ಗುವಾಹಟಿ: ತಪ್ಪಿತಸ್ಥ ಮಹಿಳೆಯೊಬ್ಬಳಿಗೆ ಶಿಕ್ಷೆ ನೀಡಲು ಆಕೆಯ ಗುಪ್ತಾಂಗಕ್ಕೆ ಮಹಿಳೆಯರೇ ಖಾರದಪುಡಿ ಹಾಕಿದ ಅಮಾನವೀಯ ಘಟನೆ ಅಸ್ಸಾಂನ ಕರಿಂಗಂಜ್ ಜಿಲ್ಲೆಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 19 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಸೆಪ್ಟೆಂಬರ್ 10ರಂದು ಘಟನೆ ನಡೆದಿದ್ದು, ಶುಕ್ರವಾರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಹೆಚ್ಚಾಗಿ ಮಹಿಳೆಯರೇ ಇದ್ದಾರೆ.
Advertisement
ಆಗಿದ್ದೇನು?:
ಅಸ್ಸಾಂ-ಮಿಜೋರಾಂ ಗಡಿಭಾಗದಲ್ಲಿ ಮಹಿಳೆಯೊಬ್ಬಳು ಅಕ್ರವಾಗಿ ಮದ್ಯ ಮಾರಾಟ ಮಾಡುತ್ತಿದ್ದಳು. ಜೊತೆಗೆ ಆಕೆಯು ಸಮಾಜ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಳು. ಹೀಗಾಗಿ ಕೆಲ ಸ್ಥಳೀಯ ಮಹಿಳೆಯರು ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಸೆಪ್ಟೆಂಬರ್ 10ರಂದು ಬೆಳಗ್ಗೆ ಆರಂಭದಲ್ಲಿ, ಕೆಲವರು ಮನೆಗೆ ನುಗ್ಗಿ, ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ, ಚಿತ್ರಹಿಂಸೆ ನೀಡಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾಳೆ. ಕರಿಮ್ಗಂಜ್ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಈ ಪ್ರಕರಣ ದಾಖಲಿಸಿಕೊಂಡಿದೆ.
Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 19 ಮಹಿಳೆಯರನ್ನು ಬಂಧಿಸಲಾಗಿದೆ. ತನಿಖೆ ಚುರುಕುಗೊಂಡಿದ್ದು, ಮುಖ್ಯ ಆರೋಪಿಗಳು ಯಾರು ಎನ್ನುವುದನ್ನು ಸದ್ಯದಲ್ಲಿಯೇ ಪತ್ತೆ ಹಚ್ಚಲಾಗುವುದು. ಪ್ರಕರಣ ಪ್ರಮುಖ ಕಾರಣ ಏನು ಎನ್ನುವುದು ಖಚಿತವಾಗಿಲ್ಲ ಎಂದು ಪೊಲೀಸ್ ಅಧೀಕ್ಷಕ ಗೌರವ್ ಉಪಾಧ್ಯಾಯ್ ತಿಳಿಸಿದ್ದಾರೆ.
Advertisement
ಹಲ್ಲೆ ಮಾಡಿದ ಮಹಿಳೆಯರನ್ನು ಹೊರತುಪಡಿಸಿ, ಕೃತ್ಯವನ್ನು ಸೆರೆ ಹಿಡಿದವರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆ ಅಡಿ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv