ಕಾರವಾರ: ಪೊಲೀಸ್ (Police) ಜೀಪ್‍ಗೆ ಡಿಸೇಲ್ (Diesel) ಹಾಕಿಸಿ ಹಣ ನೀಡದೇ ಹೋಗಿದ್ದಕ್ಕೆ ಡಿಸೇಲ್ ಹಣ ಕೊಡುವಂತೆ ಪೆಟ್ರೋಲ್ ಬಂಕ್‍ನ (Petrol Bunk) ಸಿಬ್ಬಂದಿ ಕೇಳಿದ ಎಂದು ಠಾಣೆಗೆ ಕರೆಸಿ ಚಿತ್ರಹಿಂಸೆ ನೀಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದಿದೆ.
Advertisement
ರಾಘು ಎಂಬ ಯುವಕ ಪೊಲೀಸರ ದೌರ್ಜನ್ಯಕ್ಕೆ ಒಳಗಾದ ಪೆಟ್ರೋಲ್ ಬಂಕ್ ಸಿಬ್ಬಂದಿ. ಮಹಾದೇವ ಬಂಡಿಗೇರಿ ಚಿತ್ರಹಿಂಸೆ ನೀಡಿದ ಪೊಲೀಸ್ ಕಾನ್ಸ್‌ಟೇಬಲ್. ಸೋಮವಾರ ನಗರದದ ಬೆಂಡಿಗೇರಿ ಪೆಟ್ರೋಲ್ ಬಂಕ್‍ಗೆ ಡಿಸೇಲ್ ಹಾಕಿಸಲು ಮುಂಡಗೋಡು ಠಾಣೆ ಕಾನ್ಸ್‌ಟೇಬಲ್ ಮಹಾದೇವ ಬಂಡಿಗೇರಿ ಆಗಮಿಸಿದ್ದು, 30 ಲೀಟರ್ ಡಿಸೇಲ್ ಹಾಕಿಸಿದ್ದಾರೆ. ಈ ವೇಳೆ ರಾಘು ಡಿಸೇಲ್ ಹಣ ಕೇಳಿದ್ದಾರೆ. ಸಂಜೆ ಕೊಡುವುದಾಗಿ ಹೇಳಿ ಹೋದ ಕಾನ್ಸ್‌ಟೇಬಲ್ ಹಣ ನೀಡಿರಲಿಲ್ಲ. ಇದಕ್ಕಾಗಿ ಅವರಿಗೆ ಕರೆಮಾಡಿದಾಗ ಅವಾಚ್ಯ ಶಬ್ದದಿಂದ ನಿಂದಿಸಿ ಠಾಣೆಗೆ ಕರೆಸಿಕೊಂಡಿದ್ದಾರೆ. ನಂತರ ಈತನಿಗೆ ಹಣ ಕೇಳಿದ್ದಕ್ಕೆ ಬೂಟು ಕಾಲಿನಿಂದ ಒದ್ದು, ಬೆಲ್ಟ್ ನಿಂದ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿ ಕಳುಹಿಸಿದ್ದಾರೆ. ಇದನ್ನೂ ಓದಿ: ಬಂಡೇ ಮಠದ ಶ್ರೀ ಬರೆದಿದ್ದು ಒಟ್ಟು 6 ಪುಟಗಳ ಡೆತ್‍ನೋಟ್ – ಈಗಾಗಲೇ 20 ಮಂದಿಯ ವಿಚಾರಣೆ
Advertisement
Advertisement
ಪೊಲೀಸಪ್ಪನ ಬೋಟುಗಾಲು ಹೊಡೆತಕ್ಕೆ ರಾಘು ಜರ್ಜರಿತರಾಗಿದ್ದು, ಮುಂಡಗೋಡು ಸರ್ಕಾರಿ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಠಾಣೆಗೆ ಬಂದು ಸಾರ್ವಜನಿಕರು ಪ್ರಶ್ನಿಸಿದಾಗ ರಾಜಿ ಸಂಧಾನ ಮಾಡಿ ಪ್ರಕರಣ ಇತ್ಯರ್ಥಗೊಳಿಸಿದ್ದಾರೆ. ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಮತ್ತಷ್ಟು ಹಣ ಬಿಡುಗಡೆ ಮಾಡಲು ಮುಂದಾದ ಸರ್ಕಾರ