ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಮೋದಿ, ಯೋಗಿಯನ್ನ ಕೇಳಿ ಅಂದ ರಾಹುಲ್ ಗಾಂಧಿ-ವಿಡಿಯೋ ನೋಡಿ

Public TV
1 Min Read
Rhul amethi school

ಲಕ್ನೋ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ತವರು ಕ್ಷೇತ್ರ ಅಮೇಥಿ ಪ್ರವಾಸದಲ್ಲಿದ್ದಾರೆ. ಅಮೇಥಿಯ ರಸ್ತಾ ಮವೋ ಗ್ರಾಮದ ಶಾಲೆಯೊಂದಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಅವರಿಗೆ ಅಲ್ಲಿಯ ಮಕ್ಕಳು ಕೇಳಿದ ಪ್ರಶ್ನೆಗೆ, ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಉತ್ತರ ನೀಡ್ತಾರೆ ಅವರನ್ನ ಹೋಗಿ ಕೇಳಿ ಅಂತಾ ಹೇಳಿದ್ದಾರೆ.

ಕೇಂದ್ರ ಸರ್ಕಾರ ಸಾಕಷ್ಟು ಕಾನೂನುಗಳನ್ನು ರೂಪಿಸುತ್ತಿದ್ದು, ಆದ್ರೆ ಗ್ರಾಮೀಣಮಟ್ಟಗಳಲ್ಲಿ ಯಾಕೆ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ ಅಂತಾ ವಿದ್ಯಾರ್ಥಿನಿ ರಾಹುಲ್ ಗಾಂಧಿಗೆ ಪ್ರಶ್ನೆ ಮಾಡಿದ್ದಾಳೆ. ಕೇಂದ್ರದಲ್ಲಿ ಸದ್ಯ ನಮ್ಮ ಸರ್ಕಾರವಿಲ್ಲ. ಈ ಪ್ರಶ್ನೆಯನ್ನು ಪ್ರಧಾನಿ ಮೋದಿ ಅವರಿಗೆ ಕೇಳುವುದು ಸೂಕ್ತ. ನಾವು ಅಧಿಕಾರದಲ್ಲಿ ಬಂದಾಗ ಈ ಪ್ರಶ್ನೆಗೆ ನಾನು ಉತ್ತರಿಸಬಲ್ಲೆ ಅಂತಾ ಉತ್ತರಿಸಿದ್ದಾರೆ.

modi and yogi

ವಿದ್ಯಾರ್ಥಿನಿ ಅಮೇಥಿಯಲ್ಲಿ ವಿದ್ಯುತ್ ಸಂಪರ್ಕದ ಅವ್ಯವಸ್ಥೆಯ ಬಗ್ಗೆ ಪ್ರಶ್ನೆ ಕೇಳಿದ್ದಾಳೆ. ಇದನ್ನು ಸಿಎಂ ಯೋಗಿ ಆದಿತ್ಯನಾಥ್‍ರನ್ನು ಕೇಳಿ, ನಾನು ಅಮೇಥಿ ಕ್ಷೇತ್ರದ ಸಂಸದ. ಲೋಕಸಭೆಯಲ್ಲಿ ಕುಳಿತು ಕಾನೂನುಗಳನ್ನು ರೂಪಿಸುತ್ತೇನೆ. ಆದ್ರೆ ಅಮೇಥಿಯನ್ನು ಚಾಲನೆ ಮಾಡುತ್ತಿರೋದು ಯೋಗಿ ಜೀ. ಉತ್ತರ ಪ್ರದೇಶದ ಚಾಲನೆ ಸಿಎಂ ಯೋಗಿ ಆದಿನಾಥ್ಯರ ಕೈಲಿದೆ. ಯುಪಿ ಚಾಲನೆ ಮಾಡೋದನ್ನು ಬಿಟ್ಟು ಯೋಗಿ ಜೀ ಬೇರೆ ಕೆಲಸಗಳಲ್ಲಿ ಮಗ್ನರಾಗಿದ್ದಾರೆ ಅಂತಾ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ರು.

ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಸಾರ್ವಜನಿಕರಿಗೆ ವಿದ್ಯುತ್, ಕುಡಿಯುವ ನೀರು, ಶಿಕ್ಷಣ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಅಂತಾ ವಾಗ್ದಾಳಿ ನಡೆಸಿದ್ರು.

ರಾಹುಲ್ ಗಾಂಧಿ ಅಮೇಥಿ ಮತ್ತು ರಾಯಬರೇಲಿಯಲ್ಲಿ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಅಮೇಥಿ ಸ್ವಕ್ಷೇತ್ರವಾದ್ರೆ, ರಾಯಬರೇಲಿ ಲೋಕಸಭಾ ಕ್ಷೇತ್ರವನ್ನು ತಾಯಿ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *