LatestMain PostNational

ಪ್ರವಾಹದ ವೇಳೆ ಶಾಸಕನನ್ನು ಬೆನ್ನಿನಲ್ಲಿ ಕೂರಿಸಿ ಹೊತ್ತೊಯ್ದ ರಕ್ಷಣಾ ಕಾರ್ಯಕರ್ತ

- ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಕ್ಲಾಸ್

ದಿಸ್ಪುರ್: ಅಸ್ಸಾಂ ರಾಜ್ಯದಲ್ಲಿ ಭಾರೀ ಪ್ರವಾಹದ ಪರಿಸ್ಥಿತಿ ಉಂಟಾಗಿದ್ದು, 27 ಜಿಲ್ಲೆಗಳು ಕಷ್ಟದ ಪರಿಸ್ಥಿತಿ ಅನುಭವಿಸುತ್ತಿವೆ. 6.6 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ಪರದಾಡುವಂತಾಗಿದ್ದು, ಈಗಾಗಲೇ 9 ಜನರು ಸಾವನ್ನಪ್ಪಿದ್ದಾರೆ.

ಪ್ರವಾಹದ ಹಿನ್ನೆಲೆ ಬಿಜೆಪಿ ಪಕ್ಷದ ಲುಮ್ಡಿಂಗ್ ವಿಧಾನಸಭೆಯ ಶಾಸಕ ಸಿಬು ಮಿಶ್ರಾ ತನ್ನ ಸುತ್ತ ಆವರಿಸಿರುವ ನೀರಿನಿಂದ ತಪ್ಪಿಸಿಕೊಳ್ಳು ರಕ್ಷಣಾ ಕಾರ್ಯಕರ್ತರ ಬೆನ್ನು ಹತ್ತಿ, ದೋಣಿ ತಲುಪಿರುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಶಾಸಕನ ಈ ವರ್ತನೆಗೆ ನೆಟ್ಟಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ರಾಜೀವ್‌ಗಾಂಧಿ ಹತ್ಯೆಪ್ರಕರಣ: ನನ್ನ ಮಗಳೂ ಬಿಡುಗಡೆ ಆಗ್ತಾಳೆಂಬ ನಂಬಿಕೆಯಿದೆ ಎಂದ ನಳಿನಿ ತಾಯಿ

ಸಿಬು ಮಿಶ್ರಾ ಪ್ರವಾಹದ ಪರಿಸ್ಥಿತಿಯನ್ನು ಪರಿಶೀಲಿಸಲು ಹೊಜೈ ಜಿಲ್ಲೆಗೆ ಭೇಟಿ ನೀಡಿದ್ದರು. ಈ ಸಂದರ್ಭ ಸುತ್ತುವರಿದಿದ್ದ ನೀರಿಗೆ ಕಾಲಿಡದೇ ರಕ್ಷಣಾ ಕಾರ್ಯಕರ್ತನ ಬೆನ್ನು ಹತ್ತಿ ದೋಣಿ ತಲುಪಿದ್ದಾರೆ. ವೀಡಿಯೋದಲ್ಲಿ ಶಾಸಕನನ್ನು ರಕ್ಷಣಾ ಕಾರ್ಯಕರ್ತ ದೋಣಿಯೆಡೆಗೆ ಹೊತ್ತೊಯ್ಯುವುದನ್ನು ನೋಡಬಹುದು. ಇದನ್ನೂ ಓದಿ: ಇರಾಕ್‌ನಲ್ಲಿ ಮರಳಿನ ಬಿರುಗಾಳಿ – 4 ಸಾವಿರ ಜನರು ಆಸ್ಪತ್ರೆಗೆ

ಮುಂಗಾರು ಪೂರ್ವ ಮಳೆಯಿಂದಾಗಿ ಅಸ್ಸಾಂನಲ್ಲಿ ಪ್ರವಾಹ ಉಂಟಾಗಿದೆ. ಪ್ರವಾಹದಿಂದಾಗಿ ನಿರಾಶ್ರಿತರಾಗಿರುವ 48,000ಕ್ಕೂ ಹೆಚ್ಚು ಜನರನ್ನು 248 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಮೃತರ ಕುಟುಂಬಗಳಿಗೆ ಅಸ್ಸಾಂ ಸರ್ಕಾರ ತಲಾ 4 ಲಕ್ಷ ರೂ. ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದೆ.

Leave a Reply

Your email address will not be published.

Back to top button