ದಿಷ್‍ಪುರ್: ಮುಸ್ಲಿಂ ಸಮಾಜದವರು ನಮ್ಮ ಬಿಜೆಪಿ ಪಕ್ಷಕ್ಕೆ ವೋಟ್ ಹಾಕುವುದಿಲ್ಲ. ಅವರು ನಮಗೆ ಹಾಲು ನೀಡದ ಹಸುಗಳು. ಅವರಿಗೆ ನಾವು ಏಕೆ ಮೇವು ನೀಡಬೇಕು ಎಂದು ಅಸ್ಸಾಂನ ದಿಬ್ರುಘರ್ ಕ್ಷೇತ್ರದ ಎಂಎಲ್‍ಎ ಪ್ರಶಾಂತ್ ಫೂಕಾನ್ ವಿವಾದತ್ಮಾಕ ಹೇಳಿಕೆಯನ್ನು ನೀಡಿದ್ದಾರೆ.
ಫೂಕಾನ್ ಅವರು ಸ್ಥಳೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಶೇ.90 ರಷ್ಟು ಹಿಂದೂಗಳು ನಮ್ಮ ಬಿಜೆಪಿ ಪಕ್ಷಕ್ಕೆ ಮತ ಹಾಕುತ್ತಾರೆ ಅದರೆ ಮುಸ್ಲಿಂ ಸಮಾಜದ ಶೇ.90 ರಷ್ಟು ಜನ ನಮಗೆ ವೋಟ್ ಹಾಕುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ವೋಟ್ ಮಾಡುತ್ತಾರೆ. ಒಂದು ಹಸು ನಮಗೆ ಹಾಲನ್ನು ನೀಡದೆ ಇದ್ದರೆ, ಅದಕ್ಕೆ ನಾವು ಮೇವು ಏಕೆ ಹಾಕಬೇಕು ಎಂದು ಹೇಳುವ ಮೂಲಕ ಮುಸ್ಲಿಂ ಸಮಾಜದವರನ್ನು ಹಸುವಿಗೆ ಹೋಲಿಸಿದ್ದರು.
ಈ ವಿಚಾರವಾಗಿ ಕಾಂಗ್ರೆಸ್ ಪಕ್ಷದ ನಾಯಕ ದೇಬಬ್ರತಾ ಸೈಕಿಯ ಅವರು ಅಸ್ಸಾಂನ ಸ್ಪೀಕರ್ ಅವರಿಗೆ ಪತ್ರ ಬರೆದಿದ್ದು ಮುಸ್ಲಿಂರನ್ನು ಹಸುಗಳಿಗೆ ಹೋಲಿಸಿದ ಪ್ರಶಾಂತ್ ಫೂಕಾನ್ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹ ಮಾಡಿದ್ದಾರೆ. ಅಸ್ಸಾಂ ಮುಸ್ಲಿಂರು ನಮಗೆ ವೋಟ್ ಮಾಡುವುದಿಲ್ಲ ಅದಕ್ಕಾಗಿ ನಮ್ಮ ಸರ್ಕಾರದಲ್ಲಿ ಮುಸ್ಲಿಂ ಸಮಾಜದ ಕಲ್ಯಾಣಕಾಗಿ ನಾವು ಏನೂ ಮಾಡುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ ಎಂದು ಸೈಕಿಯ ಆರೋಪ ಮಾಡಿದ್ದಾರೆ.
ಪ್ರಶಾಂತ್ ಫೂಕಾನ್ ಅವರು ಈ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದು, ನಾನು ಶೇ.90 ರಷ್ಟು ಮುಸ್ಲಿಂರು ನಮಗೆ ವೋಟ್ ಹಾಗುವುದಿಲ್ಲ ಎಂಬ ವಿಚಾರಕ್ಕೆ ಹಾಲು ನೀಡದ ಹಸುಗಳಿಕೆ ಏಕೆ ನಾವು ಮೇವು ಹಾಕಬೇಕು ಎಂದು ಅಸ್ಸಾಂ ಗಾದೆ ಹೇಳಿದೆ. ಅದನ್ನು ಬಿಟ್ಟರೆ ನಾನು ಮುಸ್ಲಿಂರನ್ನು ಹಸುವಿಗೆ ಹೋಲಿಸಿಲ್ಲ ಎಂದು ಹೇಳಿದ್ದಾರೆ.
ಅಸ್ಸಾಂ ರಾಜ್ಯದ ಬಿಜೆಪಿ ಉಪಾಧ್ಯಕ್ಷರಾದ ತೌಫಿಕ್ರೆ ರಹಮಾನ್ ಅವರು ಈ ವಿಚಾರದ ಬಗ್ಗೆ ಮಾತನಾಡಿ ಫೂಕನ್ ಅವರ ಹೇಳಿಕೆಗೆ ನಮ್ಮ ಪಕ್ಷ ಇನ್ನೂ ಯಾವುದೇ ರೀತಿಯ ಅಧಿಕೃತವಾದ ಹೇಳಿಕೆ ನೀಡಿಲ್ಲ ಎಂದು ಹೇಳಿದ್ದಾರೆ.