ಡಿಸ್ಪುರ್: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನೋಡಲು ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆಯನ್ನು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಘೋಷಣೆ ಮಾಡಿದ್ದಾರೆ.
1990ರ ದಶಕದಲ್ಲಿ ಕಾಶ್ಮೀರಿ ಪಂಡಿತರನ್ನು ಬಲವಂತವಾಗಿ ಹೇಗೆ ಕಾಶ್ಮೀರದಿಂದ ಕಳುಹಿಸಲಾಯಿತು ಎಂಬ ಸತ್ಯವನ್ನು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ತೋರಿಸಲಾಗಿದೆ. ಈ ಹಿನ್ನೆಲೆ ಹಿಮಂತ ಬಿಸ್ವಾ ಶರ್ಮಾ ಅವರು, ನಮ್ಮ ಸರ್ಕಾರಿ ನೌಕರರು ‘ದಿ ಕಾಶ್ಮೀರ ಫೈಲ್ಸ್’ ಸಿನಿಮಾವನ್ನು ವೀಕ್ಷಿಸಲು ಅರ್ಧ ದಿನದ ವಿಶೇಷ ರಜೆಗೆ ಕೊಡಲಾಗುತ್ತಿದೆ. ಈ ಘೋಷಣೆಯನ್ನು ಮಾಡಲು ತುಂಬಾ ಸಂತೋಷವಾಗಿದೆ. ಈ ಬಗ್ಗೆ ಅವರು ತಮ್ಮ ಮೇಲಾಧಿಕಾರಿಗಳಿಗೆ ತಿಳಿಸಬೇಕು. ಸಿನಿಮಾಗೆ ಹೋಗಿದ್ದ ಟೀಕೆಟ್‍ಗಳನ್ನು ಮರುದಿನ ಮೇಲಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ದಿ ಕಾಶ್ಮೀರ ಫೈಲ್ಸ್ ಚಿತ್ರ ವಿಕ್ಷಣೆ ಮಾಡಿದ ಮಠಾಧೀಶರು
Advertisement
Glad to announce that our Govt employees will be entitled for half-day special leave to watch #TheKashmirFiles.
They will have to only inform their superior officers and submit the tickets the next day. pic.twitter.com/RNQzOk9iCK
— Himanta Biswa Sarma (@himantabiswa) March 15, 2022
Advertisement
ಶರ್ಮಾ ಅವರು ಸಹ ಸೋಮವಾರ ತಮ್ಮ ಸಂಪುಟದೊಂದಿಗೆ ಗುವಾಹಟಿಯ ಚಿತ್ರಮಂದಿರದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ವೀಕ್ಷಿಸಿದರು. ಕಾಶ್ಮೀರಿ ಪಂಡಿತರ ಮೇಲೆ ನಡೆದಿರುವ ದೌರ್ಜನ್ಯವೂ ಮಾನವೀಯತೆಯ ಮೇಲೆ ದೊಡ್ಡ ಕಳಂಕವಾಗಿದೆ ಎಂದು ಹೇಳಿದರು.
Advertisement
ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಮತ್ತು ಅವರನ್ನು ಓಡಿಸಿರುವ ರೀತಿ ಮಾನವೀಯತೆಯ ಮೇಲೆ ಕಳಂಕವಾಗಿದೆ. ‘ದಿ ಕಾಶ್ಮೀರ್ ಫೈಲ್ಸ್’ ಜನರ ದುಸ್ಥಿತಿಯನ್ನು ಹೃದಯಕ್ಕೆ ಮುಟ್ಟುವಂತೆ ಚಿತ್ರೀಸಲಾಗಿದೆ. ಇದನ್ನು ನಾನು ನನ್ನ ಕ್ಯಾಬಿನೆಟ್ ಸಹೋದ್ಯೋಗಿಗಳು ಮತ್ತು @BJP4Assam ಮತ್ತು ಮಿತ್ರಪಕ್ಷಗಳ ಶಾಸಕರೊಂದಿಗೆ ವೀಕ್ಷಿಸಿದ್ದೇನೆ ಎಂದು ಸಿನಿಮಾ ವೀಕ್ಷಿಸಿದ ನಂತರ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿದ್ದ ನನ್ನ ಪೂರ್ವಜರು ನೋವು ತಿಂದೆ ಕಾಶ್ಮೀರ ಬಿಟ್ಟರು : ಅನಂತ್ ನಾಗ್ ಬಿಚ್ಚಿಟ್ಟ ಕಾಶ್ಮೀರಿ ಕ್ರೌರ್ಯ
Advertisement
The Kashmiri Pandit genocide & their exodus are a blot on humanity.
Moved by the heart-wrenching portrayal of their plight in #TheKashmirFiles, which I watched along with my Cabinet colleagues and MLAs of @BJP4Assam & allies.
Kudos @vivekagnihotri & co for holding out the truth pic.twitter.com/Li8deBW9Ld
— Himanta Biswa Sarma (@himantabiswa) March 15, 2022
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ರಿಲೀಸ್ ಆದ ದಿನದಿಂದ ಬಾರಿ ಸದ್ದು ಮಾಡುತ್ತಿದೆ. ಸಿನಿಮಾದಲ್ಲಿರುವ ನೈಜತೆಯನ್ನು ಅರಿತ ರಾಜಕಾರಣಿಗಳು ಮತ್ತು ಗಣ್ಯರು ಸಿನಿಮಾವನ್ನು ಭಾರತ ಪ್ರಜೆಗಳು ನೋಡುವುದು ಎಷ್ಟು ಮುಖ್ಯ ಎಂಬುದನ್ನು ತಿಳಿಸಲು ಹಲವು ರಿಯಾಯಿತಿಗಳನ್ನು ಕೊಡುತ್ತಿದ್ದಾರೆ