ಬೆಂಗಳೂರು: ಪಹಲ್ಗಾಮ್‌ನಲ್ಲಿ (Palagham) ಸಾಲಾಗಿ ನಿಲ್ಲಿಸಿ ಹಿಂದೂನಾ ಅಂತ ಕೇಳಿ ಗುಂಡಿಟ್ಟು ಕೊಂದಿದ್ದಾರೆ ಎಂದು ದಾಳಿಯಲ್ಲಿ ಮೃತಪಟ್ಟ ಭರತ್ ಭೂಷಣ್ ಅವರ ಅತ್ತೆ ನಿರ್ಮಲಾ ಕಣ್ಣೀರಿಟ್ಟಿದ್ದಾರೆ.
`ಪಬ್ಲಿಕ್ ಟಿವಿ’ ಜೊತೆ ಮಾತನಾಡಿರುವ ಅವರು, ಕಾಶ್ಮೀರಕ್ಕೆ (Jammu Kashmir) ಏ.18ಕ್ಕೆ ಹೋಗಿದ್ದರು, ಇಂದು ಬೆಳಗ್ಗೆ 7 ಗಂಟೆಗೆ ಶ್ರೀನಗರದಿಂದ ಬೆಂಗಳೂರಿಗೆ (Bengaluru) ಬರಬೇಕಿತ್ತು. ಮದ್ವೆಯಾಗಿ 4 ವರ್ಷ ಆಗಿತ್ತು, ಮೂರು ವರ್ಷದ ಮಗು ಇತ್ತು. ಹಿಂದೂನಾ ಅಂತ ಕೇಳಿ ಸಾಲಾಗಿ ನಿಲ್ಲಿಸಿ ಗುಂಡಿಟ್ಟು ಕೊಂದಿದ್ದಾರೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಅಸ್ಸಾಂ ಪ್ರೊಫೆಸರ್ ದೇಬಶೀಶ್ ಭಟ್ಟಾಚಾರ್ಯ ಜೀವ ಉಳಿಸಿದ ಕಲಿಮಾ
ಇವತ್ತು ಬೆಂಗಳೂರಿಗೆ ಬರಬೇಕಿತ್ತು. ಆದರೆ ನಿನ್ನೆ ಈ ರೀತಿಯಾಗಿದೆ. ಘಟನೆಯಾದಾಗ ಬಳಿಕ ಮಗಳು ಕರೆ ಮಾಡಿ ವಿಷಯ ತಿಳಿಸಿದಳು. ನಾವೆಲ್ಲ ನಿಂತಾಗ ಸಡನ್ ಆಗಿ ಬಂದು ಹಿಂದೂನಾ? ಮುಸ್ಲಿಮಾ? ಅಂತ ಕೇಳಿ ಗುಂಡು ಹಾರಿಸಿದ್ದಾರೆ. ಶೂಟ್ ಮಾಡಿದ ತಕ್ಷಣ ನನ್ನ ಮಗಳು ಭರತ್ ಪ್ಯಾಂಟ್‌ನಿಂದ ಮೊಬೈಲ್, ಆಧಾರ್ ಸೇರಿ ಇನ್ನಿತರ ಡಾಕ್ಯುಮೆಂಟ್‌ಗಳನ್ನು ಎತ್ತಿಕೊಂಡು ಮಗುವನ್ನು ಕರೆದುಕೊಂಡು ಕುದುರೆಯಲ್ಲಿ ಸ್ಥಳದಿಂದ ಬೇರೆ ಕಡೆಗೆ ಹೋಗಿದ್ದಾಳೆ. ಬಳಿಕ ಭರತ್ ಶವವನ್ನು ಶ್ರೀನಗರಕ್ಕೆ ಕೊಂಡೊಯ್ಯದಿದ್ದಾರೆ ಎಂದು ಮಾಹಿತಿ ನೀಡಿದರು.
ಭಯೋತ್ಪಾದಕರು ಒಬ್ಬರ ನಂತರ ಇನ್ನೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಒಬ್ಬೊಬ್ಬರ ಮೇಲೆ ಐದು ನಿಮಿಷಗಳ ಕಾಲ ಗುಂಡು ಹಾರಿಸಿದ್ದು, ಎಲ್ಲರ ತಲೆಗೆ ಗುಂಡಿಕ್ಕಿ ಕೊಂದಿದ್ದಾರೆ ಎಂದು ಹೇಳಿದರು.
ಇನ್ನೂ ಈ ಕುರಿತು ಭೂಷಣ್ ಸೋದರ ಮಾವ ಮಾತನಾಡಿ, ಇಂದು ರಾತ್ರಿ 10:45ಕ್ಕೆ ಸುಂದರ ನಗರದ ನಿವಾಸಕ್ಕೆ ಪಾರ್ಥಿವ ಶರೀರ ಬರಲಿದೆ. ಗುಂಡು ಹಾರಿಸಿ ನಂತರ ಕೆಳಗೆ ಬಿದ್ದ ಗಂಡನನ್ನ ಹೆಂಡತಿ ಪರಿಶೀಲಿಸಿದ್ದಾರೆ. ಆಗ ಉಸಿರು ನಿಂತಿತ್ತು. ಕೂಡಲೇ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾಳೆ. ನಾಳೆ ಹೆಬ್ಬಾಳ (Hebbal) ಚಿತಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.ಇದನ್ನೂ ಓದಿ: ಇಂದು ಮನೆಗೆ ಮರಳಬೇಕಿದ್ದ ಉದ್ಯಮಿ ಉಗ್ರರ ಗುಂಡಿಗೆ ಬಲಿ – ಇಡೀ ಗ್ರಾಮದಲ್ಲಿ ಮಡುಗಟ್ಟಿದ ಮೌನ