ಗುವಾಹಟಿ: ಅಸ್ಸಾಂ ಮೂಲದ ಟೀ ಎಸ್ಟೇಟ್‌ನಲ್ಲಿ ಬೆಳೆದ 1 ಕೆ.ಜಿ ಸಾಂಪ್ರದಾಯಿಕ ಗೋಲ್ಡನ್ ಟಿಪ್ ಟೀ ಪುಡಿ ಬರೋಬ್ಬರಿ 99,999 ರೂ.ಗೆ ಹರಾಜಾಗಿದ್ದು, ದೇಶದಲ್ಲೇ ಅತಿ ಹಚ್ಚು ಬೆಲೆಗೆ ಮಾರಾಟವಾದ ಟೀ ಪುಡಿಯಾಗಿದೆ.
ಕಳೆದ ವರ್ಷ ಮನೋಹರಿ ಗೋಲ್ಡ್ ಟೀ ಪುಡಿ 75,000 ರೂ.ಗೆ ಮಾರಾಟವಾಗಿತ್ತು. ಆದರೆ ಈ ವರ್ಷ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
Advertisement
ಗುವಾಹಟಿ ಮೂಲದ ಸಗಟು ವ್ಯಾಪಾರಿ ಸೌರಭ್ ಟೀ ಟ್ರೇಡರ್ಸ್, ಮನೋಹರಿ ಟೀ ಎಸ್ಟೇಟ್‌ನಲ್ಲಿ ಬೆಳೆದ ವಿಶೇಷ ಟೀ ಬ್ರ್ಯಾಂಡ್ ನ ಟೀ ಪುಡಿಯನ್ನು ಖರೀದಿಸಿ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಈ ವಿಶೇಷ ತಳಿಯನ್ನು 2018ರಿಂದ ಉತ್ಪಾದನೆ ಮಾಡಲಾಗುತ್ತಿದೆ. ಟೀ ಎಲೆಗಳ ಬದಲಾಗಿ ಟೀ ಮೊಗ್ಗುಗಳಿಂದ ಮನೋಹರಿ ಗೋಲ್ಡ್ ಟೀ ಪುಡಿಯನ್ನು ತಯಾರಿಸುತ್ತಾರೆ. ಈ ಪ್ರಕ್ರಿಯೆಯು ಬಹಳ ಕಷ್ಟಕರವಾಗಿರುತ್ತದೆ.
Advertisement
Advertisement
ಈ ಬಗ್ಗೆ ಮನೋಹರಿ ಟೀ ಎಸ್ಟೇಟ್‌ನ ಮಾಲೀಕ ರಾಜನ್ ಲೋಹಿಯಾ ಮಾತನಾಡಿ, ಟೀ ಉತ್ಪಾದನೆಗೆ ಅಸ್ಸಾಂನ ಮಣ್ಣು ಮತ್ತು ಹವಾಮಾನ ಹೆಚ್ಚು ಪೂರಕವಾಗಿದೆ. ಗುಣಮಟ್ಟದ ಟೀ ಪುಡಿಗಳನ್ನು ಗ್ರಾಹಕರಿಗೆ ನೀಡಲು ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತೇವೆ. ಇದರಲ್ಲಿ ನಾವು ಎಂದಿಗೂ ರಾಜಿ ಆಗುವುದಿಲ್ಲ. ಮತ್ತೊಮ್ಮೆ ದಾಖಲೆಯಲ್ಲಿ ಟೀ ಪುಡಿ ಮಾರಾಟವಾಗುವ ಮೂಲಕ ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದೇವೆ ಎಂದು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: ಯಾವುದೇ ಖರ್ಚಿಲ್ಲದೇ ಮುಂಬಯಿಂದ ಅಬುಧಾಬಿಗೆ ಹೋದ
ಮನೋಹರಿ ಟೀ ಎಸ್ಟೇಟ್ 1,000 ಎಕರೆ ಪ್ರದೇಶದಲ್ಲಿದ್ದು, ಸುಮಾರು 600 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. 2018ರಲ್ಲಿ ಮನೋಹರಿ ಬ್ರಾಂಡ್‌ನ 1 ಕೆ.ಜಿ ಟೀ ಪುಡಿ 39,000 ರೂ.ಗೆ ಸೌರಭ್ ಟೀ ಟ್ರೇಡರ್ಸ್ ಖರೀದಿಸಿತ್ತು. 2019ರಲ್ಲಿ ಇದೇ ಕಂಪನಿ 50,000 ರೂ. ಬೆಲೆಗೆ ಖರೀದಿಸಿತ್ತು. ಆದರೆ 2020ರಲ್ಲಿ 1 ಕೆ.ಜಿ ಟೀ ಪುಡಿಯನ್ನು 75,000 ರೂ.ಗೆ ವಿಷ್ಣು ಟೀ ಕಂಪನಿ ಹರಾಜಿಲ್ಲಿ ಪಡೆದುಕೊಂಡಿತ್ತು. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ತಪ್ಪಿಸಿಕೊಂಡ ಸಿಂಹಗಳು!