Child Marriage Crackdown: ಕಾನೂನಿಗೆ ಹೆದರಿ ಮದ್ವೆ ನಿಲ್ಲಿಸಿದ ಪೋಷಕರು, ಆತ್ಮಹತ್ಯೆ ಮಾಡಿಕೊಂಡ ಮಗಳು

Public TV
2 Min Read
Assam Child Marriage Protest

ದಿಸ್ಪುರ್: ಅಸ್ಸಾಂ ಸರ್ಕಾರ (Assam Government) ಬಾಲ್ಯ ವಿವಾಹದ (Child Marriage) ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ಬೆನ್ನಲ್ಲೇ ಪೋಷಕರು ಎಚ್ಚೆತ್ತುಕೊಂಡಿದ್ದಾರೆ. ತಮ್ಮ ಮಕ್ಕಳ ಮೇಲೆ ನಿಗಾ ವಹಿಸಿದ್ದು, ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಿಕೊಳ್ಳುತ್ತಿದ್ದಾರೆ.

ಸರ್ಕಾರದ ಕಠಿಣ ನೀತಿಗೆ ಹೆದರಿ ಕುಟುಂಬವೊಂದು ತಮ್ಮ ಮಗಳ ಮದುವೆ ಮಾಡಲು ನಿರಾಕರಿಸಿದೆ. ಇದರಿಂದ 17 ವರ್ಷದ ಹುಡುಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ನಡೆದಿದೆ.

Assam Police Arrest copy

ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ 17 ವರ್ಷದ ಹುಡುಗಿ ತನ್ನ ಪೋಷಕರು ಭರವಸೆ ಮುರಿದು ತಾನು ಪ್ರೀತಿಸಿದ ಹುಡುಗನನ್ನು ಮದುವೆಯಾಗಲು ನಿರಾಕರಿಸಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ಜೈಲಿಗೋದವರ ಹೆಂಡತಿಯರು, ಮಕ್ಕಳನ್ನ ಅಸ್ಸಾಂ ಸಿಎಂ ನೋಡಿಕೊಳ್ತಾರಾ- ಓವೈಸಿ ಪ್ರಶ್ನೆ

ಕ್ಯಾಚಾರ್‌ನ ಧಲೈ ಪೊಲೀಸ್ (Assam Police) ಠಾಣಾ ವ್ಯಾಪ್ತಿಯ ಖಾಸ್ಪುರ ಗ್ರಾಮದಲ್ಲಿ ವಾಸಿಸುತ್ತಿದ್ದ ಹುಡುಗಿ ಯುವಕನೊಬ್ಬನನ್ನ ಪ್ರೀತಿಸುತ್ತಿದ್ದಳು. ಪೋಷಕರು ಸಹ ಮದುವೆಗೆ ಒಪ್ಪಿದ್ದರು. ಆದರೆ ಅಸ್ಸಾಂ ಸರ್ಕಾರ ಬಾಲ್ಯ ವಿವಾಹಕ್ಕೆ ಕಾನೂನು ನಿರ್ಬಂಧ ಹೇರಿದ ಬಳಿಕ ಹುಡುಗಿ ಪೋಷಕರು ಮದುವೆ ಮಾಡಲು ನಿರಾಕರಿಸಿದರು. ಇದರಿಂದ ಮನನೊಂದ ಹುಡುಗಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾಳೆ.

Himanta Biswa Sarma

ಧುಬ್ರಿ ಜಿಲ್ಲೆಯಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಬಂಧಿಸಿರುವ ತನ್ನ ಪುರುಷ ಹಾಗೂ ತಂದೆಯನ್ನು ಬಿಡುಗಡೆ ಮಾಡುವಂತೆ 23 ವರ್ಷದ ಮಹಿಳೆ ರಂಪಾಟ ಮಾಡಿದ್ದಾಳೆ. ಪೊಲೀಸ್ ಠಾಣೆಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಇಬ್ಬರನ್ನೂ ಬಿಡುಗಡೆ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ.

ಅಫ್ರೋಜಾ ಖಾತುನ್ ಎಂಬಾಕೆ ತಾನು 1999ರಲ್ಲಿ ಜನಿಸಿದ್ದೇನೆ 2018ರಲ್ಲಿ ಮದುವೆಯಾಗಿದ್ದೇನೆ. ಸರಿಯಾಗಿ 19ನೇ ವಯಸ್ಸಿನಲ್ಲಿ ಮದುವೆಯಾಗಿದ್ದೇನೆ. ನಾನು ವಯಸ್ಕಳಾಗಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.

Assam

ಹಿಮಂತ ಬಿಸ್ವಾ ಶರ್ಮಾ (Himanta Biswa Sharma) ನನ್ನ ಪತಿಯನ್ನು ಏಕೆ ಬಂಧಿಸಲು ಹೇಳಿದ್ದಾರೆ? ನನ್ನ ಪತಿ ಮತ್ತು ತಂದೆಯನ್ನ ಜೈಲಿಂದ ಬಿಡುಗಡೆ ಮಾಡದೇ ಇದ್ದರೇ ನಾನು ನ್ಯಾಯಾಲಯ ಆವರಣದಲೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾಳೆ.

ಇದರ ಹೊರತಾಗಿಯೂ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಇದನ್ನು ಕಣ್ಣಾರೆ ಕಂಡ ಮಹಿಳೆ ಸ್ಥಳದಲ್ಲೇ ಕುಸಿದುಬಿದ್ದಿದ್ದಾಳೆ. ಇದನ್ನೂ ಓದಿ: ಬಿನ್‌ ಲಾಡೆನ್‌ನ ಹೊಗಳಿದ್ದ ವ್ಯಕ್ತಿ, ರಾಹುಲ್‌ ಗಾಂಧಿ ಪಿಎಂ ಆಗಬೇಕೆಂದು ಬಯಸಿದ್ದರು – ಕಾಂಗ್ರೆಸ್‌ಗೆ ಬಿಜೆಪಿ ಟಾಂಗ್‌

Assam 2

ಅಸ್ಸಾಂನಲ್ಲಿ ಬಾಲ್ಯ ವಿವಾಹ ತಡೆ ಕಾರ್ಯಾಚರಣೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು ಬಂಧಿತರ ಸಂಖ್ಯೆ 2,441ಕ್ಕೆ ಏರಿಕೆಯಾಗಿದೆ. ಅಲ್ಲದೇ ಈ ಕಾರ್ಯಾಚರಣೆ 2026ರ ವಿಧಾನಸಭಾ ಚುನಾವಣೆವರೆಗೂ ಮುಂದುವರಿಯಲಿದೆ ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *