ದಿಸ್ಪುರ್: ಅಸ್ಸಾಂ ಭೀಕರ ಪ್ರವಾಹದಿಂದ ( Assam Flood) ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ (Kaziranga National Park) ಸುಮಾರು 131 ಪ್ರಾಣಿಗಳು ಸಾವಿಗೀಡಾಗಿವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
85 ಹಂದಿ, ಜಿಂಕೆ, ಎರಡು ಖಡ್ಗಮೃಗ, ಗೂಬೆ, ಮೊಲ, ಆನೆ ಮತ್ತು ಕಾಡು ಬೆಕ್ಕುಗಳನ್ನು ಅಧಿಕಾರಿಗಳು ರಕ್ಷಿಸಿದ್ದಾರೆ. ಸತ್ತ ಪ್ರಾಣಿಗಳಲ್ಲಿ 6 ಘೇಂಡಾಮೃಗಗಳು, 117 ಜಿಂಕೆಗಳು ಸೇರಿವೆ, ಇದರಲ್ಲಿ 98 ನೀರಿನಲ್ಲಿ ಮುಳುಗಿ, ಚಿಕಿತ್ಸೆಯ ಸಮಯದಲ್ಲಿ 25 ವನ್ಯಜೀವಿಗಳು ಸಾವನ್ನಪ್ಪಿವೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಒಂದೇ ದಿನ ಪ್ರದೀಪ್ ಈಶ್ವರ್, ಸುಧಾಕರ್ ಜನಸ್ಪಂದನ ಕಾರ್ಯಕ್ರಮ
Advertisement
Advertisement
ಸುಮಾರು 25 ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 52 ವನ್ಯಜೀವಿಗಳಿಗೆ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ನೌಕರರು ವನ್ಯಜೀವಿಗಳ ರಕ್ಷಣೆಗಾಗಿ ಗಸ್ತು ಬೋಟ್‍ಗಳ ಮೂಲಕ ಹುಡುಕಾಟ ನಡೆಸುತ್ತಿದ್ದಾರೆ. ಈ ಮೂಲಕ ವನ್ಯಜೀವಿಗಳ ರಕ್ಷಣೆಗಾಗಿ ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಈ ವರ್ಷ ಮಾರ್ಚ್ 8 ರಂದು ಪ್ರಧಾನಿ ನರೇಂದ್ರ ಮೋದಿಯವರು ಕಾಜಿರಂಗ ಪಾರ್ಕ್‍ನಲ್ಲಿ ಸಫಾರಿಗೆ ತೆರಳಿದ್ದರು. ಇದನ್ನೂ ಓದಿ: ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಜಾರಿ – ಮುಂದಿನ ಮೂರು ಗಂಟೆಯಲ್ಲಿ ಭಾರೀ ಮಳೆ ಸಾಧ್ಯತೆ