Connect with us

Latest

ಏಷ್ಯನ್ ಕುಸ್ತಿ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಕೌರ್, ಸಾಕ್ಷಿ ಮಲಿಕ್‍ಗೆ ಕಂಚು

Published

on

ಬಿಶ್‍ಕೆಕ್: ಏಷ್ಯನ್ ಕುಸ್ತಿ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಮಹಿಳಾ ಕುಸ್ತಿಪಟು ನವಜೋತ್ ಕೌರ್ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

ಹಿರಿಯರ ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಕುಸ್ತಿ ಪಟು ಎನಿಸಿಕೊಂಡಿದ್ದಾರೆ. ಹಾಗೇ ಒಲಿಂಪಿಕ್ಸ್ ನಲ್ಲಿ ಕಂಚು ಜಯಿಸಿದ್ದ ಸಾಕ್ಷಿ ಮಲಿಕ್ ಇಲ್ಲಿಯೂ ಕಂಚು ಪಡೆದಿದ್ದಾರೆ.

ಕಿರ್ಗಿಸ್ತಾನದ ಬಿಶ್‍ಕೆಕ್‍ನಲ್ಲಿ ಶುಕ್ರವಾರದಂದು ನಡೆದ ಮಹಿಳೆಯರ 65 ಕೆ.ಜಿ. ವಿಭಾಗದ ಫ್ರೀಸ್ಟೈಲ್ ಕುಸ್ತಿ ಅಂತಿಮ ಹಣಾಹಣಿಯಲ್ಲಿ ಜಪಾನ್ ನ ಮಿಯಾ ಇಮಾಯಿರನ್ನು 9-1 ಅಂತರದಲ್ಲಿ ಸೋಲಿಸಿ ನವಜೋತ್ ಕೌರ್ ಚಿನ್ನವನ್ನು ಗೆದ್ದರು. ಹಾಗೂ ಈ ಬಾರಿಯ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಪಾಲಿನ ಮೊದಲ ಚಿನ್ನದ ಪದಕವನ್ನು ಕೌರ್ ಜಯಿಸಿದ್ದಾರೆ.

ಇತ್ತ 62 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಸಾಕ್ಷಿ ಮಲಿಕ್, ಕಝಕಿಸ್ತಾನದ ಕ್ಯಾಸಿಮೋವಾ ವಿರುದ್ಧ ಹಣಾಹಣಿ ನಡೆಸಿ 10-7 ಅಂತರದಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಭಾರತ 1 ಚಿನ್ನ, 1 ಬೆಳ್ಳಿ ಮತ್ತು 4 ಕಂಚು ಸೇರಿದಂತೆ ಈವರೆಗೆ ಒಟ್ಟು 6 ಪದಕಗಳನ್ನು ಪಡೆದಿದೆ.

Click to comment

Leave a Reply

Your email address will not be published. Required fields are marked *