– ಅಸ್ಸಾಂ ವಿಧಾನಸಭೆಗೆ ಶುಕ್ರವಾರ 2 ಗಂಟೆ ನಮಾಜ್‌ಗೆ ಬ್ರೇಕ್ ರದ್ದುಪಡಿಸುವ ನಿರ್ಣಯ ಸ್ವಾಗತಾರ್ಹ
ಹುಬ್ಬಳ್ಳಿ: ವಿಧಾನಸಭೆ, ಲೋಕಸಭೆ, ರಾಜ್ಯಸಭೆಗಳು ನಮಾಜ್ ಮಾಡಲು ಇವೆಯೇ? ನಾನು ಶ್ರೀ ರಾಘವೇಂದ್ರ ಸ್ವಾಮಿ ಆರಾಧಕ. ನಾನು ಅಂದು ಗುರು ರಾಯರನ್ನು ಆರಾಧಿಸಬೇಕು. 2 ತಾಸು ಸದನ ಮುಂದೂಡಿ ಅಥವಾ ಅಂದು ರಜೆ ಘೋಷಿಸಿ ಎಂದರೆ ಆಗುತ್ತದೆಯೇ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಪ್ರಶ್ನಿಸಿದ್ದಾರೆ.
ಶುಕ್ರವಾರವೂ ವಿಧಾನಸಭೆ ಕಲಾಪಕ್ಕೆ ಬ್ರೇಕ್ ನೀಡದೇ ಮುಂದುವರಿಸುವ ಬಗ್ಗೆ ಕೈಗೊಂಡ ಅಸ್ಸಾಂ ವಿಧಾನಸಭೆ (Assam Legislative Assembly) ನಿರ್ಣಯದ ಬಗ್ಗೆ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಸ್ಸಾಂ ವಿಧಾನಸಭೆಯಲ್ಲಿ ಶುಕ್ರವಾರ, ಮುಸ್ಲಿಂ ಶಾಸಕರಿಗೆ ನೀಡುತ್ತಿದ್ದ 2 ಗಂಟೆ ನಮಾಜ್ (Namaz) ಬ್ರೇಕ್ ರದ್ದುಗೊಳಿಸಲು ಕೈಗೊಂಡ ನಿರ್ಣಯ ಸರಿಯಾಗಿದೆ. ಸಂಸತ್ ಮತ್ತು ವಿಧಾನಸಭೆ ನಮಾಜ್ ಮಾಡುವ ಸ್ಥಳವೇ? ಇದು ತುಷ್ಟೀಕರಣದ ಪರಮಾವಧಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಜೈಲಿನಲ್ಲಿ ಬೀಡಿ, ಸಿಗರೇಟಿಗಾಗಿ ಕೈದಿಗಳ ಪ್ರತಿಭಟನೆ
ರಾಯರ ಆರಾಧನೆಗೆ ಗುರುವಾರ ಬ್ರೇಕ್ ಕೊಡಿ ಎಂದರೆ ಹೇಗಿರುತ್ತದೆ? ನಾನು ಶ್ರೀ ರಾಘವೇಂದ್ರ ಸ್ವಾಮಿ ಆರಾಧಕ. ನನ್ನಂತೆ ಎಲ್ಲಾ ಸದಸ್ಯರು ಅವರವರ ದೈವರಾಧನೆಗೆ ಸದನಕ್ಕೆ 2 ಗಂಟೆ ವಿರಾಮ ನೀಡಿ, ಸೋಮವಾರ ರಜೆ ಕೊಡಿ, ಗುರುವಾರ ರಜೆ ಕೊಡಿ ಎನ್ನಬಹುದೇ? ಅದೆಲ್ಲ ನಡೆಯುವಂಥದ್ದೇ? ಭಾನುವಾರ ಸದನಕ್ಕೆ ಬ್ರೇಕ್ ಇದ್ದೇ ಇರುತ್ತದೆ. ನಮ್ಮ ನಮ್ಮ ವೈಯಕ್ತಿಕ ಅನುಕೂಲಕ್ಕೆ ಸೋಮವಾರ ಕೊಡಿ ಎಂದರೆ ಅದು ಎಷ್ಟರ ಮಟ್ಟಿಗೆ ಸಮಂಜಸವಾಗಿರುತ್ತದೆ ಎಂದು ಹರಿಹಾಯ್ದರು. ಇದನ್ನೂ ಓದಿ: Shivamogga | ಪ್ರೀತಿಸಲು ಹುಡುಗಿ ಸಿಗಲಿಲ್ಲ ಅಂತ ತುಂಗಾ ನದಿಗೆ ಹಾರಿ ಯುವಕ ಆತ್ಮಹತ್ಯೆ!
ಅಸ್ಸಾಂ ವಿಧಾನಸಭೆ ಮುಸ್ಲಿಂ ಶಾಸಕರಿಗೆ ಶುಕ್ರವಾರ 2 ಗಂಟೆ ಕಲಾಪಕ್ಕಿದ್ದ ವಿರಾಮವನ್ನು ರದ್ದುಪಡಿಸಲು ಕೈಗೊಂಡ ನಿರ್ಣಯ ಸ್ವಾಗತಾರ್ಹ. ಆದರೆ, ವಿಪಕ್ಷಗಳು ಇದನ್ನು ವಿರೋಧಿಸುವುದು ತುಷ್ಟೀಕರಣದ ಪರಮಾವಧಿ ಆಗಿದೆ ಮತ್ತು ಅವರ ಬೇಕೂಫಿತನವನ್ನು ಪ್ರದರ್ಶಿಸುತ್ತದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಟಿಕೆಟ್ ಸಿಗಲಿ, ಸಿಗದೇ ಇರಲಿ ಪಕ್ಷದ ಜೊತೆ ಇರ್ತೇನೆ, ಜೆಡಿಎಸ್‌ಗೆ ಟಿಕೆಟ್ ಕೊಟ್ರೂ ಕೆಲಸ ಮಾಡ್ತೇನೆ: ಸಿಪಿವೈ