ಗುವಾಹಟಿ: ಅಲ್‍ಖೈದಾ ಉಗ್ರರ ಜೊತೆ ಸಂಪರ್ಕದಲ್ಲಿದ್ದ ಅಸ್ಸಾಂನ 34 ಜನರನ್ನು ಬಂಧಿಸುವಲ್ಲಿ ಪೊಲೀಸರು ಯಶಸಸ್ವಿಯಾಗಿದ್ದಾರೆ.
Advertisement
ಬಂಧನದ ಬಳಿಕ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅಸ್ಸಾಂ ಡಿಜಿಪಿ ಭಾಸ್ಕರ್ ಜ್ಯೋತಿ ಮಹಾಂತ, ಅಲ್‍ಖೈದಾ ಉಗ್ರರ ಸಂಪರ್ಕ ಹೊಂದಿರುವ ಆರೋಪದಡಿ 34 ಜನರನ್ನು ಬಂಧಿಸಲಾಗಿದೆ. ಇಂತಹ ಕೃತ್ಯಗಳನ್ನು ರಾಜ್ಯದಲ್ಲಿ ನಡೆಸಲು ಆಸ್ಪದ ಕೊಡುವುದಿಲ್ಲ. ಬಾಂಗ್ಲಾದೇಶದ ಕೆಲ ಕಿಡಿಗೇಡಿಗಳ ತಂಡ ಸ್ಥಳೀಯರಿಗೆ ಉಗ್ರ ಸಂಘಟನೆಯ ಬೆಂಬಲದೊಂದಿಗೆ ಕ್ಯಾಂಪ್ ಒಂದನ್ನು ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದು ದಾಳಿ ನಡೆಸಿದ್ದೇವೆ ಎಂದರು. ಇದನ್ನೂ ಓದಿ: ಶಿವಮೊಗ್ಗ SDPI ಕಚೇರಿ ಮೇಲೆ ಪೊಲೀಸರ ದಾಳಿ – ಮಹತ್ವದ ದಾಖಲೆ ವಶಕ್ಕೆ
Advertisement
Assam | There are different types of groups of Madrasas in Assam… Some new groups are sprouting up & taking advantage. Conspiracy hatching from outside Assam, currently from Bangladesh & Al-Qaeda-affiliated groups, influencing youth to spread radicalization: DGP BJ Mahanta pic.twitter.com/PPbaf9TgCs
— ANI (@ANI) August 25, 2022
Advertisement
ರಾಜ್ಯದಲ್ಲಿ ಕೆಲವು ಹೊಸ ಗುಂಪುಗಳು ಮೊಳಕೆಯೊಡೆಯುತ್ತಿದ್ದು, ಯುವಕರನ್ನು ಉಗ್ರ ಸಂಘಟನೆಗಳತ್ತ ಸೆಳೆದು ವಿಷಬೀಜ ಬಿತ್ತಿ ದ್ವೇಷ ಭಾವನೆಯನ್ನು ಹರಡುವ ಮೂಲಕ ಯುವಕರ ಲಾಭವನ್ನು ಪಡೆಯುತ್ತಿವೆ. ಅಸ್ಸಾಂನ ಮದರಾಸಗಳಲ್ಲಿ ಹಲವು ಬಗೆಯ ತಂಡಗಳಿವೆ. ಮದರಾಸಗಳಲ್ಲಿ ನೆಲೆಸಿರುವ ಈ ತಂಡಗಳು ಬಾಂಗ್ಲಾದೇಶದ ವಲಸಿಗರಾಗಿದ್ದಾರೆ. ಇವರಿಗೆ ಉಗ್ರರ ಜೊತೆ ಒಡನಾಟವಿದ್ದು, ಅಸ್ಸಾಂನ ಯುವಕರಿಗೆ ಪ್ರಜೋದನೆ ನೀಡಿ ಉಗ್ರ ಸಂಘಟನೆಗಳೊಂದಿಗೆ ಕೈಜೋಡಿಸಿ ದುಷ್ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದರು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪುರುಷರೊಂದಿಗೆ ಸೆಕ್ಸ್ – ವ್ಯಕ್ತಿಗೆ ಒಂದೇ ಬಾರಿಗೆ ಕೊರೊನಾ, ಮಂಕಿಪಾಕ್ಸ್, HIV ಪಾಸಿಟಿವ್