ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಎಎಸ್‌ಐ ಮಗಳು ಆತ್ಮಹತ್ಯೆ

Public TV
1 Min Read
Mandya Suhana

ಮಂಡ್ಯ: ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯ (Mandya) ನಗರದ ಬಂದೀಗೌಡ ಬಡಾವಣೆ ಸಮೀಪ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಯುವತಿಯನ್ನು ಮಂಡ್ಯದ ಸಶಸ್ತ್ರ ಮೀಸಲು ಪಡೆಯ ಎಎಸ್‌ಐ ಅನ್ಸರ್ ಪಾಷಾ ಅವರ ಮಗಳು ಸುಹಾನಾ (19) ಎಂದು ಗುರುತಿಸಲಾಗಿದೆ. ಆಕೆ ಮೈಸೂರಿನಲ್ಲಿ (Mysuru) ಪ್ರಥಮ ವರ್ಷದ ಬಿ.ಎ.ವ್ಯಾಸಂಗ ಮಾಡುತ್ತಿದ್ದಳು. ಎಂದಿನಂತೆ ಕಾಲೇಜು ಮುಗಿಸಿಕೊಂಡು ಮನೆಗೆ ಬಂದವಳು ಬೈಕ್ ತೆಗೆದುಕೊಂಡು ಹೋಗಿ ಬಂದೀಗೌಡ ಬಡಾವಣೆ ಬಳಿ ಚಲಿಸುತ್ತಿದ್ದ ಚಾಮುಂಡಿ ಎಕ್ಸ್‌ಪ್ರೆಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ಹನಿಟ್ರ‍್ಯಾಪ್ ಆರೋಪ ಮುಂದೆಯೂ ಬರಬಹುದು: ರಾಜಣ್ಣ ಹೊಸ ಬಾಂಬ್

ಘಟನೆಗೆ‌ ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮಂಡ್ಯ ರೈಲ್ವೇ ಪೊಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗಳನ್ನು ಕಳೆದುಕೊಂಡ ಕುಟುಂಬದವರ ಶೋಕ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಕುಣಿಯಲಾರದವರು ನೆಲ ಡೊಂಕು ಅನ್ನೋ ಹಾಗೆ ಡಿಕೆಶಿ ಮಾತಾಡಬಾರದು: ನಿಖಿಲ್ ಕುಮಾರಸ್ವಾಮಿ

Share This Article