ಬೆಂಗಳೂರು: ಸಹಾಯಕ ಲೋಕೋ ಪೈಲಟ್ ಮುಂಬಡ್ತಿ ಪರೀಕ್ಷೆಯನ್ನು(Assistant Loco Pilot Promotion Exam) ಕನ್ನಡದಲ್ಲೂ (Kannada) ಬರೆಯಲು ನೈಋತ್ಯ ರೈಲ್ವೆ (South Western Railway) ಆದೇಶ ಪ್ರಕಟಿಸಿದೆ.
ರೈಲ್ವೇ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ಬರೆಯಬೇಕಿತ್ತು. ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾದ ಬಳಿಕ ಕೇಂದ್ರ ರೈಲ್ವೇ ಸಚಿವ ಸೋಮಣ್ಣ (Somanna) ಕನ್ನಡದಲ್ಲಿ ಪರೀಕ್ಷೆ ಬರೆಯುವುದಕ್ಕೆ ಅವಕಾಶ ಮಾಡಿಕೊಡುವುದಾಗಿ ಕಳೆದ ಬಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ವಿ. ಸೋಮಣ್ಣ ಅವರ ಸೂಚನೆ ಮೇರೆಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ. ಇದನ್ನೂ ಓದಿ: ಇಂದು ಉತ್ತರ ಕನ್ನಡದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ: IMD
- Advertisement -
- Advertisement -
ಸಾಮಾನ್ಯ ವಿಭಾಗೀಯ ಸ್ಪರ್ಧಾತ್ಮಕ ಸಹಾಯಕ ಲೋಕೋಪೈಲಟ್ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸುವ ಕುರಿತು ನೈಋತ್ಯ ರೈಲ್ವೆ ವಲಯ ಅಧಿಕೃತ ಆದೇಶ ಹೊರಡಿಸಿದೆ.
- Advertisement -
ಈ ಹಿಂದೆ ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲಿ ಮಾತ್ರ ಪರೀಕ್ಷೆ ಬರೆಯಲು ಇತ್ತು. ಹಾಲ್ ಟಿಕೆಟ್ ನಲ್ಲಿ ಎರಡು ಭಾಷೆ ಮಾತ್ರ ಆಯ್ಕೆಗಳನ್ನು ನೀಡಲಾಗಿತ್ತು. ಈಗ ಕನ್ನಡ, ಹಿಂದಿ, ಇಂಗ್ಲಿಷ್ ಮೂರು ಭಾಷೆಗಳಲ್ಲೂ ಪರೀಕ್ಷೆ ಬರೆಯಲು ಅವಕಾಶ ಇದೆ.