ಡಿಸ್ಪುರ್: ಐದು ಕಮಾಂಡೋ ಬೆಟಾಲಿಯನ್‍ಗಳನ್ನು ಒಳಗೊಂಡಂತೆ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 6,000 ಹುದ್ದೆಗಳನ್ನು ಒಂದು ವಾರದೊಳಗೆ ಭರ್ತಿ ಮಾಡಲು ಅಸ್ಸಾಂ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದೆ.
ಮಂಗಳವಾರ ಪೊಲೀಸ್ ಅಧಿಕಾರಿಗಳೊಂದಿಗೆ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಸಭೆ ನಡೆಸಿದ್ದು, ಈ ಪರಿಶೀಲನಾ ಸಭೆಯಲ್ಲಿ ರಾಜ್ಯದ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಎಂಟು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಘೋಷಣೆ ಮಾಡಿದ್ದಾರೆ.
Advertisement
Advertisement
ಈ ಕುರಿತು ಶರ್ಮಾ ಅವರು ಟ್ವಿಟ್ಟರ್ ನಲ್ಲಿ, ರಾಜ್ಯದಲ್ಲಿ ಪೊಲೀಸಿಂಗ್ ಅನ್ನು ಬಲಪಡಿಸಲು, ಪೊಲೀಸರಿಗೆ 1,000 ಹೊಸ ಕ್ವಾರ್ಟರ್‍ಗಳು, ಡೈರೆಕ್ಟರ್ ಜನರಲ್ ಪೊಲೀಸ್ ಮತ್ತು ಕಮಿಷನರ್ ಕಚೇರಿಗಳಿಗೆ ಮೂಲಸೌಕರ್ಯಗಳನ್ನು ನವೀಕರಣಗೊಳಿಸುವ ಜೊತೆಗೆ ವಿವಿಧ ಸುಧಾರಣಾ ಕ್ರಮಗಳನ್ನು ಪರಿಚಯಿಸಿದರು. ಇದನ್ನೂ ಓದಿ: 116 ಕೋಟಿ ಒಡೆಯ ಸೋಮಶೇಖರ್ ಕಾಂಗ್ರೆಸ್‍ನಿಂದ ಸ್ಪರ್ಧೆ
Advertisement
With an aim to strengthen our policing infrastructure, a key to safety and growth of our society, we have decided to take several reformative measures in a review meeting held at @assampolice headquarters.
1/4 pic.twitter.com/DY3EFmHAsa
— Himanta Biswa Sarma (@himantabiswa) November 23, 2021
Advertisement
5 ಕಮಾಂಡೋ ಬೆಟಾಲಿಯನ್ ಸೇರಿದಂತೆ 6,000 ಹುದ್ದೆಗಳನ್ನು ಮುಂದಿನ ವಾರದೊಳಗೆ ಭರ್ತಿ ಮಾಡಲಾಗುವುದು. ನಮ್ಮ ಸಮಾಜದ ಸುರಕ್ಷತೆ ಮತ್ತು ಬೆಳವಣಿಗೆಗೆ ಪ್ರಮುಖವಾಗಿ ಕಾರಣರಾದ ನಮ್ಮ ಪೊಲೀಸಿಂಗ್ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ, ಅಸ್ಸಾಂ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಪರಿಶೀಲನಾ ಸಭೆಯನ್ನು ನಡೆಸಲಾಗಿದ್ದು, ನಾವು ಹಲವಾರು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ ಎಂದು ಟ್ವೀಟ್ ನಲ್ಲಿ ತಿಳಿಸಿದರು. ಇದನ್ನೂ ಓದಿ: ಕಾವೇರಿದ ಮಂಡ್ಯ ಎಂಎಲ್‍ಸಿ ಚುನಾವಣೆ – ಯಾರಿಗೆ ಸಿಗುತ್ತೆ ಸುಮಲತಾ ಬೆಂಬಲ?
1992 ರಿಂದ ಗುವಾಹಟಿ ಪೊಲೀಸರು ವಜಾಗೊಳಿಸಿದ ಎಲ್ಲ ಪ್ರಕರಣಗಳನ್ನು ಪರಿಶೀಲಿಸಿ ಬಗೆಹರಿಸಲು ತೀರ್ಮಾನಿಸಲಾಗುವುದು. ಈ ಸಮಸ್ಯೆಗಳನ್ನು 31 ಮಾರ್ಚ್ 2022 ರೊಳಗೆ ಸಾಧ್ಯವಾದಷ್ಟು ಬಗೆಹರಿಸಲಾಗುವುದು ಎಂದರು.
✅To review & resolve all cases dismissed by @GuwahatiPol without logical conclusion since 1992
✅No. of settled cases every month should be more than the no. of freshly booked ones by Guwahati Police
✅Settlement of as many unresolved cases as possible by March 31, 2022
2/4
— Himanta Biswa Sarma (@himantabiswa) November 23, 2021
ಇನ್ನೂ ಮುಂದೆ ಎಫ್‍ಐಆರ್ ದಾಖಲಿಸಿದ 24 ಗಂಟೆಯೊಳಗೆ ತನಿಖೆ ಆರಂಭಿಸಲಾಗುವುದು. ಅಪಘಾತ ವರದಿ, ಪಾಸ್‍ಪೋರ್ಟ್, ಮರಣೋತ್ತರ ಪರೀಕ್ಷೆಯ ವರದಿಗೆ ಸಂಬಂಧಿಸಿದ ಹೊಸ ಮಾರ್ಗಸೂಚಿಯನ್ನು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಕುರಿತು ಜನವರಿ 8 ಮತ್ತು ಜನವರಿ 9 ರಂದು ದುಲಿಯಾಜಾನ್‍ನಲ್ಲಿ ಎರಡನೇ ಎಸ್‍ಪಿ ಸಮ್ಮೇಳನ ನಡೆಯಲಿದೆ ಎಂದು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.