ಎಣ್ಣೆ ಸಾಲ ಕೊಡದಿದ್ದಕ್ಕೆ ಬಾರ್ ಮಾಲೀಕನ ಮೇಲೆ ಹಲ್ಲೆ – ಆರೋಪಿ ಅರೆಸ್ಟ್

Public TV
1 Min Read
manvi police station

ರಾಯಚೂರು: ಜಿಲ್ಲೆಯ ಮಾನ್ವಿ (Manvi) ಪಟ್ಟಣದಲ್ಲಿ ಮದ್ಯದಂಗಡಿಯಲ್ಲಿ (Bar) ಎಣ್ಣೆ ಸಾಲ (Debt) ಕೊಡದಿದಕ್ಕೆ ಬಾರ್ ಮಾಲೀಕನ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಬಾರ್ ಶಾಪ್ ಮಾಲೀಕ ಮಲ್ಲಿಕಾರ್ಜುನಗೌಡರ ಮೇಲೆ ಸ್ಥಳೀಯ ನಿವಾಸಿ ಚಾಂದ್ ಎಂಬಾತನಿಂದ ಮಾರಣಾಂತಿಕ ಹಲ್ಲೆ ನಡೆದಿದೆ.

ಹಲ್ಲೆ ದೃಶ್ಯಗಳು ಬಾರ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಪದೇ ಪದೇ ಬಾರ್ ಶಾಪ್‌ನಲ್ಲಿ ಸಾಲ ಕೇಳುತ್ತಿದ್ದ ಆರೋಪಿ ಚಾಂದ್‌ಗೆ ಮದ್ಯದಂಗಡಿ ಮಾಲೀಕ ಸಾಲ ಕೊಡಲ್ಲ ಎಂದಿದ್ದಕ್ಕೆ ಕಿರಿಕ್ ಮಾಡಿ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾಗಿರೋ ಮಲ್ಲಿಕಾರ್ಜುನಗೌಡ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ನನ್ನ ವಿರುದ್ಧ ರಾಘವೇಂದ್ರ ಷಡ್ಯಂತ್ರ – ಬಂಧಿಸುವಂತೆ ಈಶ್ವರಪ್ಪ ದೂರು

ಮೇ 9 ರಂದು ನಡೆದಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ಚಾಂದ್ ವಿರುದ್ಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಜೈಲಿನಿಂದ ಹೊರಬರುತ್ತಿದ್ದಂತೆ ರೇವಣ್ಣ ದೇಗುಲ ಯಾತ್ರೆ!

Share This Article