ಹೆಲ್ಮೆಟ್ ಧರಿಸದ್ದನ್ನು ಪ್ರಶ್ನಿಸಿದ ಪತ್ರಕರ್ತನ ಮೇಲೆ ಪೊಲೀಸರಿಂದ ಹಲ್ಲೆ

Public TV
1 Min Read
journalist

ಡಿಸ್ಪುರ್: ಬೈಕ್‍ನಲ್ಲಿ ಹೋಗುತ್ತಿದ್ದ ವೇಳೆ ಹೆಲ್ಮೆಟ್ ಧರಿಸದೇ ಇರುವುದನ್ನು ಪ್ರಶ್ನಿಸಿದ ಪತ್ರಕರ್ತರೊಬ್ಬರ ಮೇಲೆ ಇಬ್ಬರು ಪೊಲೀಸ್ ಪೇದೆಗಳು ಹಲ್ಲೆ ನಡೆಸಿರುವ ಘಟನೆ ಅಸ್ಸಾಂನ ಬಸುಗಾಂವ್‍ನಲ್ಲಿ ನಡೆದಿದೆ.

ಈ ಕುರಿತಂತೆ ಮಾತನಾಡಿದ ಪತ್ರಕರ್ತ ಜಯಂತ್ ದೇಬನಾಥ್, ಬೈಕ್‍ನಲ್ಲಿ ಬಂದ ಇಬ್ಬರು ಪೊಲೀಸರು ಹೆಲ್ಮೆಟ್ ಧರಿಸಿರಲಿಲ್ಲ. ನೀವೇ ಈ ರೀತಿ ತಪ್ಪು ಮಾಡಿದರೆ ಸಾರ್ವಜನಿಕರಿಗೆ ಹೇಗೆ ಸಂದೇಶ ನೀಡುತ್ತೀರಾ ಎಂದು ಪ್ರಶ್ನಿಸಿದೆ. ಆಗ ಹಗಲು ಹೊತ್ತಿನಲ್ಲಿಯೇ ನಡುರಸ್ತೆಯಲ್ಲಿ ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿದರು. ಈ ವೇಳೆ ನಾನು ಪತ್ರಕರ್ತ ಎಂದು ಹೇಳಿದ್ದಕ್ಕೆ ಮತ್ತಷ್ಟು ಸಿಟ್ಟಿಗೆದ್ದರು ಎಂದಿದ್ದಾರೆ. ಇದನ್ನೂ ಓದಿ: ಗುರಾಯಿಸಿಕೊಂಡು ನೋಡದಂತೆ ವಾರ್ನ್ ಮಾಡಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ

police

ಅಸ್ಸಾಂನಲ್ಲಿ ಪೊಲೀಸರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನೀವೇ ಕಾನೂನುಗಳನ್ನು ಮಾಡಿ, ಅದನ್ನು ಪೊಲೀಸರೆ ಉಲ್ಲಂಘಿಸಿದರೆ ಹೇಗೆ ಎಂದು ಪ್ರಶ್ನಿಸಲು ನಾನು ಅಸ್ಸಾಂ ಸರ್ಕಾರಕ್ಕೆ ಪ್ರಶ್ನಿಸಲು ಬಯಸುತ್ತೇನೆ. ಈ ಕುರಿತಂತೆ ಕಠಿಣ ಕ್ರಮ ಕೈಗೊಳ್ಳುವಂತೆ ನಾನು ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ಈ ಘಟನೆ ರಾತ್ರಿ ಏನಾದರೂ ನಡೆದಿದ್ದರೆ, ಅವರು ನನ್ನನ್ನು ಗುಂಡಿಕ್ಕಿ ಕೊಲ್ಲಬಹುದಾಗಿತ್ತು. ಅವರ ವರ್ತನೆಯಿಂದ ನನಗೆ ಆಘಾತವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತಹಶೀಲ್ದಾರ್ ಮೇಲೆ ಪೆಟ್ರೋಲ್ ಎರಚಿ ಜೀವ ಬೆದರಿಕೆ ಹಾಕಿದ ಮಾಜಿ ಬಿಜೆವೈಎಂ ನಾಯಕ

ಈ ವಿಚಾರವಾಗಿ ಮಾತನಾಡಿದ ಚಿರಾಂಗ್ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಲಾಬಾ ಕ್ರಿ ದೇಕಾ ಅವರು, ಈ ವಿಷಯದಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ. ಇಬ್ಬರು ಕಾನ್‌ಸ್ಟೆಬಲ್‌ಗಳ ವಿರುದ್ಧ ಜಯಂತ್ ದೇಬನಾಥ್ ಅವರ ಎಫ್‍ಐಆರ್ ಆಧರಿಸಿ, ನಾವು ಈ ವಿಷಯದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ನಾವು ಇಬ್ಬರು ಕಾನ್‍ಸ್ಟೆಬಲ್‍ಗಳನ್ನು ಕಾಯ್ದಿರಿಸಿದ್ದೇವೆ ಎಂದಿದ್ದಾರೆ.


Helmet, journalist, policeman, Assam

Share This Article
Leave a Comment

Leave a Reply

Your email address will not be published. Required fields are marked *