ಡಿಸ್ಪುರ್: ತಾನು ಮದುವೆಯಾಗುತ್ತಿರುವವನು ವಂಚಕ ಎಂದು ತಿಳಿದ ನಂತರ ಭಾವಿಪತಿ ವಿರುದ್ಧವೇ ಸಬ್ ಇನ್ಸ್‌ಪೆಕ್ಟರ್ ಎಫ್‍ಐಆರ್ ದಾಖಲಿಸಿದ್ದಾರೆ. ಈ ಸುದ್ದಿ ಅಸ್ಸಾಂನಲ್ಲಿ ವೈರಲ್ ಆಗುತ್ತಿದೆ.
ವಂಚಕ ರಾಣಾ ಪೊಗಾಗ್ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್(ಒಎನ್‍ಜಿಸಿ)ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಎಲ್ಲರನ್ನು ನಂಬಿಸಿದ್ದನು. ಅಷ್ಟೇ ಅಲ್ಲದೇ ಒಎನ್‍ಜಿಸಿನಲ್ಲಿ ಕೆಲಸ ಮಾಡಲು ಇಷ್ಟಪಡುವವರಿಗೆ ಕೆಲಸ ಕೊಡಿಸುವುದಾಗಿ ಭರವಸೆ ಕೊಟ್ಟು ಹಲವರನ್ನು ವಂಚಿಸುತ್ತಿದ್ದನು. ಈ ಹಿನ್ನೆಲೆ ಸತ್ಯ ಬಯಲಿಗೆ ಬಂದ ನಂತರ ಪೊಗಾಗ್‍ನನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಕ್ಯಾನ್ಸರ್ ಚಿಕಿತ್ಸೆಯಲ್ಲಿರುವಾಗಲೇ ಇಂಟರ್ವ್ಯೂ ಅಟೆಂಡ್ ಮಾಡಿದ ಹಠವಾದಿ
Advertisement
Advertisement
ಏನಿದು ಪ್ರಕರಣ?
ಅಸ್ಸಾಂನ ನಾಗಾಂವ್ ಜಿಲ್ಲೆಯ ಸಬ್ ಇನ್ಸ್‍ಪೆಕ್ಟರ್ ಆಗಿದ್ದ ಜುನ್ಮೋನಿ ರಾಭಾ ಅವರೊಂದಿಗೆ ರಾಣಾ ಪೊಗಾಗ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದನು. ಈ ಹಿನ್ನೆಲೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದು, ನವೆಂಬರ್‍ನಲ್ಲಿ ಮದುವೆಯಾಗಲು ನಿರ್ಧರಿಸಲಾಗಿತ್ತು.
Advertisement
Advertisement
ಆದರೆ ಈತ ಒಬ್ಬ ವಂಚಕ ಎಂದು ತಿಳಿದ ತಕ್ಷಣ ಜುನ್ಮೋನಿ, ಆತನ ವಿರೋಧ ಎಫ್‍ಐಆರ್ ದಾಖಲಿಸಿದ್ದಾರೆ. ಈ ಕುರಿತು ಮಾತನಾಡಿದ ಜುನ್ಮೋನಿ, ಅವನು(ರಾಣಾ ಪೊಗಾಗ್) ಎಷ್ಟು ದೊಡ್ಡ ವಂಚಕ ಎಂದು ನನಗೆ ಮಾಹಿತಿ ಕೊಟ್ಟ ಮೂರು ಜನರಿಗೆ ನಾನು ಆಭಾರಿಯಾಗಿದ್ದೇನೆ. ಅವರು ನನ್ನ ಕಣ್ಣುಗಳನ್ನು ತೆರೆಸಿದರು ಎಂದು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: 90 ವರ್ಷದ ಬುದ್ಧಿಮಾಂದ್ಯ ತಾಯಿ, ಮಗನನ್ನು ಗುರುತಿಸುವ ಭಾವನಾತ್ಮಕ ವೀಡಿಯೋ ವೈರಲ್
ಪ್ರಸ್ತುತ ಪೊಗಾಗ್‍ನನ್ನು ಪೊಲೀಸರು ಬಂಧಿಸಿದ್ದು, ಜನರನ್ನು ವಂಚಿಸಿ ಕೋಟ್ಯಂತರ ರೂ. ಸಂಗ್ರಹಿಸಿದ್ದಾನೆ ಎಂದು ತನಿಖೆ ವೇಳೆ ತಿಳಿದುಬಂದಿದೆ.