– ಪತಿ ಮಲಗಿದ ನಂತ್ರ ಪತ್ನಿಯ ನೀಚ ಕೃತ್ಯ
ಲಕ್ನೋ: ಮಹಿಳೆಯೊಬ್ಬಳು ಪತಿಯ ಸಹೋದರ ಸೆಕ್ಸ್ ಮಾಡುವುದನ್ನು ನಿಲ್ಲಿಸಿದ್ದಕ್ಕೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ರಾಯ್‍ಬರೇಲಿ ಜಿಲ್ಲೆಯಲ್ಲಿ ನಡೆದಿದೆ.
ಮಹಿಳೆಯೊಬ್ಬಳು ತನ್ನ ಪತಿ ಮತ್ತು ಮೈದುನ ಜೊತೆ ವಾಸಿಸುತ್ತಿದ್ದಳು. ಆದರೆ ಪತಿ ಕೆಲಸಕ್ಕೆ ಮನೆಯಿಂದ ಹೊರಗೆ ಹೋದಾಗ ಪತ್ನಿ ಮನೆಯಲ್ಲಿದ್ದ ಮೈದುನನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಇವರಿಬ್ಬರ ಸಂಬಂಧ ಪತಿಗೆ ಗೊತ್ತಿರಲಿಲ್ಲ. ಹೀಗಾಗಿ ಪತಿ ಮಲಗಿ ನಿದ್ದೆ ಮಾಡಿದ ನಂತರ ಪ್ರತಿ ರಾತ್ರಿಯೂ ಮಹಿಳೆ ತನ್ನ ಮೈದುನ ಜೊತೆ ಸೆಕ್ಸ್ ಮಾಡುತ್ತಿದ್ದಳು.
Advertisement
Advertisement
ಇತ್ತೀಚೆಗೆ ಒಂದು ರಾತ್ರಿ ಮಹಿಳೆ ತನ್ನ ಮೈದುನನ ಜೊತೆ ರೊಮ್ಯಾನ್ಸ್ ಮಾಡುತ್ತಿದ್ದಳು. ಆದರೆ ಮೈದುನ ಸೆಕ್ಸ್ ಮಾಡುವುದನ್ನು ನಿಲ್ಲಿಸಿದ್ದಾನೆ. ಆಗ ಮಹಿಳೆ, ಮೈದುನನ ಬಳಿ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯಿಸಿದ್ದಾಳೆ. ಇದಕ್ಕೆ ಮೈದುನ ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ಅಡುಗೆ ಮನೆಯಲ್ಲಿದ್ದ ಚಾಕುವನ್ನು ತಂದು ಮೈದುನ ಮೇಲೆ ಹಲ್ಲೆ ಮಾಡಿದ್ದಾಳೆ.
Advertisement
ತಕ್ಷಣ ಸಹೋದರರನ್ನು ಮಹಿಳೆಯ ಪತಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಸದ್ಯಕ್ಕೆ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡು ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿದ್ದಾನೆ. ಘಟನೆಯಲ್ಲಿ ಗಾಯಗೊಂಡಿರುವ ಮೈದುನನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.