ಬೀಜಿಂಗ್: ಚೀನಾದ (China) ಹ್ಯಾಂಗ್ಝೌನಲ್ಲಿ (Hangzhou) ಬುಧವಾರ ನಡೆದ ಏಷ್ಯನ್ ಗೇಮ್ಸ್ನಲ್ಲಿ (Asian Games) ಭಾರತದ ಮನು ಭಾಕರ್, ಇಶಾ ಸಿಂಗ್ ಮತ್ತು ರಿದಮ್ ಸಾಂಗ್ವಾನ್ ಮಹಿಳೆಯರ 25 ಮೀಟರ್ ಶೂಟಿಂಗ್ನಲ್ಲಿ (Women’s Pistol Team Event) ಚಿನ್ನದ ಪದಕವನ್ನು (Gold Medal) ಪಡೆದುಕೊಂಡಿದ್ದಾರೆ.
ಭಾರತ ಒಟ್ಟು 1759 ಅಂಕಗಳನ್ನು ಗಳಿಸಿದ್ದು, 1756 ಅಂಕಗಳೊಂದಿಗೆ ಚೀನಾ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದೆ. ಕೊರಿಯಾ ದೇಶ 1742 ಅಂಕಗಳೊಂದಿಗೆ ಕಂಚಿನ ಪದಕವನ್ನು ಪಡೆದುಕೊಂಡಿದೆ. ಅರ್ಹತಾ ಸುತ್ತಿನಲ್ಲಿ ಮನು 590 ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ಪಡೆದಿದ್ದು, ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಇದನ್ನೂ ಓದಿ: ಏಷ್ಯನ್ ಗೇಮ್ಸ್- 41 ವರ್ಷಗಳ ಬಳಿಕ ಈಕ್ವೆಸ್ಟ್ರಿಯನ್ ಕ್ರೀಡೆಯಲ್ಲಿ ಭಾರತಕ್ಕೆ ಚಿನ್ನ
Advertisement
Advertisement
ಇಶಾ ಸಿಂಗ್ ಕೂಡಾ 586 ಅಂಕಗಳೊಂದಿಗೆ 5ನೇ ಸ್ಥಾನವನ್ನು ಗಳಿಸಿದ್ದಾರೆ. ರಿದಮ್ 583 ಅಂಕಗಳನ್ನು ಪಡೆದುಕೊಂಡಿದ್ದಾರೆ. ಇದಕ್ಕೂ ಮುನ್ನ ನಡೆದ ಮಹಿಳಾ 50 ಮೀಟರ್ ರೈಫಲ್ಸ್ನಲ್ಲಿ ಆಶಿ ಚೌಕ್ಸೆ, ಮಾನಿನಿ ಕೌಶಿಕ್ ಮತ್ತು ಸಿಫ್ಟ್ ಕೌರ್ ಸಮ್ರಾ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಇದನ್ನೂ ಓದಿ: World Cup 2023: ಇನ್ನೂ ವೀಸಾ ಸಿಕ್ಕಿಲ್ಲ – ಪಾಕಿಸ್ತಾನ ಆಟಗಾರರಿಗೆ ಶುರುವಾಯ್ತು ಹೊಸ ಸಮಸ್ಯೆ
Advertisement
Web Stories