Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಂಟೈನರ್, ಕಾರು ಮಧ್ಯೆ ಅಪಘಾತ – ಅಸ್ಸಾಂನ ಲೇಡಿ ಸಿಂಗಂ ಸಾವು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | ಕಂಟೈನರ್, ಕಾರು ಮಧ್ಯೆ ಅಪಘಾತ – ಅಸ್ಸಾಂನ ಲೇಡಿ ಸಿಂಗಂ ಸಾವು

Crime

ಕಂಟೈನರ್, ಕಾರು ಮಧ್ಯೆ ಅಪಘಾತ – ಅಸ್ಸಾಂನ ಲೇಡಿ ಸಿಂಗಂ ಸಾವು

Public TV
Last updated: May 17, 2023 12:14 pm
Public TV
Share
2 Min Read
JUNMONI RABHA
SHARE

ದಿಸ್ಪುರ: ಕಂಟೈನರ್ ಟ್ರಕ್‌ಗೆ (Container Truck) ಕಾರು ಡಿಕ್ಕಿ ಹೊಡೆದ ಪರಿಣಾಮ ಲೇಡಿ ಸಿಂಗಂ ಎಂದೇ ಖ್ಯಾತಿಯಾಗಿದ್ದ ಅಸ್ಸಾಂನ ಮಹಿಳಾ ಸಬ್ ಇನ್ಸ್ಪೆಕ್ಟರ್ (SI) ಜುನ್ಮೋನಿ ರಾಭಾ (Junmoni Rabha) ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲಿಯಾಬೋರ್ ಉಪವಿಭಾಗದ ಜಖಲಬಂಧ ಪೊಲೀಸ್ ಠಾಣೆ ವ್ಯಾಪ್ತಿಯ ಸರುಭುಗಿಯಾ ಗ್ರಾಮದಲ್ಲಿ ಅಪಘಾತ (Accident) ಸಂಭವಿಸಿದ್ದು, ಹಿಂದಿ ಪೊಲೀಸ್ ಸಿನಿಮಾಗಳ ನಂತರ ‘ಲೇಡಿ ಸಿಂಗಂ’ ಹಾಗೂ ‘ದಬಂಗ್ ಕಾಪ್’ ಎಂಬ ಹೆಸರುಗಳಿಂದ ಜನಪ್ರಿಯವಾಗಿರುವ ಜುನ್ಮೋನಿ ರಾಭಾ (30) ಮೃತಪಟ್ಟಿದ್ದಾರೆ. ಅಪಘಾತ ಸಂಭವಿಸಿದ ವೇಳೆ ರಾಭಾ ತಮ್ಮ ಖಾಸಗಿ ಕಾರಿನಲ್ಲಿ ಏಕಂಗಿಯಾಗಿ ಹೋಗುತ್ತಿದ್ದು, ಪೊಲೀಸ್ ಸಮವಸ್ತ್ರ ಧರಿಸಿರಲಿಲ್ಲ. ನಸುಕಿನ ಜಾವ 2:30ರ ಸುಮಾರಿಗೆ ಮಾಹಿತಿ ತಿಳಿದ ಪೋಲಿಸ್ ತಂಡವು ಕೂಡಲೇ ಘಟನೆ ನಡೆದ ಸ್ಥಳಕ್ಕೆ ಧಾವಿಸಿ ರಾಭಾ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರನ್ನು ಪರೀಕ್ಷಿಸಿದ ವೈದ್ಯರು ರಾಭಾ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಂಬುಲೆನ್ಸ್ ಕೊಡದ ಸರ್ಕಾರಿ ಆಸ್ಪತ್ರೆ- ಮಗಳ ಶವವನ್ನು ಬೈಕಿನಲ್ಲೇ ಸಾಗಿಸಿದ ತಂದೆ!

POLICE JEEP 1

ಮೊರಿಕೊಲಾಂಗ್ ಪೊಲೀಸ್ ಔಟ್‌ಪೋಸ್ಟ್‌ನ ಉಸ್ತುವರಿಯಾಗಿದ್ದ ರಾಭಾ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಹೆಸರುವಾಸಿಯಾಗಿದ್ದರು. ಅಲ್ಲದೇ ಹಣಕಾಸಿನ ಅಕ್ರಮಗಳಲ್ಲಿ ತೊಡಗಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಭಾರೀ ಸುದ್ದಿಯಾಗಿದ್ದರು. ಇದನ್ನೂ ಓದಿ: ಕಾಶ್ಮೀರಿ ಪ್ರತ್ಯೇಕತಾವಾದಿ ಹತ್ಯೆಗೈದು ತಲೆಮರೆಸಿಕೊಂಡಿದ್ದ ಮುಜಾಹಿದ್ದೀನ್‌ ಉಗ್ರರು 33 ವರ್ಷಗಳ ಬಳಿಕ ಅರೆಸ್ಟ್

