ನವದೆಹಲಿ/ಇಸ್ಲಾಮಾಬಾದ್: ಭಾರತ (India) ಸರ್ಕಾರ ಇನ್‌ಸ್ಟಾ ಖಾತೆಯನ್ನು ನಿರ್ಬಂಧಿಸಿದ ಬೆನ್ನಲ್ಲೇ ಪಾಕ್ ಸೇನಾ ಮುಖ್ಯಸ್ಥ ಮುನೀರ್ (Asif Munir) ವಿರುದ್ಧ ಪಾಕಿಸ್ತಾನದ ಖ್ಯಾತ ನಟಿ ಹನಿಯಾ ಆಮಿರ್ (Hania Aamir) ಕೆಂಡ ಕಾರಿದ್ದಾರೆ.
ಪಹಲ್ಗಾಮ್ ದಾಳಿಗೆ ಅಸಿಮ್ ಮುನೀರ್ ಕಾರಣ. ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನಿ ಸೈನ್ಯ (Pakistan Army) ಮತ್ತು ಇಸ್ಲಾಮಿಕ್ ಭಯೋತ್ಪಾದಕರು (Islamist Terrorists) ಇದ್ದಾರೆ ಎಂದು ನೇರಾನೇರವಾಗಿ ಇನ್‌ಸ್ಟಾ ಸ್ಟೋರಿಯಲ್ಲಿ ಹಾಕಿ ಸಿಟ್ಟು ಹೊರಹಾಕಿದ್ದಾರೆ. ಇದನ್ನೂ ಓದಿ: ನಿಮ್ಗೆ ಹುಚ್ಚು ಹಿಡಿದಿದ್ಯಾ? – ಪಾಕಿಸ್ತಾನದಲ್ಲಿ ಈಗ ಸೇನೆ Vs ಪೊಲೀಸ್ ಕಿತ್ತಾಟ
ಪೋಸ್ಟ್‌ನಲ್ಲಿ ಏನಿದೆ?
ಕಾಶ್ಮೀರದಲ್ಲಿ ಜನರಲ್ ಅಸಿಮ್ ಮುನೀರ್ ಅವರ ಕ್ರಮಗಳಿಂದಾಗಿ ಭಾರತದಲ್ಲಿ ಇಡೀ ಪಾಕಿಸ್ತಾನಿ ಮನರಂಜನಾ ಉದ್ಯಮವನ್ನು ನಿಷೇಧಿಸಲಾಗಿದೆ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸಹ ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ಮಧ್ಯರಾತ್ರಿ ಸುದ್ದಿಗೋಷ್ಠಿ- ಪಾಕ್ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ
ಭಾರತದ ಪ್ರಧಾನ ಮಂತ್ರಿಯವರಲ್ಲಿ ನಾನು ಗೌರವದಿಂದ ವಿನಂತಿ ಮಾಡುತ್ತಿದ್ದೇನೆ. ಪಾಕಿಸ್ತಾನದ ಸಾಮಾನ್ಯ ಜನರಾದ ನಾವು ಭಾರತಕ್ಕೆ ಯಾವುದೇ ತಪ್ಪು ಮಾಡಿಲ್ಲ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನಿ ಸೈನ್ಯ ಮತ್ತು ಇಸ್ಲಾಮಿಕ್ ಭಯೋತ್ಪಾದಕರು ಇದ್ದಾರೆ.
ನೀವು ಸಾಮಾನ್ಯ ಪಾಕಿಸ್ತಾನಿ ಜನರನ್ನು ಯಾಕೆ ಶಿಕ್ಷಿಸುತ್ತಿದ್ದೀರಿ? ದಯವಿಟ್ಟು ಪಾಕಿಸ್ತಾನಿ ಸೈನ್ಯ ಮತ್ತು ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಿ, ಅಮಾಯಕ ನಾಗರಿಕರ ವಿರುದ್ಧ ಕ್ರಮ ಕೈಗೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.
ಭಾರತ ಸರ್ಕಾರ ಮಂಗಳವಾರ ಪಾಕಿಸ್ತಾನ ಮಾಧ್ಯಮಗಳ ಸಾಮಾಜಿಕ ಜಾಲತಾಣ ಖಾತೆಯನ್ನು ನಿರ್ಬಂಧಿಸಿತ್ತು. ಮುಂದುವರಿದ ಭಾಗವಾಗಿ ಪಾಕ್ ಸೆಲೆಬ್ರಿಟಿಗಳ ಸಾಮಾಜಿಕ ಜಾಲತಾಣ ಖಾತೆಯನ್ನು ನಿರ್ಬಂಧಿಸಿದೆ.
ಇನ್‌ಸ್ಟಾದಲ್ಲಿ ಸುಮಾರು 1.8 ಕೋಟಿ ಫಾಲೋವರ್ಸ್ ಹೊಂದಿರುವ ಮಹಿರಾ ಖಾನ್ 2017 ರಲ್ಲಿ ಶಾರುಖ್ ಖಾನ್ ಅಭಿನಯದ ರಯೀಸ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.
ಪಾಕಿಸ್ತಾನ ಬಹುತೇಕ ಯೂಟ್ಯೂಬ್ ಖಾತೆಗಳಿಗಳಿಗೆ, ಸೆಲೆಬ್ರೆಟಿಗಳಿಗೆ ಆದಾಯ ಭಾರತದ ವೀಕ್ಷಕರಿಂದ ಬರುತ್ತಿದೆ. ಇವರಿಗೆ ಬರುವ ಆದಾಯವನ್ನು ನಿಲ್ಲಿಸಬೇಕಾದರೆ ಈ ಖಾತೆಗಳನ್ನು ಭಾರತದಲ್ಲಿ ನಿರ್ಬಂಧ ವಿಧಿಸಬೇಕೆಂದು ನೆಟ್ಟಿಗರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.