ಮೈಸೂರು: ಆಸ್ತಿ ವಿಚಾರದಲ್ಲಿ ಮೈದುನ ಅತ್ತಿಗೆಗೆ ಚಾಕು ಇರಿದ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ತ್ರಿವೇಣಿ ಸರ್ಕಲ್ ನಲ್ಲಿ ನಡೆದಿದೆ.
ಶುಭ ಹಲ್ಲೆಗೊಳಗಾದ ಅತ್ತಿಗೆ. ಮೈದುನ ರವಿಕುಮಾರ್‌ಗೆ ಸಾರ್ವಜನಿಕರಿಂದ ಧರ್ಮದೇಟು ನೀಡಿದ್ದಾರೆ. ಗಾಯಗೊಂಡ ಅತ್ತಿಗೆಯನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈದುನ ರವಿಕುಮಾರ್ ನನ್ನು ಉದಯಗಿರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇವರು ಮೈಸೂರಿನ ಎನ್.ಆರ್ ಮೊಹಲ್ಲಾದ ಕುರಿಮಂಡಿ ನಿವಾಸಿಗಳು. ಆಸ್ತಿ ವಿಚಾರದಲ್ಲಿ ಇಂದು ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಉಪನೊಂದಣಾಧಿಕಾರಿಗಳ ಕಚೇರಿಗೆ ಆರೋಪಿ ರವಿಕುಮಾರ್ ಹಾಗೂ ಅವರ ಅಣ್ಣ ಸುರೇಶ್ ಹಾಗೂ ಅತ್ತಿಗೆ ಶುಭ ಬಂದಿದ್ದರು. ಆಸ್ತಿ ನೋಂದಣಿ ವೇಳೆ ಸಹಿ ಹಾಕಲು ರವಿಕುಮಾರ್ ನಿರಾಕರಣೆ ಮಾಡಿದ್ದಾನೆ.
ಈ ವೇಳೆ ಅತ್ತಿಗೆ ಶುಭ ಹಾಗೂ ಮೈದುನನ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ಕೋಪಗೊಂಡ ರವಿಕುಮಾರ್ ಅತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಮಧ್ಯಪ್ರವೇಶಿಸಿದ ಸ್ಥಳೀಯರು ರವಿಕುಮಾರ್‌ಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉದಯಗಿರಿ ಠಾಣಾ ಪೊಲೀಸರು ಚಾಕು ಇರಿದ ಮೈದುನ ರವಿಕುಮಾರ್ ನನ್ನು ವಶಕ್ಕೆ ಪಡೆದಿದ್ದಾರೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]