2022ನೇ ವರ್ಷದ ಜೂನ್ ತಿಂಗಳಿನಲ್ಲಿ ತನ್ನ ಮಾಜಿ ಪ್ರಿಯಕರನೊಂದಿಗೆ ಸೇರಿಕೊಂಡು ರಭಾ ಲೀಗ್ ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಬಳಿಕ ಅಮಾನತು ಹಿಂಪಡೆದುಕೊಂಡು ಮತ್ತೆ ಸೇವೆಯಲ್ಲಿ ತೊಡಗಿಕೊಳ್ಳುವಂತೆ ಆದೇಶ ಹೊರಡಿಸಿತು. ನಂತರ ರಾಭಾ ಮತ್ತೆ ಸೇವೆಗೆ ಸೇರಿದರು. ಇಂತಹ ಹಲವಾರು ಅಕ್ರಮ ಹಾಗೂ ಅಪರಾಧಗಳನ್ನು ರಾಭಾ ಮಾಡಿದ್ದಾರೆ ಎಂಬ ಆರೋಪ ಅವರ ಮೇಲಿತ್ತು. ಇದನ್ನೂ ಓದಿ: ಬರೋಬ್ಬರಿ 9 ವರ್ಷಗಳ ಬಳಿಕ ದೇಗುಲದಲ್ಲಿ ಕದ್ದ ಆಭರಣ ವಾಪಸ್ ನೀಡಿದ ಕಳ್ಳ!

ಘಟನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಾಭಾ ತಾಯಿ ಸುಮಿತ್ರಾ ರಾಭಾ, ಇದೊಂದು ಪೂರ್ವ ನಿಯೋಜಿತ ಕೊಲೆ ಎಂದು ಆರೋಪಿಸಿದ್ದು, ಯಾವುದೋ ಅಪರಿಚಿತ ತಂಡದಿಂದ ನಡೆದಿದೆ ಎಂದು ಹೇಳಿದ್ದಾರೆ. ಘಟನೆ ನಡೆಯುವ ಹಿಂದಿನ ದಿನ ರಾತ್ರಿ ಉನ್ನತ ಪೊಲೀಸ್ ಅಧಿಕಾರಿಗಳ ತಂಡವು ನಾಗಾನ್‌ನಲ್ಲಿರುವ ರಾಭಾ ಅವರ ಅಧಿಕೃತ ಕ್ವಾರ್ಟರ್‌ಗೆ ದಾಳಿ ನಡೆಸಿ ಸುಮಾರು 1 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಈ ವೇಳೆ ರಾಭಾ ತಾಯಿ ಸಹಾ ಅಲ್ಲೇ ಇದ್ದು, ಆ ಹಣ ತಾನು ಕೋಳಿ ಮತ್ತು ಹಂದಿ ಸಾಕಾಣಿಕೆ ಮಾಡಿ ಗಳಿಸಿರುವ ಹಣ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೂವರು ಅಪ್ರಾಪ್ತರಿಂದಲೇ 12ರ ಬಾಲಕನ ಭೀಕರ ಹತ್ಯೆ – ತಲೆಗೆ ಜಜ್ಜಿ ಕತ್ತು ಸೀಳಿದ್ರು

ಅಪಘಾತದ ಬಳಿಕ ಉತ್ತರ ಪ್ರದೇಶ (Uttar Pradesh) ನೋಂದಣಿ ಹೊಂದಿದ್ದ ಕಂಟೈನರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ನಾಗಾಂವ್ ಸಿವಿಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ರಾಭಾ ದೇಹವನ್ನು ಗುವಾಹಟಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಮೃತ ರಾಭಾ ಕುಟುಂಬಸ್ಥರು ಈ ಘಟನೆ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ನಾಗಾಂವ್ (Nagaon) ಪೊಲೀಸ್ ಅಧೀಕ್ಷಕಿ ಲೀನಾ ಡೋಲಿ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಇದನ್ನೂ ಓದಿ: ದೆಹಲಿಯ ಶಾಲೆಗೆ ಬಾಂಬ್ ಬೆದರಿಕೆ ಕರೆ – ತೀವ್ರ ಶೋಧ

