಿಕೊಂಡಿದ್ದಾನೆ. ಈ ವೇಳೆ ಕಬ್ಬಿಣದ ರಾಡ್ನಿಂದ ಯುವತಿಯ ತಲೆಯ ಮೇಲೆ ಹಲ್ಲೆ ಮಾಡಿದ್ದಾನೆ. ತಕ್ಷಣ ಯುವತಿಯನ್ನು ಸ್ಥಳೀಯರು ನಿಮ್ಹಾಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
Advertisement
Advertisement
ಸದ್ಯ ಆಸ್ಪತ್ರೆಯಲ್ಲಿ ಯುವತಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಘಟನೆ ಸಂಬಂಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿ ರವಿ ಕುಮಾರ್ನನ್ನು ಪೊಲೀಸರು (Police) ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬೇಲ್ ಮೇಲೆ ರಿಲೀಸ್ ಆಗ್ತಿದ್ದಂತೆ ರೌಡಿಶೀಟರ್ ಮರ್ಡರ್ – ಮಗ ಬರ್ತಾನೆ ಅಂತ ಮಟನ್ ಚಾಪ್ಸ್ ಮಾಡ್ತಿದ್ಲು ತಾಯಿ!
Web Stories