ಚಿಕನ್ ಮಂಚೂರಿಯನ್, ಚಿಕನ್ ಚಿಲ್ಲಿ ಇವುಗಳ ಹೆಸರು ಕೇಳಿದ್ರೇನೇ ಹೆಚ್ಚಿನವರ ಬಾಯಲ್ಲಿ ನೀರು ಬರದೇ ಇರಲಾರದು. ಸಖತ್ ರುಚಿಯಾದ ಈ ಅಡುಗೆಗಳಲ್ಲಿ ಸ್ವಲ್ಪ ಸಿಹಿ ಅಂಶವೂ ಇರುತ್ತದೆ. ಆದರೆ ನಾವಿಂದು ಹೇಳಿಕೊಡುತ್ತಿರೋ ಜಿಂಜರ್ ಚಿಕನ್ ಇದೇ ಏಷ್ಯನ್ ರೆಸಿಪಿ ವರ್ಗಕ್ಕೆ ಸೇರುತ್ತದೆಯಾದರೂ ಸ್ವಲ್ಪ ಡಿಫರೆಂಟ್. ಈ ರೆಸಿಪಿ ತುಂಬಾ ರುಚಿಯಾಗಿದ್ದರೂ ಇದ್ರಲ್ಲಿ ಸಕ್ಕರೆ ಅಂಶ ಇಲ್ಲ. ಫಟಾಫಟ್ ಅಂತ ಏಷ್ಯನ್ ಜಿಂಜರ್ ಚಿಕನ್ ಮಾಡೋದು ಹೇಗೆಂದು ನೊಡೋಣ.
Advertisement
ಬೇಕಾಗುವ ಪದಾರ್ಥಗಳು:
ತೆಳ್ಳಗಿನ ತುಂಡುಗಳಾಗಿ ಕತ್ತರಿಸಿದ ಚಿಕನ್ ಬ್ರೆಸ್ಟ್ – ಅರ್ಧ ಕೆಜಿ
ತೆಳ್ಳಗೆ ಹೆಚ್ಚಿದ ಬೆಲ್ ಪೆಪ್ಪರ್ – 1 (ಹಸಿರು, ಹಳದಿ, ಕೆಂಪು ಬಣ್ಣದ್ದು ಬಳಸಬಹುದು)
ಆಲಿವ್ ಎಣ್ಣೆ – 1 ಟೀಸ್ಪೂನ್
ಟೊಮೆಟೊ ಪೇಸ್ಟ್ – 1 ಟೀಸ್ಪೂನ್
ಸೋಯಾ ಸಾಸ್ – 1 ಟೀಸ್ಪೂನ್
ವಿನೆಗರ್ – 1 ಟೀಸ್ಪೂನ್
ಶುಂಠಿ ಪೇಸ್ಟ್ – ಅರ್ಧ ಟೀಸ್ಪೂನ್
ಕಾರ್ನ್ ಫ್ಲೋರ್ – 1 ಟೀಸ್ಪೂನ್
ಹೆಚ್ಚಿದ ಸ್ಪ್ರಿಂಗ್ ಆನಿಯನ್ – ಕಾಲು ಕಪ್
ಎಳ್ಳು – ಅರ್ಧ ಟೀಸ್ಪೂನ್ ಇದನ್ನೂ ಓದಿ: ತೆಂಗಿನ ಹಾಲು ಬಳಸಿ ಮಾಡೋ ಗೋವಾ ಸ್ಟೈಲ್ನ ಸಿಗಡಿ ಕರಿ ರೆಸಿಪಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಬಟ್ಟಲಿನಲ್ಲಿ ಸೋಯಾ ಸಾಸ್, ವಿನೆಗರ್, ಶುಂಠಿ ಪೇಸ್ಟ್ ಹಾಗೂ ಟೊಮೆಟೊ ಪೇಸ್ಟ್ ಅನ್ನು ತೆಗೆದುಕೊಂಡು ಮಿಶ್ರಣ ಮಾಡಿ.
* ಇನ್ನೊಂದು ಸಣ್ಣ ಬೌಲ್ನಲ್ಲಿ ಕಾರ್ನ್ ಫ್ಲೋರ್ಗೆ ಕಾಲು ಕಪ್ ನೀರು ಹಾಕಿ ಉಂಡೆಗಳಿಲ್ಲದಂತೆ ಮಿಶ್ರಣ ಮಾಡಿ ಬದಿಗಿಡಿ.
* ದೊಡ್ಡ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಚಿಕನ್ ಸೇರಿಸಿ ಆಗಾಗ ತಿರುವುತ್ತಾ 4-5 ನಿಮಿಷ ಬೇಯಿಸಿಕೊಳ್ಳಿ.
* ಬಳಿಕ ಬೆಲ್ ಪೆಪ್ಪರ್ ಸೇರಿಸಿ ಇನ್ನೊಂದು ನಿಮಿಷ ಟಾಸ್ ಮಾಡಿ.
* ಬಳಿಕ ಸಾಸ್ ಮಿಶ್ರಣವನ್ನು ಸೇರಿಸಿ ಕುದಿಸಿಕೊಳ್ಳಿ.
* ನಂತರ ಕಾರ್ನ್ ಫ್ಲೋರ್ನ ಸ್ಲರಿಯನ್ನು ಹಾಕಿ ಮಿಶ್ರಣ ದಪ್ಪವಾಗಲು ಬಿಡಿ.
* ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಯಿಸಿಕೊಳ್ಳಿ.
* ಸರ್ವಿಂಗ್ ಪ್ಲೇಟ್ಗೆ ಚಿಕನ್ ಅನ್ನು ವರ್ಗಾಯಿಸಿ, ಸ್ಪ್ರಿಂಗ್ ಆನಿಯನ್ ಹಾಗೂ ಎಳ್ಳಿನಿಂದ ಅಲಂಕರಿಸಿ.
* ಇದೀಗ ಟೇಸ್ಟಿ ಏಷ್ಯನ್ ಜಿಂಜರ್ ಚಿಕನ್ ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಟ್ರೈ ಮಾಡಿ ಕೇರಳ ಸ್ಟೈಲ್ನ ಟೇಸ್ಟಿ ಸ್ಕ್ವಿಡ್ ರೋಸ್ಟ್
Advertisement
Web Stories