Connect with us

Dakshina Kannada

ಪದಕ ಗೆದ್ದ ಲಿಫ್ಟರ್‌ಗಳಿಗೆ ಹೃದಯಸ್ಪರ್ಶಿ ಸ್ವಾಗತ

Published

on

ಮಂಗಳೂರು: ಕಜಕಿಸ್ತಾನದಲ್ಲಿ ನಡೆದ ಏಷ್ಯನ್ ಪವರ್ ಲಿಫ್ಟಿಂಗ್ ಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನ, ಬೆಳ್ಳಿ ಪದಕ ಗೆದ್ದ ಪವರ್ ಲಿಫ್ಟರ್‌ಗಳನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಆರತಿ ಬೆಳಗಿ ಸ್ವಾಗತಿಸಲಾಯಿತು.

ಚಿನ್ನದ ಪದಕ ಪಡೆದ ಅರೆನ್ ಫೆರ್ನಾಂಡಿಸ್, ಶರತ್ ಪೂಜಾರಿ, ಸುಲೋಚನಾ, ಸತೀಶ್ ಖಾರ್ವಿ, ನಾಲ್ಕು ಬೆಳ್ಳಿಪದಕ ಪಡೆದ ದೀಪಾ ಕೆ.ಸ್, ನಾಗಶ್ರೀ ಅವರನ್ನು ಮಂಗಳೂರು ಜನತೆ ಪರವಾಗಿ ಕೋಚ್ ಪ್ರದೀಪ್ ಆಚಾರ್ಯ, ಕಾರ್ಪೊರೇಟರ್ ಶಕೀಲಾ ಕಾವ ಅದ್ಧೂರಿಯಾಗಿ ಸ್ವಾಗತಿಸಿದರು.

ಮೈನಸ್ 4 ಡಿಗ್ರಿ ಚಳಿಯಲ್ಲೂ ಸಾಧನೆ:
ಕಜಕಿಸ್ತಾನದಲ್ಲಿ ಮೈನಸ್ 4 ಡಿಗ್ರಿ ಚಳಿಗೆ ಹೊಂದಿಕೊಳ್ಳಲು ಕಷ್ಟವಾದರೂ 22 ದೇಶಗಳ ಸ್ಪರ್ಧಿಗಳ ವಿರುದ್ಧ ಭಾರತವನ್ನು ಪ್ರತಿನಿಧಿಸಿ ನಾಲ್ಕು ಪದಕ ಪಡೆದಿರುವುದು ಖುಷಿ ತಂದಿದೆ. ಬೆಂಬಲ ನೀಡಿದ ಪತಿ ಕುಂಜತ್ತೋಡಿ ವಾಸುದೇವ ಕದ್ರಿ, ಕೋಚ್ ಪ್ರದೀಪ್ ಆಚಾರ್ಯ ಅವರಿಗೆ ಕೃತಜ್ಞತೆಗಳು ಎಂದು ಪದಕ ವಿಜೇತೆ ದೀಪಾ ಕೆ.ಎಸ್. ಹೇಳಿದ್ದಾರೆ.

ಕೋಚ್ ಪ್ರದೀಪ್ ಆಚಾರ್ಯ ಮಾತನಾಡಿ, ನಮ್ಮವರು ಪದಕ ಗೆದ್ದಿರುವುದು ಖುಷಿ ಕೊಟ್ಟಿದೆ. ಮಂಗಳೂರು ಮಹಾನಗರ ಪಾಲಿಕೆ ಪವರ್ ಲಿಫ್ಟರ್‌ಗಳಿಗೆ ಪ್ರೋತ್ಸಾಹ ನೀಡುತ್ತಿದೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿಕೊಂಡರು.

Click to comment

Leave a Reply

Your email address will not be published. Required fields are marked *