ಗುವಾಹಟಿ: ಸತತ ಮಳೆಯಿಂದ ಅಸ್ಸಾಂನ ಹಲವು ಜಿಲ್ಲೆಗಳಲ್ಲಿ ಭೀಕರ ಪ್ರವಾಹ ಉಂಟಾಗಿದ್ದು, ಇದರಿಂದಾಗಿ ನಾಲ್ವರು ಮಕ್ಕಳು ಸೇರಿದಂತೆ 10 ಜನರು ಸಾವನ್ನಪ್ಪಿದ್ದು, ಈ ಮೂಲಕ ಸಾವಿನ ಸಂಖ್ಯೆ 118ಕ್ಕೆ ಏರಿದೆ.
ಅಸ್ಸಾಂನಲ್ಲಿ ಪ್ರವಾಹವು 28 ಜಿಲ್ಲೆಗಳಲ್ಲಿ 33.03 ಲಕ್ಷ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕ್ಯಾಚಾರ್ ಜಿಲ್ಲೆಯ ಸಿಲ್ಚಾರ್ ಪಟ್ಟಣವು ಸತತ ಐದನೇ ದಿನವೂ ಮುಳುಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Advertisement
#AssamFloods2022 | With more than 5.03 lakh affected people, many take shelter on embankments & highways as several areas under Assam’s Nagaon district continue to remain inundated
Nearly 1.42 lakh people of 155 villages under the Raha Assembly constituency affected. (24.06) pic.twitter.com/t2XoNVWhOL
— ANI (@ANI) June 24, 2022
ಬಾರ್ಪೇಟಾ, ಧುಬ್ರಿ, ಕರೀಮ್‍ಗಂಜ್ ಮತ್ತು ಉದಲ್ಗುರಿ ಜಿಲ್ಲೆಗಳಲ್ಲಿ ತಲಾ ಇಬ್ಬರು ಸಾವನ್ನಪ್ಪಿದ್ದರೇ, ಕ್ಯಾಚಾರ್ ಮತ್ತು ಮೊರಿಗಾಂವ್‍ನಲ್ಲಿ ತಲಾ ಓರ್ವ ಮೃತಪಟ್ಟಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಮುಂಬೈ ದಾಳಿಯ ಮಾಸ್ಟರ್ ಮೈಂಡ್‌ಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿದ ಪಾಕಿಸ್ತಾನ
Advertisement
Advertisement
ಗುರುವಾರ, 30 ಜಿಲ್ಲೆಗಳಲ್ಲಿ 45.34 ಲಕ್ಷ ಜನಸಂಖ್ಯೆಯು ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿದೆ ಎಂದು ಅಸ್ಸಾಂ ರಾಜ್ಯ ನಿರ್ವಹಣಾ ವಿಪತ್ತು ಪ್ರಾಧಿಕಾರದ (ಎಎಸ್‍ಡಿಎಂಎ) ಬುಲೆಟಿನ್ ತಿಳಿಸಿದೆ. ಬಹುತೇಕ ನದಿಗಳಲ್ಲಿ ನೀರಿನ ಮಟ್ಟ ಇಳಿಮುಖವಾದ ಕಾರಣ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಕೊಂಚ ಸುಧಾರಿಸಿದೆ. ಇದನ್ನೂ ಓದಿ: ಇಡಿ ಪ್ರಶ್ನೆಗೆ ನಾನು ದಣಿದಿದ್ದೇನೆ ಎಂದ ರಾಹುಲ್- ಕೇವಲ 20% ಪ್ರಶ್ನೆಗಷ್ಟೇ ಉತ್ತರ