ಬಿಶ್‍ಕೆಕ್: ಏಷ್ಯನ್ ಕುಸ್ತಿ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಮಹಿಳಾ ಕುಸ್ತಿಪಟು ನವಜೋತ್ ಕೌರ್ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಹಿರಿಯರ ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಕುಸ್ತಿ ಪಟು ಎನಿಸಿಕೊಂಡಿದ್ದಾರೆ. ಹಾಗೇ ಒಲಿಂಪಿಕ್ಸ್ ನಲ್ಲಿ ಕಂಚು ಜಯಿಸಿದ್ದ ಸಾಕ್ಷಿ ಮಲಿಕ್ ಇಲ್ಲಿಯೂ ಕಂಚು ಪಡೆದಿದ್ದಾರೆ.
Advertisement
Advertisement
ಕಿರ್ಗಿಸ್ತಾನದ ಬಿಶ್‍ಕೆಕ್‍ನಲ್ಲಿ ಶುಕ್ರವಾರದಂದು ನಡೆದ ಮಹಿಳೆಯರ 65 ಕೆ.ಜಿ. ವಿಭಾಗದ ಫ್ರೀಸ್ಟೈಲ್ ಕುಸ್ತಿ ಅಂತಿಮ ಹಣಾಹಣಿಯಲ್ಲಿ ಜಪಾನ್ ನ ಮಿಯಾ ಇಮಾಯಿರನ್ನು 9-1 ಅಂತರದಲ್ಲಿ ಸೋಲಿಸಿ ನವಜೋತ್ ಕೌರ್ ಚಿನ್ನವನ್ನು ಗೆದ್ದರು. ಹಾಗೂ ಈ ಬಾರಿಯ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಪಾಲಿನ ಮೊದಲ ಚಿನ್ನದ ಪದಕವನ್ನು ಕೌರ್ ಜಯಿಸಿದ್ದಾರೆ.
Advertisement
ಇತ್ತ 62 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಸಾಕ್ಷಿ ಮಲಿಕ್, ಕಝಕಿಸ್ತಾನದ ಕ್ಯಾಸಿಮೋವಾ ವಿರುದ್ಧ ಹಣಾಹಣಿ ನಡೆಸಿ 10-7 ಅಂತರದಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಭಾರತ 1 ಚಿನ್ನ, 1 ಬೆಳ್ಳಿ ಮತ್ತು 4 ಕಂಚು ಸೇರಿದಂತೆ ಈವರೆಗೆ ಒಟ್ಟು 6 ಪದಕಗಳನ್ನು ಪಡೆದಿದೆ.
Advertisement
My heartiest congratulations to #NavjotKaur for winning the Gold medal & @SakshiMalik for winning Bronze at the #AsianWrestlingChampionship. Each and every Indian is proud of their outstanding feat! ????????
— Nitin Gadkari (@nitin_gadkari) March 3, 2018