ಹ್ಯಾಂಗ್‌ಝೌ: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023ರಲ್ಲಿ (Asian Games 2023) ಭಾರತದ ಸ್ಪರ್ಧಿಗಳ ಪದಕದ ಬೇಟೆ 6ನೇ ದಿನವಾದ ಶುಕ್ರವಾರವೂ ಮುಂದುವರಿದೆ. ಏರ್ ಪಿಸ್ತೂಲ್ ಶೂಟಿಂಗ್, ಸ್ಕ್ವಾಷ್, ಟೆನ್ನಿಸ್ ಬಳಿಕ ಅಥ್ಲೆಟಿಕ್ಸ್‌ನಲ್ಲೂ (Athletics) ಭಾರತೀಯರ ಪದಕ ಬೇಟೆ ಶುರುವಾಗಿದೆ.
1⃣st???? in #Athletics for ???????? at #AsianGames2022
Bronze???? triumph for Kiran Baliyan & our hearts swell with pride ????
Kiran delivered a mighty throw of 17.36 in her 3⃣rd attempt during the Women’s Shot Put Final Event to seize this achievement!
Let’s keep those medals rolling in!… pic.twitter.com/riOLozUVLz
— SAI Media (@Media_SAI) September 29, 2023
Advertisement
ಶುಕ್ರವಾರ ಟೆನ್ನಿಸ್‌ನಲ್ಲಿ ಭಾರತ ಕಂಚು ಗೆದ್ದ ಬಳಿಕ ಮಹಿಳೆಯರ ಶಾಟ್‌ಪುಟ್ (Women’s Shot Put) ವಿಭಾಗದಲ್ಲಿ ಕಿರಣ್ ಬಲಿಯಾನ್ (Kiran Baliyan) ಕಂಚು ಗೆದ್ದು ಸಾಧನೆ ಮಾಡಿದ್ದಾರೆ. ಇದು ಈ ಬಾರಿ ಭಾರತಕ್ಕೆ ಅಥ್ಲೆಟಿಕ್ಸ್‌ನಲ್ಲಿ ಸಂದ ಮೊದಲ ಪದಕವಾಗಿದೆ. ಈ ಮೂಲಕ 8 ಚಿನ್ನ, 12 ಬೆಳ್ಳಿ, 13 ಕಂಚಿನ ಪದಕಗಳು ಸೇರಿ ಒಟ್ಟು 33 ಪದಕಗಳೊಂದಿಗೆ ಭಾರತ ರ‍್ಯಾಂಕಿಂಗ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದೆ.
Advertisement
Bravo Boys!
Making the nation proud @ramkumar1994 and @SakethMyneni have won the Silver medal in Tennis Men’s Doubles at the #AsianGames. All my best wishes to you in your future endeavours. pic.twitter.com/CiLqMIM6uD
— Amit Shah (@AmitShah) September 29, 2023
Advertisement
ಇದಕ್ಕೂ ಮುನ್ನ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಸ್ಪರ್ಧೆಯಲ್ಲಿ ಭಾರತದ ಶೂಟರ್ ಪಲಕ್ ಚಿನ್ನ ಗೆದ್ದರೆ, ಇಶಾ ಬೆಳ್ಳಿಯ ಪದಕ ಬಾಚಿಕೊಂಡಿದ್ದರು. ಇದನ್ನೂ ಓದಿ: Asian Games 2023: ಚಿನ್ನದ ಪದಕಕ್ಕೆ ಶಾರ್ಪ್ ಶೂಟ್ – 4ನೇ ಸ್ಥಾನಕ್ಕೆ ಜಿಗಿದ ಭಾರತ
Advertisement
ಅಲ್ಲದೇ ಪುರುಷರ 50 ಮೀಟರ್ ರೈಫಲ್ 3ಪಿ ತಂಡ (ಮೂವರನ್ನೊಳಗೊಂಡ ತಂಡ) ಸ್ಪರ್ಧೆಯಲ್ಲಿ ಭಾರತ 1769 ಅಂಕಗಳೊಂದಿಗೆ ಚಿನ್ನ ಗೆದ್ದುಕೊಂಡಿತು. 1763 ಅಂಕಗಳಿಂದ ಬೆಳ್ಳಿ ಪದಕ ಹಾಗೂ 1748 ಅಂಕಗಳೊಂದಿಗೆ ಕಂಚಿನ ಪದಕ ದಕ್ಷಿಣ ಕೊರಿಯಾ ಪಾಲಾಯಿತು. ಇದನ್ನೂ ಓದಿ: ಹೈದರಾಬಾದ್ ಬಿರಿಯಾನಿ, ಬಟರ್ ಚಿಕನ್, ಲ್ಯಾಂಬ್ ಚಾಪ್ಸ್; ಭಾರತದಲ್ಲಿ ಪಾಕ್ ಕ್ರಿಕೆಟಿಗರಿಗೆ ಭರ್ಜರಿ ಬಾಡೂಟದ ಆತಿಥ್ಯ
Web Stories