ನವದೆಹಲಿ: ಟೀಂ ಇಂಡಿಯಾ ಮಹಿಳಾ ತಂಡದ ಕ್ಯಾಪ್ಟನ್ ಹರ್ಮನ್‍ಪ್ರೀತ್ ಕೌರ್ (Harmanpreet Kaur) ಎರಡು ಪಂದ್ಯಗಳ ನಿಷೇಧದ ಬಳಿಕ ಹ್ಯಾಂಗ್‍ಝೌ ಏಷ್ಯನ್ ಗೇಮ್ಸ್ ಟಿ20 (Asian Games) ಪಂದ್ಯದಲ್ಲಿ ತಂಡ ಫೈನಲ್‍ಗೆ ತಲುಪಿದರೆ ಆಡಲಿದ್ದಾರೆ ಎಂದು ವರದಿಯಾಗಿದೆ.
ಮಹಿಳೆಯರ ಕ್ರಿಕೆಟ್ ಪಂದ್ಯಾವಳಿ ಸೆ.25ರ ವರೆಗೆ ನಡೆಯಲಿದೆ. ಎ ಗುಂಪಿನಲ್ಲಿ ಇಂಡೋನೇಷ್ಯಾ, ಮಂಗೋಲಿಯಾ ಮತ್ತು ಬಿ ಗುಂಪಿನಲ್ಲಿ ಹಾಂಕಾಂಗ್ ಮತ್ತು ಮಲೇಷ್ಯಾವನ್ನು ಒಳಗೊಂಡಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳು ನೇರ ಪ್ರವೇಶ ಪಡೆದಿವೆ. ಇದನ್ನೂ ಓದಿ: ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತ ತಂಡ ಪ್ರಕಟ – ಕೆ.ಎಲ್ ರಾಹುಲ್‌ಗೆ ನಾಯಕತ್ವ, ಸೂರ್ಯನಿಗೂ ಚಾನ್ಸ್
ಮಹಿಳಾ ತಂಡಕ್ಕೆ ತಮ್ಮ ಪ್ರತಿಭೆಯನ್ನು ತೋರಿಸಲು ಇದು ಉತ್ತಮ ಅವಕಾಶವಾಗಿದೆ. ಶಫಾಲಿ ವರ್ಮಾ, ಕನಿಕಾ ಅಹುಜಾ ಉತ್ತಮ ಪ್ರದರ್ಶನ ನೀಡಬಲ್ಲರು. ರಿಚಾ ಘೋಷ್ ಫಿನಿಶರ್ ಮತ್ತು ಮಿನ್ನು ಮಣಿ ಅಸಾಧಾರಣ ಆಟಗಾರ್ತಿಯರಾಗಿದ್ದಾರೆ. ಅಲ್ಲದೇ ಅತ್ಯುತ್ತಮ ಫೀಲ್ಡಿಂಗ್ ಕಲೆ ಅವರಲ್ಲಿದೆ ಎಂದು ಬಗ್ಗೆ ಮಾಜಿ ಹಂಗಾಮಿ ಕೋಚ್ ನೂಶಿನ್ ಹೇಳಿದ್ದಾರೆ.
ಜುಲೈನಲ್ಲಿ ಆತಿಥೇಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹರ್ಮನ್‍ಪ್ರೀತ್ ಔಟಾದ ಬಳಿಕ ಅಂಪೈರ್‍ನ್ನು ಟೀಕಿಸಲು ಸ್ಟಂಪ್‍ಗಳನ್ನು ಒಡೆದು ಹಾಕಿದ್ದರು. ಇದೇ ಕಾರಣಕ್ಕೆ ಅವರನ್ನು ಎರಡು ಪಂದ್ಯಗಳಿಗೆ ನಿಷೇಧ ಹೇರಲಾಗಿತ್ತು. ಹರ್ಮನ್‍ಪ್ರೀತ್ ಅನುಪಸ್ಥಿತಿಯಲ್ಲಿ ತಂಡವನ್ನು ಸ್ಮೃತಿ ಮಂಧಾನ ಮುನ್ನಡೆಸಿದ್ದರು.
ಪಂದ್ಯಗಳನ್ನು ಸೋನಿ ಸ್ಪೋರ್ಟ್ಸ್ ನೆಟ್‍ವರ್ಕ್‍ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಮತ್ತು ಸೋನಿ ಲಿವ್ ಆಪ್‍ನಲ್ಲಿ ಸ್ಟ್ರೀಮ್ ಮಾಡಲಾಗುತ್ತದೆ. ಇದನ್ನೂ ಓದಿ: ಏಕದಿನ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ನಂ.1 – ಅಗ್ರಸ್ಥಾನಕ್ಕೇರಲು ಭಾರತಕ್ಕಿದೆಯಾ ಚಾನ್ಸ್?
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]