Asian Games 2023: ಏಷ್ಯನ್‌ ಗೇಮ್ಸ್‌ನಲ್ಲೂ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ಸಾತ್ವಿಕ್‌ಸಾಯಿರಾಜ್, ಚಿರಾಗ್‌ ಜೋಡಿ

Public TV
1 Min Read
Asian Games 2

ಹ್ಯಾಂಗ್‌ಝೌ: ಈ ಹಿಂದೆ ಇಂಡೋನೇಷ್ಯಾ ಮತ್ತು ಕೊರಿಯಾ ಓಪನ್ಸ್‌ ಟೂರ್ನಿಯಲ್ಲಿ ಐತಿಹಾಸಿಕ ಪ್ರಶಸ್ತಿ ಗೆದ್ದಿದ್ದ ಭಾರತದ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಏಷ್ಯನ್ ಗೇಮ್ಸ್‌ನ (Asian Games) ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ (Badminton) ಸ್ಪರ್ಧೆಯಲ್ಲೂ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದೆ.

Asian Games.jpg 2

ಶನಿವಾರ ಭಾರತದ ಜೋಡಿ ದಕ್ಷಿಣ ಕೊರಿಯಾದ ಚೋಯ್ ಸೊಲ್ಗು ಮತ್ತು ಕಿಮ್ ವೊನ್ಹೋ ಅವರನ್ನು 21-18, 21-16 ಅಂತರದ ನೇರ ಗೇಮ್‌ಗಳಿಂದ ಸೋಲಿಸುವ ಮೂಲಕ ಚೊಚ್ಚಲ ಚಿನ್ನದ ಪದಕ ಗೆದ್ದು ದಾಖಲೆ ಬರೆದಿದೆ. ಇದಕ್ಕೂ ಮುನ್ನ ಸೆಮಿಫೈನಲ್‌ನಲ್ಲಿ ಮಲೇಷ್ಯಾದ ಆರೋನ್ ಚಿಯಾ ಮತ್ತು ಸೊಹ್ ವುಯಿ ಯಿಕ್ ವಿರುದ್ಧ 21-17, 21-12 ಅಂತರದಲ್ಲಿ ಈ ಜೋಡಿ ಜಯ ಸಾಧಿಸಿತ್ತು. ಇದನ್ನೂ ಓದಿ: World Cup 2023: 102 ರನ್‌ ಜಯದೊಂದಿಗೆ ದಕ್ಷಿಣ ಆಫ್ರಿಕಾ ಶುಭಾರಂಭ – ಹೋರಾಡಿ ಸೋತ ಲಂಕಾ

ಈಗಾಗಲೇ ಒಟ್ಟು 382 ಪದಕಗಳನ್ನು (200 ಚಿನ್ನ, 111 ಬೆಳ್ಳಿ, 71 ಕಂಚು) ಗೆದ್ದಿರುವ ಚೀನಾ ಆರಂಭದಿಂದಲೂ ಮೊದಲ ಸ್ಥಾನದಲ್ಲೇ ಮುಂದುವರಿದಿದೆ. 186 ಪದಕಗಳನ್ನು (51 ಚಿನ್ನ, 66 ಬೆಳ್ಳಿ, 69 ಕಂಚು) ಗೆದ್ದಿರುವ ಜಪಾನ್‌ 2ನೇ ಸ್ಥಾನದಲ್ಲಿದೆ. ದಕ್ಷಿಣ ಕೊರಿಯಾ 190 ಪದಕಗಳನ್ನ (42 ಚಿನ್ನ, 59 ಬೆಳ್ಳಿ, 89 ಕಂಚು) ಗೆದ್ದು 3ನೇ ಸ್ಥಾನದಲ್ಲಿದೆ. ಆದ್ರೆ ಈವರೆಗೆ 28 ಚಿನ್ನ, 38 ಬೆಳ್ಳಿ ಹಾಗೂ 41 ಕಂಚು ಸೇರಿದಂತೆ ಒಟ್ಟು 107 ಪದಕಗಳನ್ನ ಬಾಚಿಕೊಂಡಿರುವ ಭಾರತ 4ನೇ ಸ್ಥಾನ ಭದ್ರಪಡಿಸಿಕೊಂಡಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಹತ್ಯೆ, ಮೋದಿ ಸ್ಟೇಡಿಯಂ ಸ್ಫೋಟ ಬೆದರಿಕೆ – ಮುಂಬೈ ಪೊಲೀಸರಿಗೆ ಸಂದೇಶ

Web Stories

Share This Article