– ಫ್ಯಾನ್ಸ್ ಮೆಚ್ಚುಗೆಗೆ ಪಾತ್ರವಾಯ್ತು ಶಾರೂಕ್ ಉತ್ತರ
ಮುಂಬೈ: ಕೊರೊನಾ ಲಾಕ್ಡೌನ್ ವೇಳೆ ನೀವೂ ನಮ್ಮ ರೀತಿ ನಿರುದ್ಯೋಗಿ ಆಗಿದ್ರಾ? ಪ್ರಶ್ನೆಗೆ ಬಾಲಿವುಡ್ ಕಿಂಗ್ ಶಾರೂಖ್ ಖಾನ್ ನೀಡಿದ ಉತ್ತರ ಅಭಿಮಾನಿಗಳ ಹೃದಯ ಕದ್ದಿದೆ. ಟ್ವಿಟರ್ ನಲ್ಲಿ ಶಾರೂಖ್ ಖಾನ್, ನೀವು ಪ್ರಶ್ನೆ ಕೇಳಬಹುದು. ನಾವು ನಿಮಗೆ ಉತ್ತರ ನೀಡುತ್ತೇನೆ ಎಂದು ಹೇಳಿದ್ದರು.
ಈ ಟ್ವೀಟ್ ಬರುತ್ತಿದ್ದಂತೆ ಅಭಿಮಾನಿಗಳು #AskSRK ಟ್ಯಾಗ್ ಬಳಸಿ ಪ್ರಶ್ನೆ ಕೇಳಲಾರಂಭಿಸಿದರು. ಬಹುತೇಕ ಅಭಿಮಾನಿಗಳು ನಿಮ್ಮನ್ನು ತೆರೆಯ ಮೇಲೆ ನೋಡದೇ ಸುಮಾರು ವರ್ಷಗಳಾಯ್ತು ಎಂದು ಬೇಸರ ಹೊರ ಹಾಕಿದ್ದರು. ಇನ್ನೂ ಕೆಲವರು ಖಾಸಗಿ ಜೀವನದ ಕುರಿತು ಪ್ರಶ್ನೆ ಮಾಡಿದ್ದರು. ಎಲ್ಲ ಪ್ರಶ್ನೆಗಳಿಗೂ ಶಾರೂಖ್, ತಮ್ಮದೇ ಶೈಲಿಯಲ್ಲಿ ಅಂದ್ರೆ ನೇರ ಉತ್ತರ ನೀಡುತ್ತಿದ್ದರು.
ಈ ವೇಳೆ ನಿತಿನ್ ಚೌಧರಿ ಎಂಬವರು, ಏನ್ ಸರ್.. ನೀವು ನಮ್ಮ ರೀತಿ ನಿರುದ್ಯೋಗಿ ಆಗಿದ್ದೀರಾ ಎಂದು ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ಸರಳವಾಗಿ ಉತ್ತರಿಸಿದ ಶಾರೂಖ್ ಖಾನ್, ಯಾರೂ ಏನು ಮಾಡಲ್ಲ ಅವರು ನಿರುದ್ಯೋಗಿ ಅಂತ ಖಡಕ್ ತಿರುಗೇಟು ನೀಡಿದ್ದಾರೆ. ಶಾರೂಖ್ ಖಾನ್ ನೀಡಿದ ಈ ಉತ್ತರ ಟ್ರೋಲ್ ಮೂಲಕ ಅಭಿಮಾನಿಗಳು ಶೇರ್ ಮಾಡಿಕೊಳ್ಳುತ್ತಿದ್ದಾರೆ.
Jo kuch nahi karte….woh… https://t.co/kQl4jbdQ5v
— Shah Rukh Khan (@iamsrk) June 25, 2021
ಕೊರೊನಾ ಸಾಂಕ್ರಾಮಿಕ ರೋಗದಿಂದ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಡ್ಯಾನ್ಸ್ ನಂಬರ್ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅಂತ ಅಭಿಮಾನಿಯ ಪ್ರಶ್ನೆಗೂ ಶಾರೂಖ್ ಉತ್ತರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚು ಸಿನಿಮಾಗಳು ರಿಲೀಸ್ ಆಗಲಿವೆ ಗೆಳೆಯ ಅಂತ ಹೇಳಿದ್ದಾರೆ.
2018ರಲ್ಲಿ ಶಾರೂಖ್ ನಟನೆಯ ಝೀರೋ ಸಿನಿಮಾ ಬಿಡುಗಡೆಗೊಂಡಿತ್ತು. ಈ ಚಿತ್ರದಲ್ಲಿ ಅನುಷ್ಕಾ ಶರ್ಮಾ, ಕತ್ರಿನಾ ಕೈಫ್ ಸೇರಿದಂತೆ ದೊಡ್ಡ ತಾರಾ ಬಳಗವನ್ನು ಹೊಂದಿತ್ತು. ಆದ್ರೆ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. ಸಾಲು ಸಾಲು ಸಿನಿಮಾಗಳು ಫ್ಲಾಪ್ ಆಗತ್ತಿರೋದರಿಂದ ಶಾರೂಖ್ ಖಾನ್ ಮುಂದಿನ ಪ್ರೊಜೆಕ್ಟ್ ತುಂಬಾನೇ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದ್ರೆ ಸಿನಿಮಾದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ.