ಬೆಂಗಳೂರು: ಅಸಿಸ್ಟೆಂಟ್ ಫ್ರೊಫೆಸರ್ ಪ್ರಶ್ನೆಪತ್ರಿಕೆ ಲೀಕ್ ಪ್ರಕರಣ ಸಂಬಂಧ ತನ್ನ ತಪ್ಪನ್ನು ಆರೋಪಿ ಸೌಮ್ಯಾ ಒಪ್ಪಿಕೊಂಡಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಭೂಗೋಳ ಶಾಸ್ತ್ರ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ ತಂಡದಲ್ಲಿದ್ದ ನಾಗರಾಜ್ ಮನೆಗೆ ಆಗಾಗ ಹೋಗುತ್ತಿದ್ದಾಗಿ ಆರೋಪಿ ಸೌಮ್ಯ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾಳೆ. ನಾಗರಾಜ್ ಬಳಿ ಇದ್ದ ಬುಕ್ಸ್ ಗಳನ್ನ ಓದುವುದು ಮಾಡ್ತಿದ್ದೆ. ಅವರು ಪ್ರಶ್ನೆ ಪೇಪರ್ ತಯಾರು ಮಾಡುವ ಕಮಿಟಿಯಲ್ಲಿರೋದು ಗೊತ್ತಿತ್ತು ಎಂದಿದ್ದಾಳೆ.
Advertisement
Advertisement
ನಾಗರಾಜ್ ಟೇಬಲ್ ಮೇಲೆ ಕ್ವೆಶ್ಚೆನ್ ಪೇಪರ್ ನ ಎನ್ವಲಪ್ ಇತ್ತು. ನಾನು ಯಾರಿಗೂ ಗೊತ್ತಾಗದ ಹಾಗೆ ಫೋಟೋ ತೆಗೆದುಕೊಂಡು ಬಂದಿದ್ದೆ. ಮರುದಿನ ಕಾಲೇಜಿನ ಬಳಿ ಫ್ರೊಫೆಸರ್ ತಂಗಿ ಮಗಳು ಕುಸುಮಾಗೆ ಪ್ರಶ್ನೆ ಪತ್ರಿಕೆ ಫೋಟೋ ಕಾಪಿ ಕಳಿಸುವಂತೆ ಹೇಳಿದ್ದೆ. ಆಕೆ ಕೂಡ ಕೆಲವೊಂದು ಪ್ರಶ್ನೆಗಳ ಫೋಟೋ ಕಳುಹಿಸಿದ್ದಳು. ಹೀಗೆ ಕ್ವೆಶ್ಚೆನ್ ಪೇಪರ್ ಲೀಕ್ ಹಿಂದಿನ ಇಂಚಿಂಚು ಮಾಹಿತಿಯನ್ನ ಎಳೆ ಎಳೆಯಾಗಿ ಪೊಲೀಸರ ಮುಂದೆ ಸೌಮ್ಯ ಬಿಚ್ಚಿಟ್ಟಿದ್ದಾಳೆ. ಇದನ್ನೂ ಓದಿ: ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣ- ಪ್ರೊಫೆಸರ್ ನಾಗರಾಜ್ ಅರೆಸ್ಟ್
Advertisement
Advertisement
ಸದ್ಯ ಸೌಮ್ಯ ಹೇಳಿಕೆ ಹಾಗೂ ಪ್ರೊಫೆಸರ್ ಹೇಳಿಕೆಯನ್ನ ಹೋಲಿಕೆ ಮಾಡಿ ನೋಡಿರುವ ಪೊಲೀಸರು ಸೌಮ್ಯಳೇ ಕೆಲ ಕ್ವೆಶ್ಚೆನ್ಸ್ ಗಳನ್ನ ಪ್ರೊಫೆಸರ್ ಗೆ ಕಳಿಸಿರುವ ಬಗ್ಗೆ ಸಹ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪಿಎಸ್‌ಐ ನೇಮಕಾತಿ ಅಕ್ರಮ – ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಎತ್ತಂಗಡಿ