ಗುವಾಹಟಿ: ವೈದ್ಯರ ಬಳಕೆಗೆ ಚೀನಾದಿಂದ ಆಮದು ಮಾಡಿಕೊಂಡಿದ್ದ ಸುಮಾರು 50 ಸಾವಿರ ವೈಯಕ್ತಿಕ ಸುರಕ್ಷಾ ಸಾಧನಗಳನ್ನು(ಪಿಪಿಇ) ಅಸ್ಸಾಂ ಸರ್ಕಾರ ಬಳಕೆ ಮಾಡದಿರಲು ನಿರ್ಧರಿಸಿದೆ.
ಏ.15 ರಂದು ರಾತ್ರಿ ಖಾಸಗಿ ಸರಕು ಸಾಗಣೆ ವಿಮಾನದ ಮೂಲಕ ಚೀನಾದಿಂದ ನೇರವಾಗಿ ಅಸ್ಸಾಂಗೆ ಪಿಪಿಇ ಬಂದಿಳಿತ್ತು. ಈ ಮೂಲಕ ಚೀನಾದಿಂದ ನೇರವಾಗಿ ಪಿಪಿಇಗಳನ್ನು ತರಿಸಿಕೊಂಡಿದ್ದ ಮೊದಲ ರಾಜ್ಯ ಅಸ್ಸಾಂ ಆಗಿತ್ತು.
Advertisement
Advertisement
ಚೀನಾದಿಂದ ತರಿಸಿಕೊಳ್ಳುವುದಕ್ಕೂ ಮುನ್ನ ಅಸ್ಸಾಂ ನಲ್ಲಿ ಕೇವಲ 2 ಸಾವಿರ ಕಿಟ್ ಗಳಿದ್ದವು. ಭಾರತದ ಬೇರೆ ಬೇರೆ ರಾಜ್ಯಗಳಿಂದ ಅಸ್ಸಾಂ ಆರೋಗ್ಯ ಇಲಾಖೆ 1.50 ಲಕ್ಷ ಪಿಪಿಇ ಕಿಟ್‍ಗಳನ್ನು ತರಿಸಿಕೊಂಡಿತ್ತು.
Advertisement
ಚೀನಾದ ಪಿಪಿಇ ಕಿಟ್ ಗಳ ಗುಣಮಟ್ಟದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಕೇಳಿಬಂದಿದೆ. ಕೆಲ ವೈದ್ಯರು ಪಿಪಿಯಿ ಕಿಟ್ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅವರಿಗೆ ತೊಂದರೆ ನೀಡಲು ನಾವು ಬಯುಸುವುದಿಲ್ಲ. ಹೀಗಾಗಿ ನಾವು ಚೀನಾ ಪಿಪಿಇ ಬಳಕೆ ಮಾಡದಿರಲು ನಿರ್ಧರಿಸಿದ್ದೇವೆ ಎಂದು ಎಂದು ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮ ತಿಳಿಸಿದ್ದಾರೆ.
Advertisement
2 ಲಕ್ಷ ಪಿಪಿಇ ಕಿಟ್ ಸ್ಟಾಕ್ ಹೊಂದಿದ್ದೇವೆ. ಈಗ ನಾವು 1.50 ಲಕ್ಷ ಪಿಪಿಇ ಕಿಟ್ ಮೊದಲು ಬಳಕೆ ಮಾಡುತ್ತೇವೆ. ಚೀನಾದ 50 ಸಾವಿರ ಪಿಪಿಇ ಕಿಟ್ ಗಳನ್ನು ಗೋಡೌನ್ ನಲ್ಲಿ ಇಡುತ್ತೇವೆ. ಈ ಕಿಟ್ ಗಳ ಮಾದರಿಯನ್ನು ಗುಣಮಟ್ಟದ ಪರೀಕ್ಷೆಗೆ ಕಳುಹಿಸುತ್ತೇವೆ. ಮುಂದೆ ಅಗತ್ಯ ಬಿದ್ದರೆ ಈ ಕಿಟ್ ಬಳಕೆ ಮಾಡುತ್ತೇವೆ ಎಂದು ತಿಳಿಸಿದರು.