ಬೀಜಿಂಗ್: ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್‌ನ ಟೆನ್ನಿಸ್ ಮಿಶ್ರ ಡಬಲ್ಸ್‌ನಲ್ಲಿ ಭಾರತದ ಟೆನ್ನಿಸ್ ಜೋಡಿ ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
ರೋಹನ್-ರುತುಜಾ ಜೋಡಿಯು ಪಂದ್ಯದ ಆರಂಭಿಕ ಸೆಟ್‌ನಲ್ಲಿ ಹೋರಾಟ ನಡೆಸಿತು. ಚೀನಾದ ತೈಪೆಯ ಎನ್-ಶುವೊ ಲಿಯಾಂಗ್ ಮತ್ತು ತ್ಸುಂಗ್-ಹಾವೊ ಹುವಾಂಗ್ ವಿರುದ್ಧ 6-2 ರಿಂದ ಮೊದಲ ಸೆಟ್ ಅನ್ನು ಕಳೆದುಕೊಂಡಿತು. ಭಾರತದ ಜೋಡಿ ಅದ್ಭುತ ಪುನರಾಗಮನ ಮಾಡಿದರು. ನಂತರ ತಮ್ಮ ಎದುರಾಳಿಗಳನ್ನು 3-6 ಮತ್ತು 4-10 ರಿಂದ ನೇರ ಎರಡು ಸೆಟ್‌ಗಳಲ್ಲಿ ಸೋಲಿಸಲು ಆಟದ ಮೇಲೆ ಪ್ರಾಬಲ್ಯ ಸಾಧಿಸಿದರು. ಇದನ್ನೂ ಓದಿ: Asian Games 2023: ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ – ಕಂಚು ಗೆದ್ದು ಕಿರಣ್ ಮಿಂಚು
Advertisement
Advertisement
ಇದಕ್ಕೂ ಮೊದಲು ಬೋಪಣ್ಣ-ಭೋಸಲೆ ಜೋಡಿಯು ಚೈನೀಸ್ ತೈಪೆಯ ಯು-ಹ್ಸಿಯು ಹ್ಸು ಮತ್ತು ಹಾವೊ-ಚಿಂಗ್ ಚಾಂಗ್ ವಿರುದ್ಧ ಶುಕ್ರವಾರ 6-1, 3-6, 10-4 ಅಂಕಗಳೊಂದಿಗೆ ಗೆಲುವು ದಾಖಲಿಸಿ ಪದಕ ಖಚಿತಪಡಿಸಿಕೊಂಡಿತ್ತು.
Advertisement
ಬೋಪಣ್ಣ-ಭೋಸಲೆ ಜೋಡಿಯು ಚೈನೀಸ್ ತೈಪೆಯ ಯು-ಹ್ಸಿಯು ಹ್ಸು ಮತ್ತು ಹಾವೊ-ಚಿಂಗ್ ಚಾಂಗ್ ವಿರುದ್ಧ 6-1 ರಿಂದ ಮೊದಲ ಸೆಟ್ ಅನ್ನು ಗೆದ್ದುಕೊಂಡಿತ್ತು. ಆದಾಗ್ಯೂ, ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಜೋಡಿಯು ಎರಡನೇ ಸೆಟ್‌ನಲ್ಲಿ ನಿಯಂತ್ರಣ ಕಳೆದುಕೊಂಡಿತು. ಆದರೆ ಅವರು ಟೈಬ್ರೇಕರ್‌ನಲ್ಲಿ 10-4 ರಿಂದ ಮೇಲುಗೈ ಸಾಧಿಸಿ ಫೈನಲ್ ಪಂದ್ಯಕ್ಕೆ ಲಗ್ಗೆಯಿಟ್ಟರು. ಇದನ್ನೂ ಓದಿ: Asian Games 2023: ಚಿನ್ನದ ಪದಕಕ್ಕೆ ಶಾರ್ಪ್ ಶೂಟ್ – 4ನೇ ಸ್ಥಾನಕ್ಕೆ ಜಿಗಿದ ಭಾರತ
Advertisement
19ನೇ ಏಷ್ಯನ್ ಗೇಮ್ಸ್ ಪದಕ ಪಟ್ಟಿಯಲ್ಲಿ ಭಾರತ ತಂಡ ಒಟ್ಟು 34 ಪದಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಇದರಲ್ಲಿ 9 ಚಿನ್ನ, 13 ಬೆಳ್ಳಿ ಮತ್ತು 13 ಕಂಚಿನ ಪದಕಗಳು ಸೇರಿವೆ.
Web Stories