TAGGED:accidentAssamContainer TruckJunmoni RabhaLady SinghamSIಅಪಘಾತಅಸ್ಸಾಂಎಸ್‍ಐಕಂಟೈನರ್ ಟ್ರಕ್ಜುನ್ಮೋನಿ ರಾಭಾಲೇಡಿ ಸಿಗಂ
Share This Article
Facebook Whatsapp Whatsapp Telegram

Cinema news

suraj bigg boss
Bigg Boss: ಕಿಚ್ಚನ ಅನುಪಸ್ಥಿತಿಯಲ್ಲಿ ಬಿಗ್‌ ಬಾಸ್‌ ಮನೆಯಿಂದ ಸೂರಜ್‌ ಔಟ್‌
Cinema Latest Top Stories TV Shows
Sanvi Sudeep 1
ನನ್ನ ದೇಹ ಚರ್ಚೆಯ ವಿಷಯವಲ್ಲ: ಟ್ರೋಲರ್ಸ್‌ಗೆ ಸಾನ್ವಿ ಸುದೀಪ್ ಕೌಂಟರ್
Cinema Latest Sandalwood Top Stories
allu arjun 7
ಪುಷ್ಪಾ-2 ಕಾಲ್ತುಳಿತ ಕೇಸ್ – ನಟ ಅಲ್ಲು ಅರ್ಜುನ್‌ ಸೇರಿ 23 ಮಂದಿ ವಿರುದ್ಧ ಚಾರ್ಜ್‌ ಶೀಟ್‌ ಸಲ್ಲಿಕೆ
Cinema Latest Main Post National
vijayalakshmi 1 1
`ಮಹಿಳೆ ತುಂಬಾ ಶಕ್ತಿಶಾಲಿ’ – ದರ್ಶನ್ ಪತ್ನಿ ಟಾಂಗ್‌ ಕೊಟ್ಟಿದ್ದು ಯಾರಿಗೆ?
Cinema Latest Sandalwood Top Stories

You Might Also Like

Paraglider Crash Pilot Died
Latest

ಪ್ಯಾರಾಗ್ಲೈಡರ್ ಟೇಕಾಫ್‌ ಆದ ಕೆಲಹೊತ್ತಲ್ಲೇ ಅಪಘಾತ; ಪೈಲಟ್ ಸಾವು, ಪ್ರವಾಸಿಗನಿಗೆ ಗಾಯ

Public TV
By Public TV
18 minutes ago
Murugha Shri
Chitradurga

ಕೋರ್ಟ್ ಆದೇಶ ಉಲ್ಲಂಘಿಸಿ ಮಠದ ಆಸ್ತಿ ಮಾರಾಟ – ಮುರುಘಾಶ್ರೀ ವಿರುದ್ಧ ಮತ್ತೊಂದು ಆರೋಪ

Public TV
By Public TV
52 minutes ago
love fraud
Bengaluru City

ಲವ್-ಸೆಕ್ಸ್ ದೋಖಾ; ಯುವತಿ ಜೊತೆ ಸಲುಗೆ ಬೆಳೆಸಿ 37 ಲಕ್ಷ ವಂಚನೆ – ಆರೋಪಿ ಬಂಧನ

Public TV
By Public TV
1 hour ago
bengaluru drugs
Bengaluru City

ಹೊಸ ವರ್ಷಾಚರಣೆ ಹೊಸ್ತಿಲಲ್ಲೇ ಭರ್ಜರಿ ಬೇಟೆ; ಬೆಂಗಳೂರಲ್ಲಿ 55.88 ಕೋಟಿ ಮೌಲ್ಯದ ಡ್ರಗ್ಸ್ ಸೀಜ್

Public TV
By Public TV
2 hours ago
NAMMA METRO 5
Bengaluru City

ಮೆಟ್ರೋದಲ್ಲಿ ಮೊಬೈಲ್‌ ಸೌಂಡ್‌ ಜಾಸ್ತಿ ಇಡೋದು, ತಿಂಡಿ ತಿನ್ನೋದು ಮಾಡಿದ್ರೆ ಬೀಳುತ್ತೆ ದಂಡ

Public TV
By Public TV
2 hours ago
Hassan Bus Accident copy
Crime

ಲಾರಿಗೆ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ – ಬಸ್ ಚಾಲಕ ಗಂಭೀರ, 20ಕ್ಕೂ ಹೆಚ್ಚು ಮಂದಿಗೆ ಗಾಯ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?