Asian Games 2023: ಚಿನ್ನದ ಮಳೆ – ಚೊಚ್ಚಲ ಚಾಂಪಿಯನ್‌ ಕಿರೀಟ ಧರಿಸಿದ ಭಾರತ

Public TV
2 Min Read
Team india

ಹ್ಯಾಂಗ್‌ಝೌ: ಏಷ್ಯನ್‌ ಗೇಮ್ಸ್‌ 2023ರ ಕ್ರಿಕೆಟ್‌ ಟೂರ್ನಿಯಲ್ಲಿ (Asian Games Cricket) ಭಾರತ ಚೊಚ್ಚಲ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದು, ಚಿನ್ನದ ಪದಕಕ್ಕೆ ಕೊರಳೊಡ್ಡಿದೆ.

ಶನಿವಾರ ಅಫ್ಘಾನಿಸ್ತಾನದ (Afghanistan) ವಿರುದ್ಧ ನಡೆದ ಫೈನಲ್‌ ಪಂದ್ಯವು ಮಳೆಯಿಂದಾಗಿ ರದ್ದಾಯಿತು. ಆದ್ರೆ ಟೀಂ ಇಂಡಿಯಾ (Team India) ಉತ್ತಮ ರನ್‌ರೇಟ್‌ ಹೊಂದಿದ್ದರಿಂದ ಚಿನ್ನದ ಪದಕ ಗೆದ್ದುಕೊಂಡಿತು.

2010 ಮತ್ತು 2014ರ ಏಷ್ಯನ್ ಗೇಮ್ಸ್‌ ಟೂರ್ನಿಯಲ್ಲಿ ಭಾರತ ಭಾಗವಹಿಸಲು ನಿರಾಕರಿಸಿತ್ತು. 2010ರ ಏಷ್ಯನ್‌ ಗೇಮ್ಸ್‌ ಟೂರ್ನಿಯಲ್ಲಿ ಬಾಂಗ್ಲಾದೇಶ, 2014ರ ಆವೃತ್ತಿಯಲ್ಲಿ ಶ್ರೀಲಂಕಾ (Sri Lanka) ಪುರುಷರ ತಂಡ ಚಿನ್ನದ ಪದಕ ಮುಡಿಗೇರಿಸಿಕೊಂಡಿತ್ತು. ಇದೇ ಮೊದಲ ಬಾರಿಗೆ ಏಷ್ಯನ್‌ ಗೇಮ್ಸ್‌ ಪ್ರವೇಶಿಸಿದ ಟೀಂ ಇಂಡಿಯಾ ಚೊಚ್ಚಲ ಚಾಂಪಿಯನ್‌ ಪಟ್ಟ ತನ್ನದಾಗಿಸಿಕೊಂಡಿದೆ. ಅಫ್ಘಾನಿಸ್ತಾನ ಸತತ‌ 3ನೇ ಬಾರಿಗೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ. ಇದಕ್ಕೂ ಮೊದಲು ಹ್ಯಾಂಗ್‌ಝೌನಲ್ಲಿ ನಡೆದ ಟಿ20 ಮಹಿಳಾ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ಚಿನ್ನದ ಪದಕ ಬಾಚಿಕೊಂಡಿತು.

Team india 2

ಪಿಂಗ್‌ಫೆಂಗ್ ಕ್ಯಾಂಪಸ್ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಭಾರತ, ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಎದುರಾಳಿ ಅಫ್ಘಾನಿಸ್ತಾನ ತಂಡಕ್ಕೆ ನೀಡಿತ್ತು. ಟೀಂ ಇಂಡಿಯಾ ಬೌಲರ್‌ಗಳ ಮಾರಕ ದಾಳಿ ಎದುರಿಸುವಲ್ಲಿ ವಿಫಲವಾದ ಅಫ್ಘಾನಿಸ್ತಾನ ತಂಡ 4ನೇ ಓವರ್‌ನಲ್ಲೇ 12 ರನ್‌ಗಳಿಗೆ ಪ್ರಮುಖ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇದು ಟೀಂ ಇಂಡಿಯಾಕ್ಕೆ ವರದಾನವಾಯಿತು. ಇದನ್ನೂ ಓದಿ: 20 ಓವರ್‌ಗಳಲ್ಲಿ 314 ರನ್‌, 9 ಎಸೆತಗಳಲ್ಲಿ ಸ್ಫೋಟಕ ಫಿಫ್ಟಿ; T20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ ನೇಪಾಳ

ಅಂತಿಮವಾಗಿ ಅಫ್ಘಾನಿಸ್ತಾನ 18.2 ಓವರ್‌ಗಲ್ಲಿ 5 ವಿಕೆಟ್‌ ನಷ್ಟಕ್ಕೆ 112 ರನ್‌ ಗಳಿಸಿ ಆಡುತ್ತಿದ್ದಾಗಲೇ ಮಳೆ ಕಾಟ ಶುರುವಾಯಿತು. ಮಳೆ ಬಿಡುವು ನೀಡದ ಕಾರಣ ಹಿಂದಿನ ಪಂದ್ಯಗಳ ನೆಟ್‌ ರನ್‌ರೇಟ್‌ ಆಧಾರದ ಮೇಲೆ ಭಾರತ ತಂಡವನ್ನು ವಿನ್ನರ್‌ ಎಂದು ಘೋಷಿಸಲಾಯಿತು. ಇದನ್ನೂ ಓದಿ: Asian Games 2023 ನಲ್ಲಿ ಟೀಂ ಇಂಡಿಯಾ ಪಾಲ್ಗೊಳ್ಳಲು ಬಿಸಿಸಿಐ ಗ್ರೀನ್‌ ಸಿಗ್ನಲ್‌

ಅಫ್ಘಾನ್‌ ಪರ ಶಾಹಿದುಲ್ಲಾ 49 ರನ್‌ (43 ಎಸೆತ, 2 ಸಿಕ್ಸರ್‌, 3 ಬೌಂಡರಿ), ನಾಯಕ ಗುಲ್ಬದಿನ್ ನೈಬ್ 27 ರನ್‌ ಹಾಗೂ ಅಫ್ಸರ್‌ ಝಾಝಿ 15 ರನ್‌ಗಳ ಕೊಡುಗೆ ನೀಡಿದರೆ, ಉಳಿದವರು ಟೀಂ ಇಂಡಿಯಾ ಬೌಲರ್‌ಗಳ ದಾಳಿಗೆ ತುತ್ತಾದರು. ಭಾರತದ ಪರ ಅರ್ಷ್‌ದೀಪ್‌ ಸಿಂಗ್‌, ಶಿವಂ ದುಬೆ, ಶಹಬಾಜ್ ಅಹಮದ್ ಹಾಗೂ ರವಿ ಬಿಷ್ಣೋಯಿ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article