ಬೆಂಗಳೂರು: ನಗರದ ಯುಬಿ ಸಿಟಿಯ ಫರ್ಜಿಕೆಫೆ ಯಲ್ಲಿ ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕೃತ ಗೊಳಿಸಿದೆ.
Advertisement
ಸಿಸಿಟಿವಿನಲ್ಲಿ ಹಲ್ಲೆ ನಡೆಸಿರೋದು ಸ್ಪಷ್ಟವಾಗಿದೆ. ತನಿಖಾಧಿಕಾರಿಗಳಿಗೆ ಸಿಗದ ಡಿಸ್ಚಾರ್ಜ್ ಸಮ್ಮರಿ ಆರೋಪಿಯ ತಂದೆಗೆ ಸಿಕ್ಕಿರುವುದು ಸಿಕ್ಕಿರೋದು ಅನುಮಾನ ಮೂಡುತ್ತದೆ ಅಂತ ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಪೀಠ ನಲಪಾಡ್ ಜಾಮೀನು ಅರ್ಜಿ ವಜಾಗೊಳಿಸಿದೆ. ಇದನ್ನೂ ಓದಿ: ನಲಪಾಡ್‍ಗೆ ಜೈಲೇ ಗತಿ: ಆರೋಪಿಯ ಪರ ವಕೀಲರ ವಾದ ಏನಿತ್ತು? ಕೋರ್ಟ್ ಕಲಾಪದ ಡಿಟೇಲ್ ಇಲ್ಲಿದೆ
Advertisement
ದೂರು ದಾಖಲಿಸಿದ್ದರೂ, ಎಫ್‍ಐಆರ್ ಹಾಕುವಲ್ಲಿ ವಿಳಂಬ, ಸಿಸಿಟಿವಿಯಲ್ಲಿ ಮೊದಲು ನಲಪಾಡ್ ಹಲ್ಲೆ ನಡೆಸಿರುವ ದೃಶ್ಯ ಸೆರೆ, ವಿದ್ವತ್ ವೈದ್ಯಕೀಯ ವರದಿ ಹ್ಯಾರಿಸ್ ಕೈ ಸೇರಿದ್ದು, ಈ ಹಿಂದೆ ಈ ರೀತಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಪ್ರಕರಣಗಳನ್ನು ಉಲ್ಲೇಖಿಸಿ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.