ಉಡುಪಿ: ಮಹೇಶ್ ಶೆಟ್ಟಿ ತಿಮರೋಡಿಯನ್ನು (Mahesh Shetty Thimarody) ಬಂಧಿಸಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಎಎಸ್ಪಿ (ASP) ಕಾರಿಗೆ ಹಿಂದಿನಿಂದ ಗುದ್ದಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ತಿಮರೋಡಿಯ ಮೂವರು ಬೆಂಬಲಿಗರನ್ನು ಬಂಧಿಸಲಾಗಿದೆ.
ಕಾರಿನಲ್ಲಿದ್ದ ಸೃಜನ್, ಹಿತೇಶ್ ಹಾಗೂ ಸಹನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಉಡುಪಿ (Udupi) ಜಿಲ್ಲೆ ಕಾರ್ಕಾಳ (Karkala) ತಾಲೂಕಿನ ಹೊಸಮಾರು ಬಳಿ ಘಟನೆ ನಡೆದಿದೆ. ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಿ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಎಎಸ್ಪಿ ಕಾರು ಕೂಡ ಪೊಲೀಸರೊಂದಿಗೆ ತೆರಳುತ್ತಿತ್ತು. ಈ ವೇಳೆ ಮಹೇಶ್ ಶೆಟ್ಟಿ ತಿಮರೋಡಿಯ ಬೆಂಬಲಿಗರು ಹಿಂದಿನಿಂದ ಎಎಸ್ಪಿ ಕಾರಿಗೆ ಗುದ್ದಿದ್ದಾರೆ. ಇದನ್ನೂ ಓದಿ: ಬೀದಿ ನಾಯಿಗಳ ಸ್ಥಳಾಂತರ ಸಂಬಂಧ ಎಂಸಿಡಿ ಅಧಿಸೂಚನೆ – ಅರ್ಜಿಯ ತುರ್ತು ವಿಚಾರಣೆ ನಿರಾಕರಿಸಿದ ಸುಪ್ರೀಂ
ಘಟನೆ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಎನ್‌ಎಸ್ ಸೆಕ್ಷನ್ 132 (ಸರಕಾರಿ ನೌಕರರ ಕರ್ತವ್ಯ ಅಡ್ಡಿ), 121 (ಪೊಲೀಸರನ್ನು ಗಾಯಗೊಳಿಸಿದ್ದು), 281 (ಅಪಘಾತ) ಹಾಗೂ 3(5) (ಅಕ್ರಮ ಕೂಟ) ಅಡಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಸು ಫ್ರಂ ಸೋ ರೀತಿ ಈ ಸರ್ಕಾರ ಬಿ ಫ್ರಂ ಸಿ – ಕಾಂಗ್ರೆಸ್ ವಿರುದ್ಧ ಸುನಿಲ್ ಕುಮಾರ್ ವಾಗ್ದಾಳಿ