ರೋಯಿಂಗ್‌ನಲ್ಲಿ ಭಾರತಕ್ಕೆ ಮೂರು ಪದಕ – ಕ್ರಿಕೆಟ್‌ನಲ್ಲಿ ಫೈನಲ್‌ ಪ್ರವೇಶಿಸಿದ ಮಹಿಳೆಯರು

Public TV
1 Min Read
Indias rowing team also won a silver in mens eight event team

ಹಾಂಗ್‌ಝೋ: ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನಲ್ಲಿ (Asian Games) ಭಾರತದ (India) ಪದಕ ಬೇಟೆ ಆರಂಭವಾಗಿದೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ರಮಿತಾ ಜಿಂದಾಲ್, ಮೆಹುಲಿ ಘೋಷ್, ಆಶಿ ಚೌಕ್ಸೆ ಬೆಳ್ಳಿ ಗೆಲ್ಲುವ ಮೂಲಕ ಪದಕದ ಬೇಟೆ ಆರಂಭವಾಯಿತು.

ರೋಯಿಂಗ್ (Rowing) ಲೈಟ್‌ವೇಟ್ ಪುರುಷರ ಡಬಲ್ ಸ್ಕಲ್ಸ್‌ನಲ್ಲಿ ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್ 6:28.18 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಭಾರತಕ್ಕೆ ಎರಡನೇ ಪದಕ ತಂದುಕೊಟ್ಟಿದ್ದಾರೆ. ಬಾಬು ಲಾಲ್ ಯಾದವ್ ಮತ್ತು ಲೇಖ್ ರಾಮ್ ರೋಯಿಂಗ್‌ನಲ್ಲಿ ಕಂಚು ಗೆದ್ದಿದ್ದಾರೆ. ರೋಯಿಂಗ್ ಗುಂಪು ವಿಭಾಗದಲ್ಲಿ 8 ಮಂದಿ ಇದ್ದ ಪುರುಷರ ತಂಡ ಬೆಳ್ಳಿಯನ್ನು ಗೆದ್ದಿದೆ.  ಇದನ್ನೂ ಓದಿ: ಪ್ರಧಾನಿ ಮೋದಿಗೆ ‘ನಮೋ’ ಜೆರ್ಸಿ ಗಿಫ್ಟ್ ನೀಡಿದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್

ಮಹಿಳೆಯರ 10 ಮೀಟರ್ ಏರ್ ರೈಫಲ್ ವೈಯಕ್ತಿಕ ಸ್ಪರ್ಧೆಯಲ್ಲಿ ರಮಿತಾ ಕಂಚಿನ ಪಡೆದಿದ್ದಾರೆ.

ಸದ್ಯ ಪದಕ ಪಟ್ಟಿಯಲ್ಲಿ 10 ಚಿನ್ನ ಪದಕ ಗೆದ್ದಿರುವ ಚೀನಾ ಮೊದಲ ಸ್ಥಾನದಲ್ಲಿದ್ದರೆ 1 ಚಿನ್ನ ಗೆದ್ದಿರುವ ಹಾಂಕಾಂಗ್‌ ಎರಡನೇ ಸ್ಥಾನದಲ್ಲಿದೆ. ಒಟ್ಟು 5 ಪದಕ ಗೆದ್ದಿರುವ ಭಾರತ ಮೂರನೇ ಸ್ಥಾನದಲ್ಲಿದೆ.

ಮಹಿಳಾ ಕ್ರಿಕೆಟ್‌ನಲ್ಲಿ (Cricket) ಬಾಂಗ್ಲಾದೇಶದ ವಿರುದ್ಧ 8 ವಿಕೆಟ್‌ ಜಯ ಸಾಧಿಸಿದ ಭಾರತ ಫೈನಲ್‌ ಪ್ರವೇಶಿಸಿದೆ. ಮೊದಲು ಬ್ಯಾಟ್‌ ಮಾಡಿದ್ದ ಬಾಂಗ್ಲಾ 51 ರನ್‌ಗಳಿಗೆ ಆಲೌಟ್‌ ಆಯ್ತು. ಭಾರತ 8.2 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 52 ರನ್‌ ಹೊಡೆಯುವ ಮೂಲಕ ಜಯ ಗಳಿಸಿತು. ಶ್ರೀಲಂಕಾ ಮತ್ತು ಪಾಕಿಸ್ತಾನದ ಮಧ್ಯೆ ಇಂದು ಎರಡನೇ ಸೆಮಿಫೈನಲ್‌ ಪಂದ್ಯ ನಡೆಯಲಿದ್ದು, ವಿಜೇತರಾದವರ ಜೊತೆ ಭಾನುವಾರ ಫೈನಲ್‌ ಪಂದ್ಯ ನಡೆಯಲಿದೆ.

 

Web Stories

Share This Article