ವಿಶ್ವದ 2ನೇ ಅತೀದೊಡ್ಡ ಥಿಯೇಟರ್ ‘ಕಪಾಲಿ’ ಶೀಘ್ರದಲ್ಲೇ ನೆಲಸಮ!

Public TV
1 Min Read
KAPALI F

ಬೆಂಗಳೂರು: ಏಷ್ಯಾದ ಅತೀ ದೊಡ್ಡ ಥಿಯೇಟರ್, ವಿಶ್ವದ 2ನೇ ಅತೀದೊಡ್ಡ ಚಿತ್ರಮಂದಿರ ಅಂತ ಹೆಸರು ಮಾಡಿದ ಬೆಂಗಳೂರಿನ ಕಪಾಲಿ ಥಿಯೇಟರ್ ಈಗ ತನ್ನ ಕೊನೆ ದಿನಗಳನ್ನ ಎಣಿಸುತ್ತಿದೆ. ಸರಿ ಸುಮಾರು 50 ವರ್ಷಗಳು ಸಿನಿರಸಿಕರನ್ನ ರಂಜಿಸಿದ ಚಿತ್ರಮಂದಿರ ಶೀಘ್ರದಲ್ಲೇ ನೆಲಸಮವಾಗಲಿದೆ ಎಂದು ಹೇಳಲಾಗಿದೆ.

KAPALI 5

ಹೌದು. ಬೆಂಗಳೂರಿನ ಪ್ರಸಿದ್ಧ ಕಪಾಲಿ ಥಿಯೇಟರ್ ಶೀಘ್ರವೇ ಬಂದ್ ಆಗಲಿದೆ. ಕಪಾಲಿ ಥಿಯೇಟರ್ ಇದ್ದ ಜಾಗದಲ್ಲಿ ಮಾಲ್ ನಿರ್ಮಾಣ ಮಾಡಲು ಮಾತುಕತೆ ನಡೆಯುತ್ತಿದೆ ಎಂದು ಚಿತ್ರಮಂದಿರದ ಮ್ಯಾನೇಜರ್ ಮಹೇಶ್ ತಿಳಿಸಿದ್ದಾರೆ.

KAPALI 3

1968ರಲ್ಲಿ ಮೂರಾರ್ಜಿ ದೇಸಾಯಿ ಅವರಿಂದ ಉದ್ಘಾಟನೆಗೊಂಡಿದ್ದ ಕಪಾಲಿ ಥಿಯೇಟರ್ 1500 ಸೀಟ್ ಕೆಪಾಸಿಟಿ ಹೊಂದಿದ್ದು, ಏಷ್ಯಾದ ಅತಿದೊಡ್ಡ ಥಿಯೇಟರ್ ಎನಿಸಿಕೊಂಡಿತ್ತು. ಇಲ್ಲಿ ಪ್ರದರ್ಶನಗೊಂಡ ಮೊದಲ ಚಿತ್ರ ‘ದಿಸ್ ಇಸ್ ಸಿನೆರಮಾ’. ಡಾ. ರಾಜ್‍ಕುಮಾರ್ ಅಭಿನಯದ ಮಣ್ಣಿನ ಮಗ ಚಿತ್ರ ಕಪಾಲಿಯಲ್ಲಿ ಶತದಿನೋತ್ಸವ ಆಚರಿಸಿದ ಮೊದಲ ಚಿತ್ರವಾಗಿತ್ತು. ಪ್ರೇಮಲೋಕದ ಕ್ರೇಜಿಸ್ಟಾರ್ ರವಿಚಂದ್ರನ್‍ಗೆ ಈ ಥಿಯೇಟರ್ ತುಂಬಾನೆ ಲಕ್ಕಿ ಎನಿಸಿಕೊಂಡಿತ್ತು. ಭಾರತೀಯ ಚಿತ್ರರಂಗದ ಎವರ್‍ಗ್ರೀನ್ ಚಿತ್ರ `ಶೋಲೆ’ ಕಪಾಲಿಯಲ್ಲಿ 6 ತಿಂಗಳು ಯಶಸ್ವಿ ಪ್ರದರ್ಶನ ಕಂಡಿತ್ತು. ಸಿನೆರಮಾ ಎನ್ನುವ ಪ್ರೊಜೆಕ್ಷನ್ ಸಿಸ್ಟಮ್ (3 ಪ್ರೊಜೆಕ್ಟರ್‍ಗಳಿಂದ ಸಿನಿಮಾ ರನ್ ಆಗುವುದು) ಅಳವಡಿಸಿಕೊಂಡ ಮೊಟ್ಟ ಮೊದಲ ಚಿತ್ರಮಂದಿರವಾಗಿತ್ತು.

KAPALI 4

102854205

 

Share This Article
Leave a Comment

Leave a Reply

Your email address will not be published. Required fields are marked *