ದಿಸ್ಪುರ್: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭಾನುವಾರ ಬರಾಕ್ ಕಣಿವೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದಾಗ, ಒಬ್ಬ ವ್ಯಕ್ತಿ ಕತ್ತಿನವರೆಗೆ ನೀರಿದ್ದರೂ ಸಿಎಂ ಅನ್ನು ಸ್ವಾಗತಿಸಲು ಧಾವಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಅಸ್ಸಾಂನ ಭೀಕರ ಪ್ರವಾಹದಿಂದ ನಲುಗಿರುವ ಪ್ರದೇಶಗಳಿಗೆ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಭೇಟಿ ನೀಡುತ್ತಿದ್ದು, ಜನರ ನೋವುಗಳನ್ನು ಆಲಿಸುತ್ತಿದ್ದಾರೆ. ಅಸ್ಸಾಂನ ಮೊರಿಗಾಂವ್ ಜಿಲ್ಲೆಯಲ್ಲಿ ಪ್ರವಾಹದ ಸ್ಥಿತಿ ಕ್ರಮೇಣ ಸುಧಾರಣೆ ಕಾಣಿಸುತ್ತಿದೆ ಹಾಗೂ ಪ್ರವಾಹದ ನೀರು ತಗ್ಗುತ್ತಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಇದನ್ನೂ ಓದಿ: ನಿಮಗೆ ತಾಕತ್ ಇದ್ರೆ ಚುನಾವಣೆಗೆ ಬನ್ನಿ: ರೆಬೆಲ್ ಶಾಸಕರಿಗೆ ಸವಾಲೆಸೆದ ಆದಿತ್ಯ ಠಾಕ್ರೆ
Advertisement
#WATCH | Assam CM Himanta Biswa Sarma visited the flood affected Barak valley area where a resident braved flood waters to greet him with a ‘Gamusa’ pic.twitter.com/VOvQayYBoo
— ANI (@ANI) June 26, 2022
Advertisement
ಕಳೆದ 24 ಗಂಟೆಗಳಲ್ಲಿ ಅಸ್ಸಾಂನ ಪ್ರವಾಹದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಬಾರ್ಪೇಟಾ, ಕ್ಯಾಚಾರ್, ದರ್ರಾಂಗ್ ಹಾಗೂ ಗೋಲಾಘಾಟ್ ಜಿಲ್ಲೆಗಳಲ್ಲಿ ತಲಾ ಒಂದೊಂದು ಸಾವು ವರದಿಯಾಗಿದೆ. ಅಸ್ಸಾಂನ ಈ ಬಾರಿಯ ಪ್ರವಾಹದಲ್ಲಿ ಶನಿವಾರದವರೆಗೆ 121 ಜನರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಇಮ್ರಾನ್ ವಿರುದ್ಧ ಬೇಹುಗಾರಿಕೆಗೆ ಪ್ರಯತ್ನಿಸಿದವ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ
Advertisement
#WATCH Assam CM Himanta Biswa Sarma inspects flood-affected areas and listens to people’s grievances in Silchar pic.twitter.com/LLEDklBxtf
— ANI (@ANI) June 26, 2022
Advertisement
ಅಸ್ಸಾಂನ ಒಟ್ಟಾರೆ ಪ್ರವಾಹ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆಯಾದರೂ, ರಾಜ್ಯದ 27 ಜಿಲ್ಲೆಗಳಲ್ಲಿ, 2,894 ಹಳ್ಳಿಗಳಲ್ಲಿ 25.10 ಲಕ್ಷಕ್ಕೂ ಹೆಚ್ಚು ಜನರು ಪರಿಣಾಮವನ್ನು ಎದುರಿಸುತ್ತಿದ್ದಾರೆ. ಬಜಾಲಿ, ಬಕ್ಸಾ, ಬರ್ಪೇಟಾ, ಬಿಸ್ವನಾಥ್, ಕ್ಯಾಚಾರ್, ಚಿರಾಂಗ್, ದರ್ರಾಂಗ್, ಧೇಮಾಜಿ, ಧುಬ್ರಿ, ದಿಬ್ರುಗಢ್, ದಿಮಾ ಹಸಾವೊ, ಗೋಲ್ಪಾರಾ, ಗೋಲಾಘಾಟ್, ಹೈಲಕಂಡಿ, ಹೊಜೈ, ಕಮ್ರೂಪ್, ಕಮ್ರೂಪ್ ಮೆಟ್ರೋಪಾಲಿಟನ್, ಕರ್ಬಿ ಆಂಗ್ಲಾಂಗ್ ವೆಸ್ಟ್, ಕರೀಮ್‌ಗಂಜ್, ಲಖಿಂಪುರ, ಮೋರಿಗಾಂವ್, ನಾಗಾಂವ್, ನಲ್ಬರಿ, ಸೋನಿತ್‌ಪುರ್, ಸೌತ್ ಸಲ್ಮಾರಾ, ತಮುಲ್‌ಪುರ್ ಹಾಗೂ ಉದಲ್‌ಗುರಿ ಇನ್ನೂ ಕೂಡಾ ಪ್ರವಾಹದಿಂದ ಚೇತರಿಕೆ ಕಂಡಿಲ್ಲ.