ಹ್ಯಾಂಗ್‌ಝೌ: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023ರಲ್ಲಿ (Asian Games 2023) ಭಾರತದ ಸ್ಪರ್ಧಿಗಳ ಪದಕದ ಬೇಟೆ ಮುಂದುವರಿದಿದೆ. 6ನೇ ದಿನವಾದ ಶುಕ್ರವಾರ ಭಾರತಕ್ಕೆ ಗನ್ ಶೂಟಿಂಗ್‌ನಲ್ಲಿ (Air Pistol Final) ಚಿನ್ನದ ಪದಕ ಬಂದಿದೆ.
Day 6️⃣ so far goes like this for ???????? at #AsianGames2022
2⃣????, 3⃣????& 1⃣????by our fantastic Medalists up until now ????
Waiting for more as the day progresses
We are all pumped up & ready to #Cheer4India ????????#HallaBol#JeetegaBharat#BharatAtAG22 pic.twitter.com/eVwCo3VnNS
— SAI Media (@Media_SAI) September 29, 2023
Advertisement
ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ (Air Pistol) ವೈಯಕ್ತಿಕ ಸ್ಪರ್ಧೆಯಲ್ಲಿ ಭಾರತದ ಶೂಟರ್ ಪಲಕ್ (Palak) ಚಿನ್ನ ಗೆದ್ದರೆ, ಇಶಾ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದರಿಂದ 5ನೇ ದಿನ 5ನೇ ಸ್ಥಾನದಲ್ಲಿದ್ದ ಭಾರತ ಶುಕ್ರವಾರ 8 ಚಿನ್ನ, 11 ಬೆಳ್ಳಿ, 12 ಕಂಚು ಸೇರಿ ಒಟ್ಟು 31 ಪದಕಗಳೊಂದಿಗೆ ಭಾರತ ರ‍್ಯಾಂಕಿಂಗ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದೆ. ಇದನ್ನೂ ಓದಿ: Asian Games 2023: ಈಕ್ವೆಸ್ಟ್ರೀಯನ್‌ನಲ್ಲಿ ಭಾರತಕ್ಕೆ ಕಂಚು – ಇತಿಹಾಸ ನಿರ್ಮಿಸಿದ ಅನುಷ್
Advertisement
ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಫೈನಲ್ನಲ್ಲಿ ಪಲಕ್ 242.1 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಚಿನ್ನ ಗೆದ್ದಿದ್ದಾರೆ. ಇಶಾ 239.7 ಅಂಕಗಳೊಂದಿಗೆ ಬೆಳ್ಳಿ ಪದಕದೊಂದಿಗೆ 2ನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಪಾಕಿಸ್ತಾನದ ತಲಾತ್ 218.2 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
Advertisement
Advertisement
ಇದು ಶುಕ್ರವಾರ ಭಾರತಕ್ಕೆ ಲಭಿಸಿದ 4ನೇ ಪದಕವಾಗಿದೆ. ಇದಕ್ಕಿಂತ ಮೊದಲು ಮಹಿಳೆಯರ ತಂಡ ಶೂಟಿಂಗ್‌ನಲ್ಲಿ ಬೆಳ್ಳಿ, ಪುರುಷರ ತಂಡ ಶೂಟಿಂಗ್‌ನಲ್ಲಿ ಚಿನ್ನ ಹಾಗೂ ಟೆನಿಸ್ ಜೋಡಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದರು. ಇದನ್ನೂ ಓದಿ: ಹೈದರಾಬಾದ್ ಬಿರಿಯಾನಿ, ಬಟರ್ ಚಿಕನ್, ಲ್ಯಾಂಬ್ ಚಾಪ್ಸ್; ಭಾರತದಲ್ಲಿ ಪಾಕ್ ಕ್ರಿಕೆಟಿಗರಿಗೆ ಭರ್ಜರಿ ಬಾಡೂಟದ ಆತಿಥ್ಯ
ಪುರುಷರ ತಂಡಕ್ಕೂ ಚಿನ್ನ:
ಶುಕ್ರವಾರ ಪುರುಷರ 50 ಮೀಟರ್ ರೈಫಲ್ 3ಪಿ ತಂಡ (ಮೂವರನ್ನೊಳಗೊಂಡ ತಂಡ) ಸ್ಪರ್ಧೆಯಲ್ಲಿ ಭಾರತ 1769 ಅಂಕಗಳೊಂದಿಗೆ ಚಿನ್ನ ಗೆದ್ದುಕೊಂಡಿತು. 1763 ಅಂಕಗಳಿಂದ ಬೆಳ್ಳಿ ಪದಕ ಹಾಗೂ 1748 ಅಂಕಗಳೊಂದಿಗೆ ಕಂಚಿನ ಪದಕ ದಕ್ಷಿಣ ಕೊರಿಯಾ ಪಾಲಾಯಿತು.
ಮಹಿಳೆಯರ ತಂಡಕ್ಕೆ ಬೆಳ್ಳಿ
ಇದರೊಂದಿಗೆ ಪಾಲಕ್, ಇಶಾ ಸಿಂಗ್ ಮತ್ತು ದಿವ್ಯಾ ತಡಿಗೋಲ್ ಅವರನ್ನೊಳಗೊಂಡ ಭಾರತೀಯ ಶೂಟಿಂಗ್ ತಂಡ 10 ಮೀಟರ್ ಏರ್ ಪಿಸ್ತೂಲ್ ಮಹಿಳಾ ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದೆ. 10 ಮೀಟರ್ ಏರ್ ಪಿಸ್ತೂಲ್ ಮಹಿಳಾ ತಂಡ ಸ್ಪರ್ಧೆಯಲ್ಲಿ ಭಾರತ 1731 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದರೆ, 1736 ಅಂಕ ಪಡೆದ ಚೀನಾ ಚಿನ್ನಕ್ಕೆ ಕೊರಳೊಡ್ಡಿತು. 1723 ಅಂಕಗಳನ್ನು ಪಡೆದುಕೊಂಡ ತೈವಾನ್ ಕಂಚಿನ ಪದಕ ಪಡೆದುಕೊಂಡಿತು.
Web Stories