ಇಂಡೋನೇಷ್ಯಾದಲ್ಲಿ ನಡೆದ ಈ ಹಿಂದಿನ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 16 ಚಿನ್ನ, 23 ಬೆಳ್ಳಿ, 31 ಕಂಚಿನ ಪದಕ ಸೇರಿ ಒಟ್ಟು 70 ಪದಕಗಳನ್ನು ಗೆದ್ದುಕೊಂಡಿತ್ತು. ಇದು ಇಲ್ಲಿಯವರೆಗೆ ನಡೆದಿದ್ದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಅತ್ಯುತ್ತಮ ಸಾಧನೆಯಾಗಿತ್ತು. ಆದರೆ ಭಾರತ ಇಂದು ಈ ಗಡಿಯನ್ನು ದಾಟಿದ್ದು ಇನ್ನೂ 4 ದಿನ ಕ್ರೀಡಾಕೂಟ ನಡೆಯಲಿರುವ ಕಾರಣ ಹಲವು ಪದಕಗಳು ಬರುವ ನಿರೀಕ್ಷೆಯಿದೆ.
???????????? ???????????????????????????? ???????????? ???????????????? ????????????????????????????! Hangzhou 2022 now stands as India's most triumphant Asian Games in history.
Congratulations to all the athletes and the dedicated support teams behind them! You have all made India proud! ????
➡️ Follow @sportwalkmedia for… pic.twitter.com/ROzaHqJqSe
— Team India at the Asian Games ???????? (@sportwalkmedia) October 4, 2023
Advertisement
ಸದ್ಯ ಭಾರತ 16 ಚಿನ್ನ, 26 ಬೆಳ್ಳಿ, 29 ಕಂಚಿನ ಪದಕ ಸೇರಿ ಒಟ್ಟು 71 ಪದಕಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ಪದಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಮುಂದುವರಿದಿದೆ. 2018ರ ಕ್ರೀಡಾಕೂಟದ ಪದಕ ಪಟ್ಟಿಯಲ್ಲಿ ಭಾರತ 8ನೇ ಸ್ಥಾನ ಪಡೆದಿತ್ತು. ಇದನ್ನೂ ಓದಿ: Asian Games 2023: 5000 ಮೀ. ಓಟದಲ್ಲಿ ಪಾರುಲ್ ಪ್ರಚಂಡ ಗೆಲುವು – ವನಿತೆಯರ ಬಂಗಾರದ ಬೇಟೆ
Advertisement
Proud of Parul Chaudhary for winning the Gold Medal in Women’s 5000m event.
Hers was a performance that was truly awe inspiring. May she keep soaring high and sprinting towards success. pic.twitter.com/hmgw1MqnaC
— Narendra Modi (@narendramodi) October 3, 2023
Advertisement
ಇಲ್ಲಿಯವರೆಗೆ ಚೀನಾ 164 ಚಿನ್ನ, 90 ಬೆಳ್ಳಿ, 46 ಕಂಚು ಸೇರಿ 300 ಪದಕ ಗೆಲ್ಲುವ ಮೂಲಕ ಮೊದಲ ಸ್ಥಾನ ಪಡೆದರೆ 33 ಚಿನ್ನ, 48 ಬೆಳ್ಳಿ, 50 ಕಂಚು ಸೇರಿ 131 ಪದಕ ಗೆದ್ದಿರುವ ಜಪಾನ್ ಎರಡನೇ ಸ್ಥಾನದಲ್ಲಿದೆ. 32 ಚಿನ್ನ, 43 ಬೆಳ್ಳಿ, 65 ಕಂಚಿನ ಪದಕ ಸೇರಿ ಒಟ್ಟು 140 ಪದಕ ಗೆದ್ದಿರುವ ದಕ್ಷಿಣ ಕೊರಿಯಾ ಮೂರನೇ ಸ್ಥಾನದಲ್ಲಿ ಮುಂದುವರಿದಿದೆ.
Advertisement
ಇಂದು ನಡೆದ ಮಿಶ್ರ ಅರ್ಚರಿ ಸ್ಪರ್ಧೆಯಲ್ಲಿ ಜ್ಯೋತಿ ವೆನ್ನಮ್ ಮತ್ತು ಓಜಸ್ ಡಿಯೋಟಾಲೆ ಚಿನ್ನ ಗೆದ್ದಿದ್ದಾರೆ. ಮಂಜು ರಾಣಿ ಮತ್ತು ರಾಮ್ ಬಾಬೂ ಅವರಿದ್ದ ಮಿಶ್ರ ತಂಡ 35 ಕಿಮೀ ನಡಿಗೆ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದರು.
Web Stories