ಡಿಸ್ಪುರ್: ನಾಲ್ಕು ತಿಂಗಳ ಗರ್ಭಿಣಿ ಪತ್ನಿಯನ್ನು ಗುಂಡು ಹಾರಿಸಿ ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸ್ ಪೇದೆಯನ್ನು ಬಂಧಿಸಿರುವ ಘಟನೆ ಅಸ್ಸಾಂನ ಸದರ್‌ನಲ್ಲಿ ನಡೆದಿದೆ.
ದಿಬ್ರುಗಢ್ ಜಿಲ್ಲೆಯ ಸದರ್ ಪೊಲೀಸ್ ಠಾಣೆ ಬಳಿಯ ತನ್ನ ಕ್ವಾರ್ಟರ್ ಲ್ಲಿಯೇ ಅಸ್ಸಾಂ ಪೊಲೀಸ್ ಪೇದೆಯೊಬ್ಬ ತನ್ನ ನಾಲ್ಕು ತಿಂಗಳ ಗರ್ಭಿಣಿ ಪತ್ನಿಯನ್ನು ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಈ ಹಿನ್ನೆಲೆ ಆರೋಪಿ ವಿರುದ್ಧ ಸ್ಥಳೀಯರು ದೂರುಕೊಟ್ಟ ಆಧಾರದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಮ್ಯಾಚ್ ವೇಳೆ ಕ್ರೀಡಾಂಗಣಕ್ಕೆ ನುಗ್ಗಿದ ಅಭಿಮಾನಿಗಳು – ನಾಲ್ವರು ಅರೆಸ್ಟ್
Advertisement
Advertisement
ಏನಿದು ಘಟನೆ?
ಪೊಲೀಸ್ ಪೇದೆ ಬಿಕಿ ಚೇತಿಯಾ ತನ್ನ ಸರ್ವಿಸ್ ರಿವಾಲ್ವರ್ ಬಳಸಿ ಪತ್ನಿ ಜಯಶ್ರೀ ಚೇತಿಯಾಗೆ ಗುಂಡು ಹಾರಿಸಿದ್ದಾನೆ. ಈ ದಂಪತಿ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಬ್ಬರ ನಡುವೆ ಕೆಲವು ಕೌಟುಂಬಿಕ ಕಲಹವಿತ್ತು. ಘಟನೆ ನಡೆಯಬೇಕಾದರೆ ಬಿಕಿ ಮದ್ಯದ ಅಮಲಿನಲ್ಲಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಬಿಕಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಕೌಟುಂಬಿಕ ಕಲಹದಿಂದಾಗಿ ತನ್ನ ಹೆಂಡತಿಯನ್ನು ಕೊಂದಿದ್ದಾನೆ. ಭಾನುವಾರ ಈ ಘಟನೆ ನಡೆದಿದೆ. ರಾತ್ರಿ ಗುಂಡು ತಗುಲಿದ ಮೇಲೆ ಜಯಶ್ರೀಯನ್ನು ಅಸ್ಸಾಂ ವೈದ್ಯಕೀಯ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಎಷ್ಟು ಪ್ರಯತ್ನಪಟ್ಟರೂ ಆಕೆಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಭೀಕರ ರಸ್ತೆ ಅಪಘಾತ ತಾಯಿ, ಮಗಳು ಸ್ಥಳದಲ್ಲೆ ಸಾವು – ತಂದೆ ಸ್ಥಿತಿ ಚಿಂತಾಜನಕ!
ಜಯಶ್ರೀ ಸಾವನ್ನಪ್ಪಿರುವುದನ್ನು ತೀವ್ರವಾಗಿ ವಿರೋಧಿಸಿದ ನೂರಾರು ಸ್ಥಳೀಯರು ಸೋಮವಾರ(ಇಂದು) ಬೆಳಗ್ಗೆ ದಿಬ್ರುಗಢ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆ ಪೊಲೀಸರು ಪೇದೆಯನ್ನು ಬಂಧಿಸಿದ್ದಾರೆ. ಪ್ರಸ್ತುತ ಪೊಲೀಸರು ಕೊಲೆಯ ಹಿಂದಿನ ಉದ್ದೇಶ ತಿಳಿಯಲು ತನಿಖೆ ಆರಂಭಿಸಿದ್ದಾರೆ.